Ad Widget .

ಮಗ ಪ್ರೀತಿಸಿದ್ದಕ್ಕೆ ಹೆತ್ತವ್ವನಿಗೆ ಶಿಕ್ಷೆ |ತಾಯಿಯನ್ನು ಬೆತ್ತಲೆಗೊಳಿಸಿ, ಮನೆ ಧ್ವಂಸ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ.. ಅತ್ಯಾಚಾರ ನಡೆಸಿ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ ಕೇಸ್ ಭಾರಿ ಆಕ್ರೋಶ ಕ್ಕೆ ಕಾರಣವಾಗಿತ್ತು. ಆದರೆ ಈ ಕೇಸ್ ಮಾಸುವ ಮುನ್ನವೇ ಕರುನಾಡಿನಲ್ಲು ಇಂತಹದೆ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಹೌದು ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದ ಬಸವೇಶ್ವರ ಗಲ್ಲಿಯಲ್ಲಿ ಹೀನ ಕೃತ್ಯ ನಡೆದಿದೆ. ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋಗಿದ್ದರಿಂದ ಯುವಕನ ತಾಯಿ ಜೊತೆ ಅಮಾವೀಯವಾಗಿ ನಡೆದುಕೊಳ್ಳಲಾಗಿದೆ. ಇವರ ಪುತ್ರ ದುಂಡಪ್ಪ ಅದೇ ಗ್ರಾಮದ ಪ್ರಿಯಾಂಕಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಸೋಮವಾರ ಪ್ರಿಯಾಂಕಾ ನಿಶ್ಚಿತಾರ್ಥವನ್ನು ಕುಟುಂಬಸ್ಥರು ನಿಶ್ಚಯಿಸಿದ್ದರು. ಆದ್ರೆ ಭಾನುವಾರ ರಾತ್ರಿಯೇ ದುಂಡಪ್ಪ ಜೊತೆ ಹುಡುಗಿ ಪರಾರಿಯಾಗಿದ್ದಾರೆ.
ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ದುಂಡಪ್ಪ ಮನೆಗೆ ಬಂದು ಅವರ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ನಂತರ ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿರೋ ಆರೋಪ ಸಹ ಕೇಳಿ ಬಂದಿದೆ.

Ad Widget . Ad Widget .

ಈ ವಿಷಯವನ್ನು ಕೆಲ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಾಕತಿಯ ಠಾಣೆಯ ಪೊಲೀಸರು ಪ್ರಕರಣ ಸಂಬಂಧ ಏಳು ಜನರನ್ನು ಬಂಧಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 2 ಕೆಎಸ್‌‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

Leave a Comment

Your email address will not be published. Required fields are marked *