Ad Widget .

ಬುರ್ಖಾ ತೆಗೆದು ಒಳಗೆ ಬನ್ನಿ ಆಸ್ಪತ್ರೆಯಲ್ಲಿ ವಿವಾದಕ್ಕೀಡಾದ ಸೂಚನಾ ಫಲಕ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಲಾಗಿದ್ದ ಸೂಚನಾ ಫಲಕವೊಂದು ವಿವಾದಕ್ಕೀಡಾಗಿದೆ. ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂದು ಬರೆದಿರುವ ಫಲಕ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

Ad Widget . Ad Widget .

ಒಂದು ವರ್ಷದ ಹಿಂದೆಯೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ಆದರೆ ಈ ಸೂಚನಾ ಫಲಕದ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದೆ ಹರಿದುಬಿಡಲಾಗಿದೆ.

Ad Widget . Ad Widget .

ಪುತ್ತೂರಿನ ಶಾಸಕರು ಇರುವ ವಾಟ್ಸ್ ಅಪ್ ಗ್ರೂಪ್ ನಲ್ಲೂ ಈ ಪೋಸ್ಟ್ ಕಾಣಿಸಿಕೊಂಡಿತ್ತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆಯ ಸಿಬ್ಬಂದಿ ಮೇಲೆ ಒತ್ತಡ ಹೇರಲಾಯಿತು. ಒತ್ತಡದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಸೂಚನಾ ಫಲಕ ತೆರವುಗೊಳಿಸಿದರು. ಆದರೂ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳು ಬುರ್ಖಾ ತೆಗೆಯದೆ ಇಸಿಜಿ ಮಾಡೋದು ಹೇಗೆಂದು ಗೊಂದಲದಲ್ಲಿದ್ದಾರೆ.

Leave a Comment

Your email address will not be published. Required fields are marked *