Ad Widget .

ಗುಂಡೇಟಿಗೆ ಪ್ರಾಣ ಕಳೆದುಕೊಂಡನೇ ಅರ್ಜುನ? ಸಾವಿನ ಸುತ್ತ ಅನುಮಾನದ ಹುತ್ತ!!

ಸಮಗ್ರ ನ್ಯೂಸ್: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡು ಹಾರಿಸಿದಾಗ ಅದು ಅರ್ಜುನನ ಕಾಲಿಗೆ ತಗುಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಬರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದೆ.

Ad Widget . Ad Widget .

ಅರ್ಜುನ ಆನೆ ಮೊದಲ‌ ಬಾರಿಗೆ ಕಾಡಾನೆ ಮೇಲೆ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಕೋವಿನಿಂದ ಗುಂಡು ಹಾರಿಸಿದರು. ಅದು ಅರ್ಜುನನ ಕಾಲಿಗೆ ತಗುಲಿತು. ಅರ್ಜುನ ಶಕ್ತಿ ಕಳೆದುಕೊಂಡ. ನಾವು ಆನೆ ಮೇಲಿಂದ ಇಳಿದು ಓಡಿದೆವು. ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ಸಾಕಾನೆ ಅರ್ಜುನನ ಮೇಲೆ ಹಠಾತ್ ದಾಳಿ ಮಾಡಿತು ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದ್ದು, ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ.

Ad Widget . Ad Widget .

ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ದಾಳಿ ಮಾಡಿದ್ದರಿಂದ ಸಾವಾಗಿದೆ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದೆ.

ಗುರಿ ತಪ್ಪಿ ಬಿದ್ದ ಅದೊಂದು ಗುಂಡೇಟಿನಿಂದ ಶಕ್ತಿ ಕಳೆದುಕೊಂಡು ಕಾದಾಡಲಾಗದೆ ಅರ್ಜುನ ಆನೆ ಮೃತಪಟ್ಟಿದೆ ಎನ್ನಲಾಗುತ್ತಿದೆ. ಮದದಲ್ಲಿರುವ ಕಾಡಾನೆ ಹುಚ್ಚನಂತೆ ಆಡುತ್ತದೆ ಎಂಬ ಮಾಹಿತಿ ಗೊತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಕಿಬ್ಬೊಟ್ಟೆಗೆ ತಿವಿದಿದ್ದರಿಂದ ಅರ್ಜುನ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದ್ದರೂ ಅರ್ಜುನ ಸಾವಿನ ಬಗ್ಗೆ ಮಾವುತರೊಬ್ಬರು ನೀಡಿದ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ.

Leave a Comment

Your email address will not be published. Required fields are marked *