Ad Widget .

ಮನೆಯ ಸಾಕು ಬೆಕ್ಕು ಕಚ್ಚಿ ತಂದೆ-ಮಗ ಸಾವು

ಸಮಗ್ರ ನ್ಯೂಸ್: ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚಿದ ಪರಿಣಾಮ ತಂದೆ ಮತ್ತು ಮಗ ಡೆಡ್ಲಿ ರೆಬೀಸ್​ ಗೆ ಬಲಿಯಾಗಿದ್ದಾರೆ. ಮೃತರ ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

Ad Widget . Ad Widget .

ಉತ್ತರ ಪ್ರದೇಶದ ಕಾನ್ಪುರ ನಗರದ ಅಕ್ಬರ್ ಪುರದಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು. ತುಂಬಾ ಮುದ್ದಿನಿಂದ ಬೆಕ್ಕನ್ನು ಸಾಕಿದ್ದರು. ಒಂದು ದಿನ ಆ ಬೆಕ್ಕಿಗೆ ಬೀದಿ ನಾಯಿಯೊಂದು ಕಚ್ಚಿತ್ತು.
ಕಚ್ಚಿದ್ದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್ ಲಕ್ಷಗಳು ಕಾಣಿಸಿಕೊಂಡಿದ್ದವು.

Ad Widget . Ad Widget .

ಎಂದಿನಂತೆ ಬೆಕ್ಕಿನ ಜೊತೆ ಮನೆಯ ಸದಸ್ಯರು ಆಟವಾಡುತ್ತಿರುವಾಗ ಒಂದು ದಿನ ಅದು ತನ್ನ ಮಾಲೀಕನ ಮಗನಿಗೆ ಗಾಯ ಮಾಡಿತ್ತು. ಕೆಲ ದಿನಗಳ ಬೆನ್ನಲ್ಲೇ ಆತನ ಆರೋಗ್ಯ ಹದಗೆಡಲು ಶುರುವಾಯಿತು. ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿ ಮೃತಪಟ್ಟಿದ್ದ.

ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಯ್ತು. ಅವರೂ ಕೂಡ ರೇಬಿಸ್​​ನಿಂದ ಸಾವನ್ನಪ್ಪಿದರು. ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *