Ad Widget .

ಸುಳ್ಯ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ| ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ

ಸಮಗ್ರ ನ್ಯೂಸ್: ಸುಳ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಾಗೂ ಮಾಹಿತಿ ಕಾರ್ಯಗಾರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿ. 9ರಂದು ನಡೆಯಿತು.

Ad Widget . Ad Widget .

ಕೆಲಸದ ಒತ್ತಡದ ನಡುವೆ ನೌಕರರ ಆರೋಗ್ಯ ಕಾಳಜಿ ಮಾಹಿತಿ ಕಾರ್ಯಗಾರವನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ. ಇ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಇಲಾಖಾ ನಿವೃತ್ತ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಯವರು ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಸಿದ್ಧತೆ ಇದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ, ಒಂದು ಕೆಲಸವನ್ನು ತುಂಬ ಚೆನ್ನಾಗಿ ಸುಸೂತ್ರವಾಗಿ ಸಿದ್ಧತೆ ಮಾಡುವುದು ಮಾತ್ರವಲ್ಲದೆ ಅದನ್ನು ಅನುಷ್ಠಾನ ಮಾಡ್ಬೇಕು. ಆಗ ಅದು ಸಕ್ಸೆಸ್ ಆಗ್ತದೆ, ಸಮಸ್ಯೆಯ ಬಗ್ಗೆ ಯೋಚನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಅದಕ್ಕೆ ಪರಿಹಾರವನ್ನು ಹುಡುಕಬೇಕು, ಒತ್ತಡ ರಹಿತ ಜೀವನ ನಡೆಸಬೇಕು, ಮನೆ ವಾತಾವರಣ ಹಾಗೂ ಕಚೇರಿಯ ವಾತಾವರಣ ಚೆನ್ನಾಗಿ ಇದ್ದರೆ ಒತ್ತಡ ರಹಿತ ಜೀವನ ಸಾಧ್ಯ., ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಆದಷ್ಟು ಪುಸ್ತಕ ಓದುವ ಹವ್ಯಾಸ ವನ್ನು ರೂಡಿ ಮಾಡಿಕೊಳ್ಳಬೇಕು, ಮೌಲ್ಯಯುತವಾದ ಪುಸ್ತಕವನ್ನು ಓದುವುದರಿಂದ,ಸಂಗೀತ, ಯಕ್ಷಗಾನ ಹೀಗೆ ಹಲವು ಬಗೆಯ ಹವ್ಯಾಸ ರೂಡಿಸರೆ ಮನಸ್ಸು ನಿರಾಳ ಆಗುತ್ತದೆ. ದಿನಾಲೂ ವ್ಯಾಯಮ ಮಾಡುವುದರಿಂದ ಶರೀರ ಹುಮ್ಮಸ್ಸಿನಿಂದ ಇರುತ್ತದೆ. ಇನ್ನು ಪೋಷಕಾಂಶ ನೀಡುವ ಆಹಾರವನ್ನು ಸೇವನೆ ಮಾಡಬೇಕು, ಸಾರ್ವಜನಿಕ ಸಂಪರ್ಕವಿರಬೇಕು ಎಂದು ಹೇಳಿದರು.

Ad Widget . Ad Widget .

ಕ.ರಾ.ಸ. ಸಂಘದ ಅಧ್ಯಕ್ಷ ತೀರ್ಥರಾಮ ಹೆಚ್.ಬಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯದ ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಹಾಗೂ ಸುಳ್ಯ ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ. ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಧನಲಕ್ಷ್ಮೀ ಕುದ್ಪಾಜೆ ಪ್ರಧಾನ ಕಾರ್ಯದರ್ಶಿ, ಪೃಥ್ವಿ ಕುಮಾರ್ ರಾಜ್ಯ ಪರಿಷತ್ ಸದಸ್ಯರು, ಮಹವೇವ ಸ್ವಾಮಿ ಎಂ ಖಾಜಾಂಜಿ , ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಂಡಾಧಿಕಾರಿ ಮಂಜುನಾಥ ಜಿ. ಅವರು ನಿವೃತ್ತ ನೌಕರರಿಗೆ ಹಾಗೂ ಕ್ರೀಡಾ ವಿಜೇತರಿಗೆ, ಸಾಧಕರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ. ಇ , ಸುಳ್ಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿತಿನ್ ಪ್ರಭು ಕೆ. ಅವರು ಭಾಗಿಯಾದರು. ಈ ಸಂದರ್ಭದಲ್ಲಿ ಸುಳ್ಯದ ಎಲ್ಲಾ ಪದನಿಮಿತ್ತ ನೌಕರರ ಸಂಘಗಳ ಅಧ್ಯಕ್ಷರುಗಳು ಮತ್ತು ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಬಿ., ಖಜಾಂಜಿ ಮಹದೇವಸ್ವಾಮಿ ಎಮ್., ರಾಜ್ಯಪರಿಷತ್‌ ಸದಸ್ಯ ಪೃಥ್ವಿಕುಮಾರ್ ಟಿ. ಹಾಗೆಯೇ ಸರಕಾರಿ ನೌಕರ ಸಂಘದ ಎಲ್ಲಾ ಸದಸ್ಯರು ಮತ್ತು ವಿವಿಧ ಹುದ್ದೆಗಳ ಸರಕಾರಿ ನೌಕರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಧನಲಕ್ಷ್ಮೀ ಕುದ್ದಾಜೆ ವರದಿ ಮಂಡಿಸಿ, ಕೋಶಾಧಿಕಾರಿ ಮಹದೇವಸ್ವಾಮಿ ಎಮ್. ಲೆಕ್ಕಪತ್ರ ಮಂಡಿಸಿ, ಆರೋಗ್ಯ ಇಲಾಖೆಯ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿ, ಭವಾನಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 175 ನೌಕರರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *