Ad Widget .

ಅರಣ್ಯಾಧಿಕಾರಿಗಳ ಮೇಲೆ ಹಕ್ಕುಚ್ಯುತಿ ಮಂಡಿಸಲು ಮುಂದಾದ ಶಾಸಕ ಹರೀಶ್ ಪೂಂಜಾ| ಎಫ್ಐಆರ್ ವಾಪಾಸ್ಸಿಗೆ ಬಿಜೆಪಿ ಆಗ್ರಹ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ಅರಣ್ಯಾಧಿಕಾರಿಗಳಿಂದ ಮನೆ ತೆರವು ಪ್ರಕರಣವನ್ನು ಬಿಜೆಪಿ ಶಾಸಕ ಹರೀಶ್​​ ಪೂಂಜಾ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು, ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದರು. ಆದರೆ ಈ ವೇಳೆ ಬರಗಾಲ ಚರ್ಚೆ ಆರಂಭಿಸಿ ಎಂದು ಸ್ಪೀಕರ್ ಯು.ಟಿ.ಖಾದರ್​​ ಹೇಳಿದ್ದಾರೆ. ಅವಕಾಶ ನೀಡದ್ದಕ್ಕೆ ಸಿಟ್ಟಿಗೆದ್ದ ಶಾಸಕ ಪೂಂಜಾ ಸದನದ ಬಾವಿಗಿಳಿದು ಜೆಡಿಎಸ್​, ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮಾಡಿದ್ದಾರೆ. ಬಳಿಕ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಸ್ಪೀಕರ್ ಖಾದರ್ ಅವಕಾಶ ನೀಡಿದ್ದು,​ ಬಳಿಕ ವಿಪಕ್ಷ ಸದಸ್ಯರು ಧರಣಿ ಹಿಂಪಡೆದಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಸದನದಲ್ಲಿ ಪಕ್ಷಾತೀತ ಆಗ್ರಹಿಸಿದ್ದು, ಹಕ್ಕುಬಾಧ್ಯತಾ ಸಮಿತಿಗೆ ಸ್ಪೀಕರ್ ಖಾದರ್ ಶಿಫಾರಸು ಮಾಡಿದ್ದಾರೆ.​ ಅರಣ್ಯ ಇಲಾಖೆಯ ಮೂವರು ಅಧಿಕಾರಿಗಳ ಅಮಾನತಿಗೆ ಆಗ್ರಹಿಸಲಾಗಿದೆ. ಶಾಸಕ ಹರೀಶ್​ ಪೂಂಜಾ ವಿರುದ್ಧ FIR ವಾಪಸ್​​ಗೆ ಬಿಜೆಪಿ ಆಗ್ರಹಿಸಿದ್ದು, ಎಫ್​ಐಆರ್ ಆಗಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. FIR ದಾಖಲಾಗಿದ್ದರೆ ಹಿಂಪಡೆಯಿರಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.

Ad Widget . Ad Widget . Ad Widget .

ಪೂಂಜಾ ದೂರವಾಣಿ ಮಾತುಕತೆಯನ್ನು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಖಂಡ್ರೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ವಿಪಕ್ಷ ಸದಸ್ಯರಿಂದ ಧರಣಿ ಮಾಡಿದ್ದು, ಈ ವೇಳೆ ಯತ್ನಾಳ್​, ಎಸ್​.ಟಿ. ಸೋಮಶೇಖರ್ ಆಸನದಲ್ಲೇ ಕುಳಿತಿದ್ದರು. ​

ವಿಪಕ್ಷ ನಾಯಕ ಅಶೋಕ್​ ಮಾತನಾಡಿ, ಇದು ಅಧಿಕಾರಿಗಳ ರಾಜ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಒಬ್ಬ ಶಾಸಕನ ಬಳಿ ಡಿಎಫ್​ಒ ಮುಚ್ಚಳಿಕೆ ಬರೆಸಿಕೊಳ್ಳುತ್ತಾನೆ. ಶಾಸಕರು ಯಾಕೆ ಇರಬೇಕು, ಇಲ್ಲಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಾವು ಆ ಕಡೆ ಬರುತ್ತೇವೆ, ನೀವು ಈ ಕಡೆ ಬರುತ್ತೀರಿ. ಅಧಿಕಾರಿಗಳ ಕೈಗೆ ಎಲ್ಲವನ್ನೂ ನೀಡಬೇಡಿ, ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

ಕ್ರಿಯಾಲೋಪ ಎತ್ತಿದ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್​ ಸಚಿವರ ಉತ್ತರ ವಿರೋಧಿಸಿ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ಸದನದ ಬಾವಿಗಿಳಿದು ಬಿಜೆಪಿ ಸದಸ್ಯರಿಂದ ಧರಣಿ, ಧಿಕ್ಕಾರ ಘೋಷಣೆ ಹಾಕಲಾಗಿದೆ. ಸಚಿವರ ಉತ್ತರದ ಬಳಿಕ ರೂಲಿಂಗ್ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ. ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಹಿಂಪಡೆದಿದ್ದಾರೆ.

Leave a Comment

Your email address will not be published. Required fields are marked *