Ad Widget .

ಕೊಡವ ಅಭಿವೃದ್ದಿ ನಿಗಮಕ್ಕೆ ಒಂದು ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ| ಜಿಲ್ಲಾಧಿಕಾರಿಗಳ ಕಛೇರಿಯಿಂದ ನೀಡಿದ ಅಧಿಕೃತ ದಾಖಲೆ ಬಿಡುಗಡೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಇದೇ ಸೆ.10ರಿಂದ ಬಹು ಚರ್ಚೆಗೆ ಗ್ರಾಸವಾಗಿ ಪರ ವಿರೋಧ ಅಭಿಪ್ರಾಯಗಳಿಗೆ ಆಸ್ಪದ ಮಾಡಿದ ಕೊಡವ ಅಭಿವೃದ್ದಿ ನಿಗಮಕ್ಕೆ ಹತ್ತು ಕೋಟಿ ಅನುದಾನ ಬಿಡುಗಡೆ ಪ್ರಸ್ತಾಪಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ.

Ad Widget . Ad Widget .

ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾರವರು ಮಾಹಿತಿ ಹಕ್ಕು ಕಾಯ್ದೆ 2005 ರಡಿಯಲ್ಲಿ ಕೊಡವ ಅಭಿವೃದ್ದಿ ನಿಗಮಕ್ಕೆ 2022-23 ರಿಂದ ಪಸ್ತುತ ದಿನದ ವರೆಗೆ ಸರ್ಕಾರದಿಂದ ಬಂದ ಅನುದಾನದ ಬಗ್ಗೆ ಧೃಡೀಕೃತ ಮಾಹಿತಿಯನ್ನು ಕೋರಿದ್ದು ಸಂಭಂದಿತ ಕೋರಿಕೆಗೆ ಇಲ್ಲಿಯವರೆಗೆ ಯಾವುದೇ ಅನುದಾನ ಬಂದಿರುವುದಿಲ್ಲ ಎಂಬ ಉತ್ತರವನ್ನು ಕೊಡಗು ಜಿಲ್ಲಾಧಿಕಾರಿಗಳ ಕಛೇರಿಯಿಂದ ಲಿಖಿತವಾಗಿ ನೀಡಲಾಗಿದೆ. ಸದರಿ ದಾಖಲೆಯನ್ನು ಇಂದು ತೆನ್ನಿರ ಮೈನಾರವರು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರದರ್ಶಿಸಿದರು.

Ad Widget . Ad Widget .

ವಿರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದ ಮೈಸೂರು ಕೊಡಗು ಕ್ಷೇತ್ರದ ಸಂಸದ ಶ್ರೀ ಪ್ರತಾಪ್ ಸಿಂಹ ರವರು ಬೊಮ್ಮಾಯಿ ಸರ್ಕಾರ ಕೊಡವ ಅಭಿವೃದ್ದಿ ನಿಗಮ ಸ್ಥಾಪಿಸಿ ಅದಕ್ಕೆ ಹತ್ತು ಕೋಟಿ ಹಣ ನೀಡಿದ್ದಾರೆ ಎಂಬ ಹೇಳಿಕೆ ನೀಡಿದಾಗ ವೇದಿಕೆಯಲ್ಲಿ ಉಪಸ್ಥಿತ ರಿದ್ದ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಒಂದು ರುಪಾಯಿ ಹಣ ಬಿಡುಗಡೆಯಾಗಿಲ್ಲ, ತಪ್ಪು ಸಂದೇಶ ನೀಡಬೇಡಿ ಎಂದು ಸಂಸದರ ಮಾತಿಗೆ ಆಕ್ಷೇಪನೆ ಎತ್ತಿದರು.

ನಂತರ ಜಿಲ್ಲೆಯಾದ್ಯಂತ ಈ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಸಂಸದರ ಹೇಳಿಕೆ ಸರಿ ಎಂದು ವಾದಿಸಿದರೆ ಮತ್ತೆ ಕೆಲವರು ಪೊನ್ನಣ ನವರು ನೀಡಿದ ಮಾಹಿತಿ ಸರಿ ಎಂದು ಪರಸ್ಪರ ವಾಗ್ವಾದಕ್ಕೆ ಇಳಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಬಹಳಷ್ಟು ಹರಿದಾಡಿತ್ತು.

ನಂತರ ತಣ್ಣಗಾಗುತ್ತಾ ಬಂದಿತ್ತು. ಕಳೆದ ವಾರ ನಡೆದ ದಿಷಾ ಸಭೆಯ ನಂತರ ಸಂಸದ ಪ್ರತಾಪ್ ಸಿಂಹರವರು ಕೊಡವ ಅಭವೃದ್ದಿ ನಿಗಮಕ್ಕೆ ಬೊಮ್ಮಾಯಿ ಸರ್ಕಾರ ಹತ್ತು ಕೋಟಿ ಹಣ ನೀಡಿದ್ದು ಅದು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಈ ಚರ್ಚೆಗೆ ಆಸ್ಪದ ನೀಡಿದ್ದರು. ಈಗ ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಅಧಿಕೃತ ಸ್ಪಷ್ಟನೆ ಸಿಕ್ಕಿದೆ.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು (ಸಂಪುಟ ದರ್ಜೆ) ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆದ ಎ.ಎಸ್. ಪೊನ್ನಣ್ಣ ವಾಸ್ತವ ವಿಚಾರವನ್ನು ನಿಖರವಾಗಿ, ಪ್ರಖರವಾಗಿ ಜನತೆಯ ಮುಂದಿಟ್ಟಿದ್ದಾರೆ.
ಆದರೆ ಸಂಸದರಾದ ಪ್ರತಾಪ್ ಸಿಂಹರವರು ಬೇಜವಬ್ದಾರಿಯಿಂದ ತಪ್ಪು ಮಾಹಿತಿಯನ್ನು ಎರಡೆರಡು ಬಾರಿ ನೀಡುವ ಮೂಲಕ ಕ್ಷೇತ್ರದ ಜನತೆಯನ್ನು ವಂಚಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಾಪ್ ಸಿಂಹರವರು ಕೊಡಗು, ಮೈಸೂರು ಕ್ಷೇತ್ರದ ಸಂಪೂರ್ಣ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ತೆನ್ನಿರ ಮೈನಾ ಪತ್ರಿಕಾ ಗೋಷ್ಠಿಯಲ್ಲಿ ಸಂಸದರಿಗೆ ಒತ್ತಾಯ ಮಾಡಿದ್ದಾರೆ.

ಸುವರ್ಣ ಕರ್ನಾಟಕ ಭವನ 2016 ರಲ್ಲಿ ಐದು ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿತ್ತು.
ಆದರೆ ಅಂದಿನ ಶಾಸಕರ ನಿರ್ಲಕ್ಷ್ಯದಿಂದ ಬೇಜವಾಬ್ದಾರಿ ತನದಿಂದ ಪೂರ್ಣಗೊಳ್ಳದೆ 2020ರಲ್ಲಿ ಗಡಿ ಪ್ರದೇಶ ಅಭಿವೃದ್ದಿ ನಿಗಮದಿಂದ ಬಂದ ಐದು ಕೋಟಿ ರೂಗಳ ಅನುದಾನವನ್ನು ಎರಡನೇ ಹಂತದ ಕಾಮಗಾರಿ ಎಂದು ಬಳಕೆ ಮಾಡಲಾಯಿತು.ಆದರೂ ಕೂಡ ಅದು ಪೂರ್ಣವಾಗಲಿಲ್ಲ. 2018 ರಲ್ಲಿ ಲೋಕಾರ್ಪಣೆ ಆಗಬೇಕಿದ್ದು ಮಡಿಕೇರಿ ತಾಲ್ಲೂಕು ಭವನ ಕೂಡ ಒಂದನೇ ಹಂತದ ಐದು ಕೋಟಿ ರೂಗಳನ್ನು ವ್ಯಯಿಸಿ ಪುನಹ ಹೆಚ್ಚುವರಿ ಐದು ಕೋಟಿ ರೂಗಳನ್ನು ಬಳಕೆ ಮಾಡಿ ಶಾಸಕದ್ವಯರ ನಿರ್ಲಕ್ಷ್ಯದಿಂದ ಪೂರ್ಣವಾಗಲಿಲ್ಲ.
ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳ ಅಣತಿಯಂತೆ ಕೆಲಸ ಮಾಡುತ್ತಿದ್ದ ಮಾಜಿ ಶಾಸಕದ್ವಯರಿಗೆ ಜನಾನುರಾಗಿಗಳಾಗಿ ಅಭಿವೃದ್ದಿ ಕೆಲಸ ಮಾಡುತ್ತಿರುವ ಎ.ಎಸ್.ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲಾ ಎಂದು ತೆನ್ನಿರ ಮೈನಾ ಕಿಡಿ ಕಾರಿದ್ದಾರೆ.

ಮಾಜಿ ಶಾಸಕರು ಹಾಗೂ ಅವರ ಕೆಲವು ಪಟಾಲಂ ಬೆಂಬಲಿಗರು ಈಗಿನ ಶಾಸಕರ ಅಭಿವೃದ್ದಿ ಪರ ಕೆಲಸಗಳನ್ನು ಅಧೀರರಾಗಿ ಮಂತರ್ ಗೌಡ ರವರು ಮಾಡುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಅದು ಅಪ್ಪಚ್ಚು ರಂಜನ್ ಕೊಡುಗೆ,ಎ.ಎಸ್.ಪೊನ್ನಣ್ಣ ನವರು ಕೈಗೊಳ್ಳುತ್ತಿರುವ ಅಭಿವೃದ್ದಿ ಕೆಲಸಗಳಿಗೆ ಅದು ಕೆ.ಜಿ.ಬೋಪಯ್ಯನವರ ಕೊಡುಗೆ ಎಂದು ಅಪಪ್ರಚಾರ ಮಾಡುತ್ತದ್ದಾರೆ‌. ಇದು ಈ ಪಟಾಲಂ ನಡೆಸುತ್ತಿರುವ ಟೂಲ್ ಕಿಟ್ ಆಗಿದ್ದು ಇಂತಹ ಟೂಲ್ ಕಿಟ್ ಗೆ ವಿಧ್ಯಾವಂತರೂ, ಪ್ರಜ್ಞಾವಂತರೂ ಆಗಿರುವ ಇಬ್ಬರು ಜನಪ್ರತಿನಿಧಿಗಳು ಜಗ್ಗುವುದಿಲ್ಲ. ಅಭಿವೃದ್ದಿ ಕೆಲಸವನ್ನು ಮಾಡಲು ಬದ್ದರಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

ಡಿಸಿಸಿ ಸದಸ್ಯ ಅಬ್ದುಲ್ ರಜಾಕ್, ಕೇಟೋಳಿರ ಮೋಹನ್ ರಾಜ್, ಅಯಿಲಪಂಡ ಪುಷ್ಪ ಪೂಣಚ್ಚ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಡಿರ ಸದಾ ಮುದ್ದಪ್ಪ, ಮಡಿಕೇರಿ ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜೆ.ಪೀಟರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *