ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ/ ನಾಳೆ ಘೋಷಣೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ (ಸೋಮವಾರ) ತೆರೆಬೀಳುವ ಸಾಧ್ಯತೆಯಿದೆ. ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಭೆ ನಡೆಯಲಿದ್ದು, ಇದರೊಂದಿಗೆ ನೂತನ ಮುಖ್ಯಮಂತ್ರಿಯ ಘೋಷಣೆಯಾಗುವ ಸಾಧ್ಯತೆ ಇದೆ.

Ad Widget ... ..

ಬಿಜೆಪಿ ಕೇಂದ್ರ ವೀಕ್ಷಕರಾದ, ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಸೋಮವಾರ ಮಧ್ಯಾಹ್ನ ಭೋಜನಕೂಟದ ಬಳಿಕ ಸಂಜೆ 4ರ ವೇಳೆಗೆ ಸಭೆ ಆರಂಭವಾಗಲಿದೆ. ರಾತ್ರಿ 7 ಗಂಟೆಯೊಳಗೆ ಹೊಸ ಸಿಎಂ ಆಯ್ಕೆ ಘೋಷಣೆಯಾಗಲಿದೆ ಎಂದು ಶಾಸಕರೊಬ್ಬರು ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *