Ad Widget .

ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ |ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರಿಗೆ ಸನ್ಮಾನ

ಸಮಗ್ರ ನ್ಯೂಸ್: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಇದರ ವತಿಯಿಂದ ಡಿ.2ರಂದು ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಕಳ ತಾಲೂಕು ಹತ್ತೊಂಬತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

Ad Widget . Ad Widget .

ಹಿರಿಯ ಶಿಶು ಸಾಹಿತಿ ನಿವೃತ್ತ ಶಿಕ್ಷಕ ಸೂಡ ಸದಾನಂದ ಶೆಣೈ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಸಮ್ನೇಳನದಲ್ಲಿ ಗೌರವ ನೆರವೇರಿತು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪಸ್ಥಿತಿಯಲ್ಲಿ ಹಲವು ಗಣ್ಯರು ಸಮ್ನುಖದಲ್ಲಿ ಸನ್ಮಾನ ನೆರವೇರಿತು.

Ad Widget . Ad Widget .

ಹರಿಹರ ಪಲ್ಲತ್ತಡ್ಕ ನಿವಾಸಿಯಾಗಿರುವ ಅವರು ಸುಬ್ರಹ್ಮಣ್ಯ ಸುಳ್ಯ, ಪುತ್ತೂರು, ಉಡುಪಿ ಮುಂತಾದೆಡೆ ವರದಿಗಾರರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಕಾರ್ಕಳ ತಾಲೂಕು ಉದಯವಾಣಿ ದೈನಿಕ ಪತ್ರಿಕೆಯ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಪ್ರತಿಷ್ಠಿತ ವಾಸುದೇವ ರಾವ್ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರು. ಹಲವು ಸಂಘ ಸಂಸ್ಥೆೆಗಳು ಇವರ ಪತ್ರಿಕಾ ಕ್ಷೇತ್ರದ ಸಾಧನೆಗಾಗಿ ಇವರನ್ನು ಸನ್ಮಾನಿಸಿ, ಗೌರವಿಸಿದೆ.

Leave a Comment

Your email address will not be published. Required fields are marked *