Ad Widget .

‘ತ್ರಿ’ ವಿಕ್ರಮ ಮೆರೆದ ಬಿಜೆಪಿ| ದೇಶಕ್ಕೆ ಮೋದಿಯೇ ಗ್ಯಾರಂಟಿ ಟ್ರೆಂಡ್| ಕಾಂಗ್ರೆಸ್ ಗೆ ಸಿಹಿಗಿಂತ ಕಹಿಯೇ ಜಾಸ್ತಿ

ಸಮಗ್ರ ನ್ಯೂಸ್: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಬಿಜೆಪಿ ನಾಯಕರು ದೇಶಕ್ಕೆ “ಮೋದಿಯೇ ಗ್ಯಾರಂಟಿ” ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಲೋಕಸಭೆಗೆ ಚುನಾವಣೆ ನಡೆಯುವ ಮುನ್ನದ ಸೆಮಿಫೈನಲ್‌ ಎಂದೇ ಬಿಂಬಿತವಾಗಿದ್ದ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ #ModikiGuarantee ಟ್ರೆಂಡ್‌ ಆಗಿದೆ.

Ad Widget . Ad Widget . Ad Widget .

ಬಿಜೆಪಿ ನಾಯಕರು ದೇಶಕ್ಕೆ ಮೋದಿಯೇ ಗ್ಯಾರಂಟಿ ಎಂದು ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಯಶಸ್ವಿ ಆಗುತ್ತಿದ್ದಂತೆ ಕಾಂಗ್ರೆಸ್‌ ಈಗ ನಡೆಯುತ್ತಿರುವ ಚುನಾವಣಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿತ್ತು.

ಕಾಂಗ್ರೆಸ್‌ ಪ್ರಚಾರಕ್ಕೆ ಪರ್ಯಾಯವಾಗಿ ಬಿಜೆಪಿ ನರೇಂದ್ರ ಮೋದಿ ಅವರನ್ನೇ ಹೆಚ್ಚು ಬಿಂಬಿಸಿತ್ತು. ಅಷ್ಟೇ ಅಲ್ಲದೇ ಮೋದಿ ಗ್ಯಾರಂಟಿಗಳ ಮುಂದೆ ಕಾಂಗ್ರೆಸ್‌ನ ಹುಸಿ ಭರವಸೆಗಳು ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳುತ್ತಿದ್ದರು. ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ ಭಾರತದ ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ ಎಂದು ಭಾಷಣ ಮಾಡಿದ್ದರು.
ಲೋಕಸಭಾ ಚುನಾವಣೆ ನಡೆಯುವ ಮುನ್ನ ಸೆಮಿಫೈನಲ್‌ ಎಂದೇ ಬಿಂಬಿತವಾಗಿದ್ದ ಹಿಂದಿ ಬೆಲ್ಟ್‌ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ #ModiKiGuarantee ಟ್ರೆಂಡ್‌ ಆಗಿದೆ. ದೇಶಕ್ಕೆ “ನಮೋ‌” ಗ್ಯಾರಂಟಿ. ಪ್ರಧಾನಿ ಶ್ರೀ ನರೇಂದ್ರ ಮೋದಿ ಇದ್ದರೆ ಇದ್ದರೆ ಎಲ್ಲವೂ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಪೋಸ್ಟ್‌ ಮಾಡಿದೆ.

ರಾಜಸ್ಥಾನ, ಛತ್ತೀಸ್‌ಘಡ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪಕ್ಷದೊಳಗಿನ ಒಳೇಟೇ ದೊಡ್ಡ ಪೆಟ್ಟು. ಮತದಾರರು ಮತ ಹಾಕಲಿಲ್ಲ ಅನ್ನೋದಕ್ಕಿಂತಲೂ ನಾಯಕರ ಕಚ್ಚಾಟ, ಬೀದಿ ರಂಪಾಟಗಳೇ ಕಾರ್ಯಕರ್ತರ ಮೇಲೂ ಮತದಾರರ ಮೇಲೂ ಪರಿಣಾಮ ಬೀರಿದೆ. ಹಾಗಾಗೇ ಅಧಿಕಾರ ಕಳೆದುಕೊಂಡಿದೆ.

ಆದರೆ ತೆಲಂಗಾಣದಲ್ಲಿ ಮಾತ್ರ ಅದ್ಭುತ ಜಯ ಸಾಧಿಸಿದೆ. ಬಹುಮತದೊಂದಿಗೆ ಸರ್ಕಾರ ರಚಿಸುವ ಅವಕಾಶ ಬಂದೊದಗಿದೆ. ಇಲ್ಲೂ ಕೂಡ ಸಿಎಂ ಸ್ಥಾನಕ್ಕೆ ಹಲವರ ನಡುವೆ ಪೈಪೋಟಿ ಇದೆ. ಆದರೆ ಹೆಸರಿಲ್ಲದಂತಾಗಿದ್ದ ಪಕ್ಷವನ್ನು ಸಂಘಟನೆ ಮಾಡಿದ್ದು, ಇಲ್ಲಿವರೆಗೆ ತಂದಿದ್ದು ರೇವಂತ್​ ರೆಡ್ಡಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಪಕ್ಷ ರೇವಂತ್​ ರೆಡ್ಡಿಗೆ ಸಿಎಂ ಪಟ್ಟ ಕಟ್ಟುವ ಎಲ್ಲಾ ಲಕ್ಷಣಗಳಿವೆ. ಇಲ್ಲೂ ಹಿರಿಯ-ಕಿರಿಯ, ವಲಸಿಗ -ಮೂಲ ಎಂದು ಕಿತ್ತಾಡಿಕೊಂಡರೆ ಕಾಂಗ್ರೆಸ್​ಗೆ ಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *