Ad Widget .

ಸುಳ್ಯ: ಹಲ್ಲೆ ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸಿದ ಸುಳ್ಯ ನ್ಯಾಯಾಲಯ

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Ad Widget . Ad Widget .

2018ರ ನವೆಂಬರ್ 11 ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಪೇರಾಲ್ ಎಂಬಲ್ಲಿ ಮಾಜಿ ಸೈನಿಕರಾದ ಅಡ್ಡಂತಡ್ಕ ದೇರಣ್ಣ ಗೌಡರು ಪೇರಾಲು ಅಂಚೆ ಕಚೇರಿಯ ಬಳಿ ರಸ್ತೆಯಲ್ಲಿ ನಿಂತುಕೊಂಡಿದ್ದ ಸಮಯ ಆರೋಪಿ ನಾಗೇಶನು ಹಿಂಬದಿಯಿಂದ ಬಂದು ಏಕಾಏಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಅವರಿಗೆ ತಲೆಗೆ ಹೊಡೆದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಒಡ್ಡಿದ್ದರು.

Ad Widget . Ad Widget .

ಹಲ್ಲೆಯ ಪರಿಣಾಮ ದೇರಣ್ಣ ಗೌಡರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ದೇರಣ್ಣ ಗೌಡರು ಪಂಚಾಯತ್ ಸದಸ್ಯರಾಗಿದ್ದ ಸಮಯದಲ್ಲಿ ಮಂಡೆಕೋಲು ಪಂಚಾಯತ್ ಗೆ ಕಾಯ್ದಿರಿಸಿದ ಜಾಗವನ್ನು ಆರೋಪಿಯು ಆತನ ಹೆಸರಿಗೆ ಅಕ್ರಮವಾಗಿ ಮಾಡಿಸಿಕೊಂಡಿರುವುದಾಗಿ ಮಾನ್ಯ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿರಂತರ ಹೋರಾಟ ನಡೆಸುತ್ತಿರುವ ಕಾರಣಕ್ಕೆ ದ್ವೇಷಗೊಂಡು ಈ ಕೃತ್ಯ ನಡೆಸಿದ್ದಾಗಿದೆ ಎಂದು ಆರೋಪಿಯ ವಿರುದ್ಧ ಕಲಂ 504, 324,506 ಭಾ.ದಂ.ಸಂ ಅನ್ವಯ ಶಿಕ್ಷರ್ಹಾ ಅಪರಾಧ ಎಸಗಿರುತ್ತಾರೆ ಎಂಬುದಾಗಿ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಬಿ.ಮೋಹನ್ ಬಾಬುರವರು ಕಲಂ 504, 506 ರಲ್ಲಿ ಆರೋಪ ಸಾಬೀತಾಗದೆ ಆ ಆರೋಪದಿಂದ ದೋಷಮುಕ್ತಗೊಳಿಸಿ ಕಲಂ 324 ರಡಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿರುತ್ತದೆ ಎಂದು ಶಿಕ್ಷೆ ವಿಧಿಸಿರುತ್ತಾರೆ.. ಕಲಂ 324 ರ ಅಪರಾಧಕ್ಕೆ ನ್ಯಾಯಾಲಯವು ರೂ.10,000 ಜುಲ್ಮಾನೆ ವಿಧಿಸಿ, ಜುಲ್ಮಾನೆ ಕಟ್ಟದ ಪಕ್ಷದಲ್ಲಿ 6 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ಈ ದಿನ ಆದೇಶಿಸಿರುತ್ತದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ಪ್ರಕರಣ ನಡೆಸಿರುತ್ತಾರೆ.

Leave a Comment

Your email address will not be published. Required fields are marked *