ಯುಪಿಐ ವಹಿವಾಟು ಮಿತಿ/ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಳ

ಸಮಗ್ರ ನ್ಯೂಸ್: ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿನ ಯುಪಿಐ ವಹಿವಾಟು ಮಿತಿಯನ್ನು ಒಂದು ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮೂರು ದಿನಗಳ ಹಣಕಾಸು ನೀತಿ ಸಭೆಯಲ್ಲಿ ಈ ಮಹತ್ವದ ಮಾಹಿತಿ ನೀಡಿದೆ.

Ad Widget ... ..

ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಯುಪಿಐ ವಹಿವಾಟು ಮಿತಿಯನ್ನು ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಇದರಿಂದ ಹೆಚ್ಚಿನ ಮೊತ್ತದ ಆನ್‍ಲೈನ್ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಸಹಾಯವಾಗುತ್ತದೆ.

Ad Widget

ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ಯುಪಿಐ ವಹಿವಾಟಿನ ವಿವಿಧ ವರ್ಗಗಳ ಮಿತಿಗಳನ್ನು ಪರಿಶೀಲನೆ ಮಾಡುತ್ತದೆ. ಭಾರತದಲ್ಲಿ ಚಿಲ್ಲರೆ ಡಿಜಿಟಲ್ ಪಾವತಿಗಳಿಗೆ ಇದು ಹೆಚ್ಚು ಜನಪ್ರಿಯವಾಗಿದೆ.

Leave a Comment

Your email address will not be published. Required fields are marked *