Ad Widget .

ಶಾಂಪೂ ಹಚ್ಕೊಂಡ್ರೂ ಲಿವರ್ ಡ್ಯಾಮೇಜ್ ಆಗುತ್ತಂತೆ!! ಇಲ್ಲಿದೆ ಆಘಾತಕಾರಿ ವರದಿ

ಸಮಗ್ರ ನ್ಯೂಸ್: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾದ ಕಾಸ್ಮೆಟಿಕ್ ಉದ್ಯಮವು ಪ್ರತಿ ವರ್ಷ 6%ರಷ್ಟು ಹೆಚ್ಚಾಗುತ್ತಿರುತ್ತದೆ. ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಿನಕ್ಕೊಂದು ಬ್ರಾಂಡ್‌ಗಳು ಮಾರುಕಟ್ಟೆಗೆ ಬರುತ್ತದೆ. ಹೇರ್‌ ಕೇರ್‌ ವಸ್ತುಗಳ ತಯಾರಿಕಾ ಉದ್ಯಮವು ಕೂಡ ಹೀಗೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬಳಕೆದಾರರ ಸಂಖ್ಯೆಯೂ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿಗೆ ವಿಜ್ಞಾನಿಗಳ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ.

Ad Widget . Ad Widget .

ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಶ್ಯಾಂಪೂಗಳು ಹಾಗೂ ಹೇರ್‌ಕೇರ್‌ ಉತ್ಪನ್ನಗಳು ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೆ ಅದರಲ್ಲಿನ ಬೃಹತ್ ಪ್ರಮಾಣದ ರಾಸಾಯನಿಕವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

Ad Widget . Ad Widget .

ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿನ ರಾಸಾಯನಿಕಗಳು ನಮ್ಮ ಕೂದಲಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅತ್ಯಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ. ಇದನ್ನು ಉಸಿರಾಡುವುದರಿಂದ ಶ್ವಾಸಕೋಶ ಹಾಗೂ ನರಮಂಡಲದ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ ಲಿವರ್‌ ಡ್ಯಾಮೇಜ್‌ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಕೂದಲ ರಕ್ಷಣೆಯ ಉತ್ಪನ್ನಗಳಾದ ಶಾಂಪೂಗಳಲ್ಲಿನ ರಾಸಯನಿಕಗಳ ಮೇಲೆ ಈ ಅಧ್ಯಯನ ನಡೆದಿದ್ದು, ಹೇರ್ ಜೆಲ್‌ಗಳು, ಎಣ್ಣೆಗಳು, ಕ್ರೀಮ್‌ಗಳು ಮೇಲೆ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ವಿಜ್ಞಾನಿಗಳ ಪ್ರಕಾರ, ಕರ್ಲಿಂಗ್ ಐರನ್‌ಗಳು ಮತ್ತು ಹೇರ್ ಸ್ಟ್ರೈಟ್‌ನರ್‌ಗಳಂತಹ ಸಮಯದಲ್ಲಿ ಹೆಚ್ಚಿನ ಶಾಖ ಹಾಗೂ ವಿವಧ ಉತ್ಪನ್ನಗಳ ಬಳಕೆಯಿಂದ ರಾಸಾಯನಿಕಗಳು ಹೆಚ್ಚಾಗಿ ಉಂಟಾಗುತ್ತದೆ.

ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದು, ಇಂತಹ ಅಪಾಯಕಾರಿ ಉತ್ಪನ್ನಗಳನ್ನು ಬಳಸದಿರುವುದು ಉತ್ತಮ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ಮುಖ್ಯವಾಗಿ ಶಾಂಪೂ ಬಳಸುವ ಸಂಧರ್ಭದಲ್ಲಿ ಬಾತ್ರೂಮ್ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡುವುದರಿಂದ ಶೇಕಡಾ 90ರಷ್ಟು ಇದರ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಸಹ ತಿಳಿದು ಬಂದಿದೆ.

Leave a Comment

Your email address will not be published. Required fields are marked *