Ad Widget .

ಸುಳ್ಯ: ದಿ. ಸೌಜನ್ಯಳ ಬ್ಯಾನರ್ ತೆರವುಗೊಳಿಸುವಂತೆ ಮನವಿ| ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ತಾಲೂಕು ಸಂಯೋಜಕ ಯನ್.ಟಿ. ವಸಂತ್ ಖಂಡನೆ

ಸಮಗ್ರ ನ್ಯೂಸ್: ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಗುತ್ತಿಗಾರು ಸಮಿತಿಯಿಂದ 16ರಂದು ನಡೆಯಲಿರುವ ಬೃಹತ್ ಪ್ರತಿಭಟನೆ ಕಾರ್ಯಕ್ರಮದ ಬ್ಯಾನರ್ ತೆರವುಗೊಳಿಸುವಂತೆ ತಾಲೂಕು ಕಾರ್ಯನಿರ್ವಾಹಣಧಿಕಾರಿಗಳಿಗೆ ಜನ ಜಾಗೃತಿ ವೇದಿಕೆಯಿಂದ ಮನವಿ ಮಾಡಿರುವುದನ್ನು ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಸುಳ್ಯ ತಾಲೂಕು ಸಂಯೋಜಕ ಯನ್.ಟಿ. ವಸಂತ್ ಖಂಡಿಸಿದ್ದಾರೆ.

Ad Widget . Ad Widget .

12 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ, ಕೊಲೆ ವಿಚಾರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತ ಬಂದಿದ್ದು, ಜನ ಸಾಮಾನ್ಯರು ಪಕ್ಷಾತೀತ, ಜಾತ್ಯತೀತ ವಾಗಿ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಬ್ಬ ಹೆಣ್ಣು ಮಗಳ ನ್ಯಾಯಕ್ಕಾಗಿ 12 ವರ್ಷಗಳಿಂದ ಮಹೇಶ್ ಶೆಟ್ಟಿ ಅವರು ಹೋರಾಟ ಮಾಡುತ್ತ ಬಂದಿದ್ದಾರೆ. ಇದೀಗ ಗುತ್ತಿಗಾರಿನಲ್ಲಿ ನಡೆಯುವ ಪ್ರತಿಭಟನೆ ಹತ್ತಿಕ್ಕುವ ದೃಷ್ಟಿಯಿಂದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಬ್ಯಾನರ್ ತೆರವುಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.

Ad Widget . Ad Widget .

ಕಾನೂನು ನಿಯಮನುಸಾರ ಬ್ಯಾನರ್ ಅಳವಡಿಸಿದ್ದು, ಏಕಾಏಕಿ ತೆರವು ಮಾಡುವಂತೆ ಒತ್ತಾಯ ಮಾಡಿದ್ದನ್ನು ಖಂಡಿಸುತ್ತೇವೆ. ಆ ರೀತಿ ಏನಾದರೂ ನಡೆದರೆ, ಸೌಜನ್ಯ ಹೋರಾಟ ಸಮಿತಿ ಖಂಡಿತವಾಗಿ ಸಹಿಸುವುದಿಲ್ಲ, ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಗುತ್ತಿಗಾರಿನಲ್ಲಿ ನಾಡಿದ್ದು ಸಜ್ಜನ ಶಕ್ತಿಗಳು ನಿಮ್ಮ ಈ ದಬ್ಬಾಳಿಕೆಗೆ ಖಂಡಿತ ಉತ್ತರ ನೀಡಲಿದ್ದೇವೆ, ತಾಳ್ಮೆಯನ್ನು ಕೆದಕುವ ಪ್ರಯತ್ನ ಮಾಡಬೇಡಿ ಎಂದು ತಾಲೂಕು ಸೌಜನ್ಯ ಪರ ಹೋರಾಟ ಸಮಿತಿ ಸಂಯೋಜಕ ಯನ್.ಟಿ. ವಸಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

Leave a Comment

Your email address will not be published. Required fields are marked *