ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕರಾವಳಿಯ ನಲ್ಕೆ ಸಮುದಾಯದವರು ದೈವಕೋಲದಲ್ಲಿ ಭಾಗಿಯಾಗಿ ಪಾರಂಪರಿಕ ಆಚರಣೆ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ತರಾಟೆಗೆ ತೆಗೆದುಕೊಂಡು ಗೌಡ ಮತ್ತು ನಲ್ಕೆ ಸಮುದಾಯಕ್ಕೆ ಅವಹೇಳನಕಾರಿ ಮಾತನಾಡಿದ್ದಕ್ಕೆ ಕ್ರುದ್ದರಾದ ಕರಾವಳಿಯ ಗೌಡ ಸಮುದಾಯ ಯುವಕನೋರ್ವನಿಗೆ ತರಾಟೆ ತೆಗೆದುಕೊಂಡ ಘಟನೆ ವೈರಲ್ ಆಗುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ದೈವ ನೇಮೋತ್ಸವ ಜರಗಿತ್ತು. ಈ ಬಗ್ಗೆ ಕರಾವಳಿ ಭಾಗ ಹೊರತಾದ ಪ್ರದೇಶದಲ್ಲಿ ನೇಮೋತ್ಸವಕ್ಕೆ ದೈವ ಕಟ್ಟಿದ ವಿಚಾರ ಮತ್ತು ದೈವ ಪಾತ್ರಿ ದೈವಕ್ಕೆ ಅಪಚಾರ ವೆಸಗಿದ್ದಾಗಿ ಮಂಗಳೂರಿನ ಯುವಕ ದೀಪೇಶ್ ಕೋಟ್ಯಾನ್ ಎಂಬವರು ದೂರವಾಣಿ ಮೂಲಕ ಸುಳ್ಯ ತಾಲೂಕಿನ ನಲ್ಕೆ ಸಮುದಾಯದ ಒಬ್ಬರಿಗೆ ತರಾಟೆ ತೆಗೆದುಕೊಂಡರು. ಈ ಸಂದರ್ಭ ಯುವಕ ದೀಪೇಶ್ ಮಾತಿನ ನಡುವೆ ” ಘಟ್ಟದ ಗೌಡರಿಗೆ ಜನಿಸಿದವರು ನೀವಾ ..”ಎನ್ನುವ ಅರ್ಥದ ಅವಹೇಳನಕಾರಿ ಮಾತು ಮತ್ತು ಇನ್ನುಮುಂದೆ ಹಾಗೆ ಮಾಡಿದಲ್ಲಿ ಸೊಂಟ ಮುರಿಯುವುದಾಗಿ ಜೀವ ಬೆದರಿಕೆ ಒಡ್ಡಿದ್ದ ಅಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಕರಾವಳಿಯ ಒಕ್ಕಲಿಗ ಸಮುದಾಯ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಯುವಕನ ದೂರವಾಣಿ ಸಂಖ್ಯೆ ಸಂಗ್ರಹಿಸಿ ಯುವಕನ ಪೊಟೊ ಸಮೇತ ದೂರವಾಣಿ ಸಂಖ್ಯೆ ನಮೂದಿಸಿ ಜಾಲತಾಣದಲ್ಲಿ ಹರಿಯಬಿಟ್ಟರು. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ದೂರವಾಣಿ ಕರೆ ಮಾಡಿ ತೀವ್ರ ತರಾಟೆ ತೆಗೆದುಕೊಂಡು ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ದೀಪೇಶ್ ಕರೆಗೆ ಬೆದರಿದ ದೈವಪಾತ್ರಿ ಆರಂಭದಲ್ಲಿ ಸ್ಥಳೀಯ ಮುಖಂಡರ ಮನವಿಗೂ ದೂರವಾಣಿ ಸಂಖ್ಯೆಯನ್ನು ನೀಡಲು ಹಿಂದೇಟು ಹಾಕಿದ್ದಾರೆನ್ನಲಾಗಿದ್ದು ದಲಿತ ಸಮುದಾಯದ ನಿಂದನೆ ಮತ್ತು ಜೀವ ಬೆದರಿಕೆಗೆ ದೀಪೇಶ್ ವಿರುದ್ದ ಪೊಲಿಸ್ ದೂರು ನೀಡುವಂತೆ ಜಾಲತಾಣಗಳಲ್ಲಿ ಆಕ್ರೋಶಿತರಾಗಿ ಚರ್ಚಿಸಲಾರಂಬಿಸಿದರು.
ದೈವಪಾತ್ರಿ ಬೆಳ್ಳಾರೆ – ಪಂಜ ಪರಿಸರದವರೆನ್ನಲಾಗುತ್ತಿದೆ. ಇದೀಗ ದೈವ ಮಧ್ಯಸ್ಥ ಅಜಿತ್ ಐವರ್ನಾಡು ಅವರ ಜೊತೆಗೂ ಬೇಜವಾಬ್ದಾರಿಯಾಗಿ ಹೇಳಿಕೆ ನೀಡಿರುವ ದೀಪೇಶ್ ರ ಆಡಿಯೋ ವೈರಲ್ ಆಗುತ್ತಿದ್ದು, ಸಮುದಾಯಗಳ ಅವಹೇಳನಕ್ಕೆ ಕಾರಣವಾಗುತ್ತಿದೆ.