Ad Widget .

ಮಡಿಕೇರಿಯಲ್ಲಿ ಯೋಧನ ಆತ್ಮಹತ್ಯೆ ಪ್ರಕರಣ|ಆರೋಪಿ ಸತ್ಯ ವಿದೇಶಕ್ಕೆ ಪರಾರಿ ಶಂಕೆ| ಸ್ವದೇಶಕ್ಕೆ ಮರಳಿದಾಕ್ಷಾಣ ಬಂಧನ ಎಸ್ ಪಿ ರಾಮರಾಜನ್ ಸ್ಪಷ್ಟನೆ

ಸಮಗ್ರ ನ್ಯೂಸ್: ಮಡಿಕೇರಿಯಲ್ಲಿ ಇತ್ತೀಚಿಗೆ ಪಂಪ್ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಧ ಬರೆದಿಟ್ಟ ಡೆತ್ ನೋಟಿನಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Ad Widget . Ad Widget .

ಇನ್ನುಳಿದಂತೆ ಆರೋಪಿಗಳಾದ ಸತ್ಯ ಹಾಗೂ ಸತೀಶ ಎಂಬುವವರನ್ನು ಬಂಧಿಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾಹಿತಿ ನೀಡಿದ್ದಾರೆ. ಈಗಾಗಲೇ ವಿಶೇಷ ತಂಡ ರಚಿಸಲಾಗಿದ್ದು, ಇವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸತ್ಯ ಎಂಬುವವರು ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದ್ದು ಅವರು ಭಾರತಕ್ಕೆ ಬಂದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದರು.

Ad Widget . Ad Widget .

ಪೊಲೀಸ್ ಸತೀಶ ಎಂದು ಡೆತ್ ನೋಟ್ನಲ್ಲಿ ನಮೂದಿಸಲಾಗಿದ್ದು ಇಲಾಖೆಯಲ್ಲಿ ಹಲವು ಸತೀಶ ಎಂಬುವರಿದ್ದು ನಿರ್ದಿಷ್ಟವಾಗಿ ಯಾವ ಸತೀಶ ಎಂಬುದನ್ನು ಅವರ ಕುಟುಂಬ ವರ್ಗದ ಸದಸ್ಯರು ಅಥವಾ ಇದರ ಬಗ್ಗೆ ತಿಳಿದಿರುವ ಸಾರ್ವಜನಿಕರು ನಮಗೆ ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಆರೋಪಿಯನ್ನು ಬಂಧಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ರಾಮರಾಜನ್ ಇಂದು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಡಗದಾಳು ರೆಸೋರ್ಟಿನಲ್ಲಿ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ದಂಪತಿಗಳ ಶವ ಪರೀಕ್ಷೆ ನಡೆಸಲಾಗಿದ್ದು, ಅವರ ಸಂಬಂಧಿಗಳು ಕೇರಳದಿಂದ ಆಗಮಿಸಿದ್ದು ಮೃತದೇಹವನ್ನು ಅವರಿಗೆ ಹಸ್ತಾಂತರಿಸಲಾಗುವುದು, ಡೆತ್ ನೋಟಿನಲ್ಲಿ ಬರೆದಂತೆ ಅವರಿಗೆ ಹಣಕಾಸಿನ ತೊಂದರೆ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಕೇರಳದ ಪತ್ತಾಂತಿಟ್ಟು ಠಾಣೆಯಲ್ಲಿ ಸಾಲದ ವಿಚಾರವಾಗಿ
ಮೊಖದ್ದಮೆ ದಾಖಲಾಗಿದೆ. ಈ ಸಂಬಂಧ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಇನ್ನೆಷ್ಟೇ ಮಾಹಿತಿ ಕಲೆ ಹಾಕಿ ಘಟನೆಗೆ ಕಾರಣ ತಿಳಿಯಬೇಕಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *