Ad Widget .

ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದ/ ಇಂದು ಮಿಜೋರಾಂನ ನೂತನ ಮುಖ್ಯಮಂತ್ರಿ

ಸಮಗ್ರ ನ್ಯೂಸ್: ಈಶಾನ್ಯ ರಾಜ್ಯವಾದ ಮಿಜೋರಾಂನ ವಿಧಾನಸಭೆಯಲ್ಲಿ ಜೋರಾಮ್ ಪೀಪಲ್ಸ್ ಮೂವ್‍ಮೆಂಟ್ 40 ಸದಸ್ಯ ಬಲದ ವಿಧಾನಸಭೆಯಲ್ಲಿ 27 ಸ್ಥಾನಗಳನ್ನು ಗೆದ್ದು ಸ್ವಂತ ಬಲದಿಂದ ಬಹುಮತ ಗಳಿಸಿದೆ. ಜೋರಾಮ್ ಪೀಪಲ್ಸ್ ಮೂವ್‍ಮೆಂಟ್ ಪಕ್ಷದ ಮುಖ್ಯಸ್ಥ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಸದಸ್ಯತ್ವ ಕಳೆದುಕೊಂಡ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತಾ ಉಸ್ತುವಾರಿಯಾಗಿದ್ದ ಲಾಲ್ದುಹೋಮ 30 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Ad Widget . Ad Widget .

1984 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿ ಸೇವೆಗೆ ರಾಜೀನಾಮೆ ನೀಡಿ, ಮಿಜೋರಾಂನಿಂದ ಸಂಸದರಾಗಿ ಆಯ್ಕೆಯಾದರು. ರಾಜಕೀಯಕ್ಕೆ ಪ್ರವೇಶಿಸಿದ ನಂತರ ಲಾಲ್ದುಹೋಮ ಕಾಂಗ್ರೆಸ್ ಪಕ್ಷ ತೊರೆದರು. ಇದಾದ ಬಳಿಕ 1998ರಲ್ಲಿ ಪಕ್ಷಾಂತರ ನಿಷೇಧ ಕಾನೂನಿಗೆ ಅನರ್ಹಗೊಂಡು, ಈ ಕಾನೂನಿನಿಂದ ಸದಸ್ಯತ್ವ ಕಳೆದುಕೊಂಡ ದೇಶದ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ad Widget . Ad Widget .

ಇದರ ನಂತರ ಅವರು ಜೋರಾಮ್ ನ್ಯಾಶನಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ನಂತರ ಅವರ ಪಕ್ಷವು ಜೋರಾಮ್ ಪೀಪಲ್ಸ್ ಮೂವ್‍ಮೆಂಟ್‍ಗೆ ಸೇರ್ಪಡೆಗೊಂಡಿತು. 2018ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಅವರು ಸೆರ್ಚಿಪ್ ಮತ್ತು ಐಜ್ವಾಲ್ ವೆಸ್ಟ್-1 ಎಂಬ ಎರಡು ಸ್ಥಾನಗಳಿಂದ ಗೆದ್ದಿದ್ದರು. ಕಾಂಗ್ರೆಸ್‍ನ ಹಾಲಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಅವರನ್ನೂ ಸೋಲಿಸಿದರು. ತದನಂತರ ಐಜ್ವಾಲ್ ವೆಸ್ಟ್ 1 ಸ್ಥಾನವನ್ನು ಬಿಟ್ಟುಕೊಟ್ಟು ಸೆರ್ಚಿಪ್ ಅನ್ನು ಉಳಿಸಿಕೊಂಡರ ಮಿಜೋರಾಂನಲ್ಲಿ ಏಳು ವಿಭಿನ್ನ ರಾಜಕೀಯ ಪಕ್ಷಗಳು ಜೋರಾಮ್ ಪೀಪಲ್ಸ್ ಮೂವ್‍ಮೆಂಟ್ ಅನ್ನು ರಚಿಸಿ, 2018 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವು. ಈ ಗುಂಪು ಏಳು ಸ್ಥಾನಗಳನ್ನು ಗೆದ್ದು ವಿಧಾನಸಭೆಯಲ್ಲಿ ಪ್ರಧಾನ ಪ್ರತಿಪಕ್ಷವಾಯಿತು.

ಲಾಲ್ದುಹೋಮ ಒಬ್ಬ ರೈತನ ಮಗನಾಗಿದ್ದು, ನಾಲ್ಕು ಸಹೋದರರಲ್ಲಿ ಇವರು ಕಿರಿಯ. ಮೆಟ್ರಿಕ್ಯುಲೇಷನ್ ವರೆಗೆ ಓದಿದ ನಂತರ, ಲಾಲ್ದುಹೋಮ ಅವರು 1972 ರಲ್ಲಿ ಮಿಜೋರಾಂನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರಧಾನ ಸಹಾಯಕರಾಗಿ ತಮ್ಮ ಮೊದಲ ಕೆಲಸ ಮಾಡುವುದರೊಂದಿಗೆ ಉನ್ನತ ಶಿಕ್ಷಣವನ್ನೂ ಗೌಹಾಟಿ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿದರು. 1977 ರವರೆಗೆ ಸಹಾಯಕರಾಗಿ ಕೆಲಸ ಮಾಡಿದ ನಂತರ ಲಾಲ್ದುಹೋಮ ಅವರು ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಂಡರು. ಇದಾದ ಬಳಿಕ ಐಪಿಎಸ್ ಆಗಿ ಸೇವೆ ಆರಂಭಿಸಿದರು. ಗೋವಾದಲ್ಲಿ ಕಳ್ಳಸಾಗಾಣಿಕೆದಾರರ ವಿರುದ್ಧ ಕ್ರಮ ಕೈಗೊಂಡ ನಂತರ ಮಾಧ್ಯಮಗಳ ಬೆಳಕಿಗೆ ಬಂದರು. ಇದರ ನಂತರ, 1982 ರಲ್ಲಿ, ಅವರಿಗೆ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಯಿತು. ನಂತರ 1982 ರ ಏಷ್ಯನ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಕಾರ್ಯದರ್ಶಿಯಾದರು. ಲಾಲ್ದುಹೋಮ ಅವರಿಗೆ ಈಗ 74 ವರ್ಷ.

ಇದೀಗ ಮಿಜೋರಾಂ ಮುಖ್ಯಮಂತ್ರಿಯಾಗಲಿರುವ ಲಾಲ್ದುಹೋಮ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪ್ರಭಾವದಿಂದ ರಾಜಕೀಯಕ್ಕೆ ಕಾಲಿಟ್ಟರು. ಐಪಿಎಸ್ ಕೆಲಸ ಬಿಟ್ಟು ಕಾಂಗ್ರೆಸ್ ಸೇರಿದರು. ಲಾಲ್ದುಹೋಮ ಅವರು ಈ ಹಿಂದೆ ಮಿಜೋರಾಂ ಕಾಂಗ್ರೆಸ್‍ನ ಅಧ್ಯಕ್ಷರೂ ಆಗಿದ್ದರು. ಇದೀಗ ಜೋರಾಮ್ ಪೀಪಲ್ಸ್ ಮೂವ್‍ಮೆಂಟ್ ಮೂಲಕ ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಲಿದ್ದಾರೆ.

Leave a Comment

Your email address will not be published. Required fields are marked *