Ad Widget .

ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಲೆ ಏರಿಕೆ ಯಾಕೆ?
ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟ ಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ.

Ad Widget . Ad Widget . Ad Widget .

ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.

Leave a Comment

Your email address will not be published. Required fields are marked *