Ad Widget .

ZPM ಗೆ ಜೈ ಎಂದ ಮಿಜೋರಾಂ ಜನತೆ| ಹಾಲಿ ಸಿಎಂ, ಡಿಸಿಎಂಗೆ ಸೋಲು

ಸಮಗ್ರ ನ್ಯೂಸ್: ಮಿಜೋರಾಂ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರ ಕಳೆದುಕೊಂಡಿದೆ. ಹೊಸ ಪ್ರಾದೇಶಿಕ ಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ZPM) 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ 40 ಸ್ಥಾನಗಳುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಧಿಸಿದೆ.

Ad Widget . Ad Widget .

ಅಧಿಕಾರಾರೂಢ ಎಂಎನ್ ಎಫ್ (MNF) ಆಘಾತ ಅನುಭವಿಸಿದ್ದು, 10 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಬಿಜೆಪಿ (BJP) 2 ಹಾಗೂ ಕಾಂಗ್ರೆಸ್ (Congress) 1 ಸ್ಥಾನದಲ್ಲಿ ವಿಜಯ ಸಾಧಿಸಿದೆ.

Ad Widget . Ad Widget .

ಬಿಜೆಪಿಯು 2018ರಲ್ಲಿ 1 ಸ್ಥಾನದಲ್ಲಿ ಗೆದ್ದಿದ್ದು, ಈ ಬಾರಿ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ. ಈ ಮಧ್ಯೆ, ಐಜ್ವಾಲ್ ಪೂರ್ವ-1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಎಂಎನ್‌ಎಎಫ್ ನ ಜೋರಮತಂಗಾ, ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ತನ್ಸಂಗ ವಿರುದ್ಧ 2,101 ಮತಗಳಿಂದ ಸೋಲು ಕಂಡಿದ್ದಾರೆ.

ಸಿಎಂ ಮಾತ್ರವಲ್ಲದೆ, ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಎಂಎನ್ ಎಫ್ ಸಹ ಅಧಿಕಾರ ಕಳೆದುಕೊಂಡಿದೆ. ಮತ್ತೊಂದು ಆಘಾತಕಾರಿ ಫಲಿತಾಂಶದಲ್ಲಿ ಮಿಜೋರಾಂ ಉಪಮುಖ್ಯಮಂತ್ರಿ ತೌನ್ಲುಯಾ ಕೂಡ ಟುಯಿಚಾಂಗ್ ನಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಎಂಎನ್ ಎಫ್ ನಾಯಕರನ್ನು ZPM ಅಭ್ಯರ್ಥಿ ಡಬ್ಲ್ಯೂ ಚುನಾವ್ಮಾ ಅವರು 909 ಮತಗಳ ಅಂತರದಿಂದ ಸೋಲಿಸಿದ್ದಾರೆ.

Leave a Comment

Your email address will not be published. Required fields are marked *