Ad Widget .

ಸ್ಟಾರ್ಟ್‍ಅಪ್‍ಗಳಿಂದ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ತಂತ್ರಜ್ಞಾನ ಉತ್ಪನ್ನಗಳು ಮತ್ತು ಪರಿಹಾರಗಳ ಖರೀದಿಗಾಗಿ ಅರ್ಹ ಸ್ಟಾರ್ಟ್‍ಅಪ್‍ಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ರಾಜ್ಯ ಸರ್ಕಾರಿ ಇಲಾಖೆಗಳಿಗೆ ಟೆಕ್ ಪ್ರಾಡಕ್ಟ್ ಅಂಡ್ ಸೆಲ್ಯೂಷನ್ ಒದಗಿಸಲು ಸ್ಟಾರ್ಟ್‍ಅಪ್‍ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Ad Widget . Ad Widget .

ಸಾಫ್ಟ್‍ವೇರ್/ಸೇವಾ ರಫ್ತುಗಳಲ್ಲಿ ರಾಜ್ಯವು ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಸರ್ಕಾರಿ ಇಲಾಖೆಗಳಲ್ಲಿ ತಂತ್ರಜ್ಞಾನ ಉತ್ಪನ್ನಗಳು ಮತ್ತು ಪರಿಹಾರಗಳ ಖರೀದಿಗಾಗಿ ಅರ್ಹ ಸ್ಟಾರ್ಟ್‍ಅಪ್‍ಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸ್ಟಾರ್ಟ್‍ಅಪ್‍ಗಳಿಗೆ ಉತ್ತಮ ಪರಿಸರ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುತ್ತಿದೆ.

Ad Widget . Ad Widget .

ಈ ನಿಟ್ಟಿನಲ್ಲಿ ಸ್ಟಾರ್ಟ್‍ಅಪ್‍ಗಳ ಹೊಸ ಚಿಂತನೆಗಳಿಗೆ ಅವಕಾಶಗಳನ್ನು ಸೃಷ್ಟಿಸುವ ನೀತಿಗೆ ಅನುಗುಣವಾಗಿ, ಕರ್ನಾಟಕ ಇನ್ನೋವೇಷನ್ ಮತ್ತು ಟೆಕ್ನಾಲಜಿ ಸೊಸೈಟಿ (ಕಿಟ್ಸ್), ಎಲೆಕ್ಟ್ರಾನಿಕ್ಸ್ ಇಲಾಖೆ, ಐಟಿ/ಬಿಟಿ ಮತ್ತು ಎಸ್‍ಟಿ ಇಲಾಖೆಯು ಆಹ್ವಾನಿಸಿರುವ ಪ್ರಸ್ತಾವನೆ ಸಲ್ಲಿಕೆಗೆ ಜನವರಿ 4 ಕೊನೆಯ ದಿನವಾಗಿದೆ.

ಆಸಕ್ತ ಸ್ಟಾರ್ಟ್‍ಅಪ್‍ಗಳು ಕಾಲ್ ಫಾರ್ ಪ್ರಪೋಸಲ್ಸ್‍ನ ಎಲೆಕ್ಟ್ರಾನಿಕ್ ಪ್ರತಿಯನ್ನು ಡೌನ್‍ಲೋಡ್ ಮಾಡಿ, ಈ ಪ್ರಸ್ತಾವನೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ https://kppp.karnataka.gov.in/ ನಲ್ಲಿ ಅಪ್‍ಲೋಡ್ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ https://kppp.karnataka.gov.in/ ಮತ್ತು https://itbtst.karnataka.gov.in/ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *