Ad Widget .

ಪಾನ್ ಮಸಾಲಾ ಬ್ರಾಂಡ್ ವಿಮಲ್ ಜಾಹೀರಾತು/ ಇನ್ಮುಂದೆ ಕಾಣಿಸಿಕೊಳ್ಳಲ್ಲ ಅಕ್ಷಯ್ ಕುಮಾರ್

ಸಮಗ್ರ ನ್ಯೂಸ್: ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ನಟಿಸಿರುವ ಪಾನ್ ಮಸಾಲಾ ಬ್ರಾಂಡ್ ವಿಮಲ್ ನೊಂದಿಗೆ ಸೂಪರ್‍ಸ್ಟಾರ್ ಅಕ್ಷಯ್ ಕುಮಾರ್ ಒಪ್ಪಂದ ಕೊನೆಗೊಂಡಿದ್ದು, ಇದನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ.

Ad Widget . Ad Widget .

ಏಪ್ರಿಲ್ 2022 ರಲ್ಲಿ ವಿಮಲ್ ಎಲೈಚಿ ಜಾಹೀರಾತು ಪ್ರಸಾರವಾದ ನಂತರ ಅಕ್ಷಯ್ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದರು ಮತ್ತು ನಂತರ ಅಭಿಮಾನಿಗಳಿಗೆ ಕ್ಷಮೆಯಾಚಿಸಿದರು. ಆದರೂ ಅವರು ನಿರಂತರವಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ನಂತರ ಅಕ್ಷಯ್ ಬ್ರಾಂಡ್‍ನೊಂದಿಗಿನ ಒಪ್ಪಂದ ಕೊನೆಗೊಳಿಸಲು ನಿರ್ಧರಿಸಿದ್ದರು.

Ad Widget . Ad Widget .

ಈ ಕುರಿತು ತಮ್ಮ ಇನ್ಸಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಅಕ್ಷಯ್ “ನನ್ನನ್ನು ಕ್ಷಮಿಸಿ. ನನ್ನ ಎಲ್ಲಾ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಿಮ್ಮ ಪ್ರತಿಕ್ರಿಯೆ ನನ್ನ ಮೇಲೆ ಆಳವಾಗಿ ಪರಿಣಾಮ ಬೀರಿದೆ. ನಾನು ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಬೆಂಬಲಿಸುವುದಿಲ್ಲ. ವಿಮಲ್ ಎಲೈಚಿ ಅವರೊಂದಿಗಿನ ನನ್ನ ಒಪ್ಪಂದದ ದೃಷ್ಟಿಯಿಂದ ನಾನು ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ” ಎಂದಿದ್ದಾರೆ

‘ಎಲ್ಲ ನಮ್ರತೆಯಿಂದ ಈ ಜಾಹೀರಾತನ್ನು ಬಿಟ್ಟಿದ್ದೇನೆ.ಇದರಿಂದ ದುಡಿದ ಹಣವನ್ನು ಸಮಾಜದ ಕೆಲಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಬ್ರಾಂಡ್ ಒಪ್ಪಂದದ ಅವಧಿಯವರೆಗೆ ಜಾಹೀರಾತು ತೋರಿಸಬಹುದು. ಅದು ನನ್ನ ನಿಯಂತ್ರಣದಲ್ಲಿಲ್ಲ, ಆದರೆ ನಾನು ಮುಂದೆ ಹೋಗುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಎಚ್ಚರವಾಗಿರಲು ಭರವಸೆ ನೀಡುತ್ತೇನೆ. ಪ್ರತಿಯಾಗಿ, ನಾನು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇನೆ’ ಎಂದು ಬರೆದಿದ್ದರು.

Leave a Comment

Your email address will not be published. Required fields are marked *