ಸಮಗ್ರ ನ್ಯೂಸ್: ಪ್ರೋ ಕಬಡ್ಡಿ ಲೀಗ್‍ನ 10ನೇ ಆವೃತ್ತಿಯ 2ನೇ ಚರಣದ ಆತಿಥ್ಯಕ್ಕೆ ಗಾರ್ಡನ್ ಸಿಟಿಯ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದ್ದು, ಕ್ರಿಕೆಟ್ ಪಂದ್ಯಗಳನ್ನು ನೋಡಿ ಮನ ತಣಿಸಿಕೊಂಡಿದ್ದ ಕ್ರೀಡಾಭಿಮಾನಿಗಳಿಗೆ ದೇಸೀಯ ಕ್ರೀಡೆಯ ರೋಚಕತೆ ಸವಿಯುವ ಅವಕಾಶ ದೊರಕಲಿದೆ. ಮೂರು ವರ್ಷಗಳ ಬಳಿಕ ಸಂಪೂರ್ಣ ಕ್ಯಾರವಾನ್ ಮಾದರಿಯಲ್ಲಿ ಮರಳಿರುವ ಪ್ರೋ ಕಬಡ್ಡಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದೆಹಲಿ ಸೆಣಸಾಟ ನಡೆಸಲಿವೆ.
ಕಳೆದ ಬಾರಿ ಉಪಾಂತ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ನಿರಾಸೆ ಆನುಭವಿಸಿದ್ದ ಬೆಂಗಳೂರು ತಂಡ, ಹಾಲಿ ಆವೃತ್ತಿಯಲ್ಲಿ ಯುವ ಹಾಗೂ ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿರುವ ಬೆಂಗಳೂರು ತಂಡ ಮತ್ತೆ ಟ್ರೋಫಿ ಜಯಿಸುವ ವಿಶ್ವಾಸವನ್ನು ರೈಡರ್ ವಿಕಾಸ್ ಕಂಡೋಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಅಹಮದಾಬಾದ್‍ನ ಚರಣದ ಮೊದಲೆರಡು ಪಂದ್ಯದಲ್ಲಿ ಸೋಲು ಅನುಭವಿಸಿದೆ. ತವರಿನ ಅಭಿಮಾನಿಗಳ ಎದುರು ಗೆಲುವಿನ ಖಾತೆ ತೆರೆಯುವ ಆತ್ಮವಿಶ್ವಾಸದಲ್ಲಿದ್ದು, ಹಿಂದಿನ ಪಂದ್ಯದ ವೈಫಲ್ಯಗಳನ್ನು ತಿದ್ದಿ ಬುಲ್ಸ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆ ಇದೆ. ಯುವ ಆಟಗಾರ ಸೌರಭ್ ನಂದಲ್ ತಂಡವನ್ನು ಮುನ್ನಡೆಸಲಿದ್ದು, ರೈಡರ್ ರಕ್ಷಿತ್ ತಂಡದಲ್ಲಿರುವ ಏಕೈಕ ರಾಜ್ಯದ ಆಟಗಾರ ಎನಿಸಿದ್ದಾರೆ.
ಬೆಂಗಳೂರ ಬುಲ್ಸ್‍ನ ತವರಿನ ಮೊದಲ ಪಂದ್ಯಕ್ಕೆ ನಟ, ರಾಯಭಾರಿ ಸುದೀಪ್ ಹಾಜರಿರಲಿದ್ದು, ಆತಿಥೇಯ ತಂಡವನ್ನು ಹುರಿದಂಬಿಸಲಿದ್ದಾರೆ. ಕಳೆದ ಆವೃತ್ತಿಯಲ್ಲೂ ತಂಡದ ರಾಯಭಾರಿ ಆಗಿದ್ದ ಸುದೀಪ್ ಈ ಬಾರಿಯೂ ದೇಸೀಯ ಕ್ರೀಡೆಗೆ ಬೆಂಬಲ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಪಂದ್ಯಾಟಗಳು
ಡಿ.8 ಬೆಂಗಳೂರು ಬುಲ್ಸ್- ದಬಾಂಗ್ ದೆಹಲಿ
ಪುಣೇರಿ ಪಲ್ಟನ್- ಯು ಮುಂಬಾ
ಡಿ.9 ಬೆಂಗಳೂರು ಬುಲ್ಸ್- ಹರಿಯಾಣ ಸ್ಟೀಲರ್ಸ್
ಯುಪಿ ಯೋಧಾಸ್-ತೆಲುಗು ಟೈಟಾನ್ಸ್
ಡಿ.10 ಬೆಂಗಾಲ್ ವಾರಿಯರ್ಸ್-ತಮಿಳ್ ತಲೈವಾಸ್
ದಬಾಂಗ್ ದೆಹಲಿ-ಹರಿಯಾಣ ಸ್ಟೀಲರ್ಸ್
ಡಿ.11 ಜೈಪುರ ಪಿಂಕ್ ಪ್ಯಾಂಥರ್ಸ್-ಗುಜರಾತ್ ಜೈಂಟ್ಸ್
ಬೆಂಗಳೂರು ಬುಲ್ಸ್-ಯುಪಿ ಯೋಧಾಸ್
ಡಿ.12 ಬೆಂಗಾಲ್ ವಾರಿಯರ್ಸ್-ಪಟನಾ ಪೈರೇಟ್ಸ್
ಡಿ.13 ತಮಿಳ್ ತಲೈವಾಸ್-ತೆಲುಗು ಟೈಟಾನ್ಸ್
ಬೆಂಗಳೂರು ಬುಲ್ಸ್-ಜೈಪುರ ಪಿಂಕ್ ಪ್ಯಾಂಥರ್ಸ್