“ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”/ ನಾಳೆ ಮೋದಿ ಚಾಲನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು “ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”ಗೆ ನಾಳೆ (ಸೋಮವಾರ) ವಿಡಿಯೊ ಕಾನ್ಸರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಕುಲಪತಿಗಳು, ಸಂಸ್ಥೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

Ad Widget ... ..

“ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್” ಉಪಕ್ರಮವು ದೇಶದ ಯುವಕರಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೆ, ಕಾರ್ಯಾಗಾರಗಳು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಯುವಕರನ್ನು ತೊಡಗಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಪಿಎಂಒ ತಿಳಿಸಿದೆ.

Ad Widget

ದೇಶಕ್ಕಾಗಿ ರಾಷ್ಟ್ರೀಯ ಯೋಜನೆಗಳು, ಆದ್ಯತೆಗಳು ಮತ್ತು ಗುರಿಗಳ ರಚನೆಯಲ್ಲಿ ಯುವ ಪೀಳಿಗೆಯನ್ನು ಸಕ್ರಿಯವಾಗಿ ತೊಡಗಿಸುವುದು ಮೋದಿಯವರ ಉದ್ದೇಶವಾಗಿದೆ ಎಂದು ಪಿಎಂಒ ಹೇಳಿದೆ.

Leave a Comment

Your email address will not be published. Required fields are marked *