ರೈಲ್ವೆ ವಲಯದಲ್ಲಿ ಉದ್ಯೋಗಾವಕಾಶಗಳು/ ಮೆರಿಟ್ ಆಧಾರದಲ್ಲಿ ನೇಮಕಾತಿ

ಸಮಗ್ರ ನ್ಯೂಸ್: ರೈಲ್ವೆ ವಲಯದಲ್ಲಿ ಅಪ್ರೆಂಟಿಸ್‍ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಉತ್ತರ ರೈಲ್ವೆ ವಲಯವು ಉದ್ಯೋಗಾವಕಾಶ ಕಲ್ಪಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇ.50ರಷ್ಟು ಅಂಕಗಳಿಸಿದ್ದು, ಎನ್‍ಸಿವಿಟಿ/ಎಸ್‍ಸಿವಿಟಿಯಿಂದ ಐಟಿಐ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

Ad Widget ... ..

ಕನಿಷ್ಠ 15 ವರ್ಷ, 2024 ಜನವರಿ 11ಕ್ಕೆ ಗರಿಷ್ಠ 24 ವರ್ಷ ವಯೋಮಿತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ ಆಧಾರದ ಮೇಲೆ ಮೆರಿಟ್ ಲಿಸ್ಟ್ ಬಿಡುಗಡೆಗೊಳ್ಳಲಿದ್ದು, ದಾಖಲೆ ಪರಿಶೀಲನೆ ಮೂಲಕ ಅಭ್ಯರ್ಥಿಗಳು ಆಯ್ಕೆಗೊಳ್ಳಲಿದ್ದಾರೆ.

Ad Widget

ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 100ರೂ. ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳು/ಮಹಿಳೆಯರಿಗೆ ಶುಲ್ಕ ಪಾವತಿಯಿಂದ ವಿನಾಯಿತಿಯಿದೆ. 11.01.2024 ಆನ್‍ಲೈನ್ ಅರ್ಜಿಸಲ್ಲಿಸಲು ಕೊನೇ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ http://www.rrcnr.org

Leave a Comment

Your email address will not be published. Required fields are marked *