ಸಮಗ್ರ ನ್ಯೂಸ್: ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಮತ್ತು ಲಭ್ಯತೆ ಸುಧಾರಿಸಲು 2024ರ ಮಾರ್ಚ್ 31ರವರೆಗೂ ರಫ್ತು ಮಾಡುವುದಕ್ಕೆ ನಿಷೇಧ ಹೇರಲಾಗಿದೆ ಎಂದು ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು ಪ್ರಕಟಣೆ ಹೊರಡಿಸಿದ್ದು, ಈ ಆದೇಶ ಹೊರಬೀಳುವುದಕ್ಕೂ ಮುನ್ನ ಆಗಿರುವ ರಫ್ತು ಒಪ್ಪಂದಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಚಿಲ್ಲರೆ ಮಾರಾಟದ ದರ ಕೆ.ಜಿಗೆ 70-80ರವರೆಗೆ ಇದೆ. ಈರುಳ್ಳಿ ಬೆಲೆ ಹೆಚ್ಚಿರುವ ರಾಜ್ಯಗಳಲ್ಲಿ ತನ್ನ ಬಳಿ ಇರುವ ಹೆಚ್ಚುವರಿ ದಾಸ್ತಾನನ್ನು ಕೆ.ಜಿಗೆ 25ರಂತೆ ಮಾರಾಟ ಮಾಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ 1ರಿಂದ ಆಗಸ್ಟ್ 4ರವರೆಗಿನ ಅವಧಿಯಲ್ಲಿ 9.75 ಲಕ್ಷ ಟನ್‍ನಷ್ಟು ಈರುಳ್ಳಿ ರಫ್ತು ಮಾಡಲಾಗಿದೆ.