Ad Widget .

ಶ್ರೀರಾಮ ಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧ/ ಡಿ.15 ರಂದು ಮೂರ್ತಿ ಆಯ್ಕೆ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶ್ರೀರಾಮ ಲಲ್ಲಾನ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ದೀಪಾಲಂಕಾರದ ಕೆಲಸವೂ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಮೂರು ರಾಮಲಲ್ಲಾ ವಿಗ್ರಹಗಳಲ್ಲಿ ಯಾವುದನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು ಎಂಬುದರ ಕುರಿತು ರಾಮಮಂದಿರ ಟ್ರಸ್ಟ್ ಡಿಸೆಂಬರ್ 15 ರಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Ad Widget . Ad Widget .

ಕರ್ನಾಟಕ ಮತ್ತು ರಾಜಸ್ಥಾನದಿಂದ ತರಿಸಲಾದ ಎರಡು ಬಂಡೆಗಳಿಂದ ಮೂರು ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಶೇಕಡಾ 90 ರಷ್ಟು ವಿಗ್ರಹಗಳು ಸಿದ್ಧವಾಗಿದ್ದು, ಗಣೇಶ್ ಭಟ್, ಅರುಣ್ ಯೋಗಿರಾಜ್ ಮತ್ತು ಸತ್ಯನಾರಾಯಣ ಪಾಂಡೆ ಅವರು ವಿಗ್ರಹಗಳನ್ನು ಕೆತ್ತುತ್ತಿದ್ದಾರೆ. ಈ ಮೂರು ವಿಗ್ರಹಗಳಲ್ಲಿ ಡಿ.15 ರಂದು ಉತ್ತಮವಾದ ಮೂರ್ತಿಯನ್ನು ಆಯ್ಕೆ ಮಾಡಿ ದೇವಾಲಯದ ಗರ್ಭಗುಡಿಯಲ್ಲಿ ಆ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಚಂಪತ್ ರೈ ಹೇಳಿದ್ದಾರೆ.

Ad Widget . Ad Widget .

ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಶಂಕುಸ್ಥಾಪನೆಗೆ ಸಿದ್ಧವಾಗಲಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಂದಾಜು 6,000 ಜನರಿಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ (ಪ್ರತಿಷ್ಠಾಪನೆ ಸಮಾರಂಭ)ಗೆ ಪತ್ರಗಳನ್ನು ಕಳುಹಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಜನವರಿ 2024 ರ ಮೂರನೇ ವಾರದಲ್ಲಿ, ಪ್ರಧಾನಿ ಮೋದಿಯವರ ಕೈಯಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಅದರ ಮೂಲ ಸ್ಥಳದಲ್ಲಿ ಸ್ಥಾಪಿಸಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಈ ಹಿಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *