Ad Widget .

ಕುರ್ಚಿಗೋಸ್ಕರ ವಾಮಾಚಾರ ಮೊರೆ ಹೋದ ವಿಶ್ವವಿದ್ಯಾಲಯ ಉಪನ್ಯಾಸಕರು

ಸಮಗ್ರ ನ್ಯೂಸ್: ಧಾರವಾಡ ಶಿಕ್ಷಣ ಕೇಂದ್ರ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರದಲ್ಲಿ ಮುಂದಿದೆ. ಇದೀಗ ಹೊಸದಾಗಿ ವಾಮಾಚಾರ ಕೂಗು ಕೇಳಿಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಮೂಢನಂಬಿಕೆ ಬಗ್ಗೆ ಉಪನ್ಯಾಸಕರು ಪಾಠ ಮಾಡಬೇಕಿದೆ. ಆದರೆ ಅದೇ ಉಪನ್ಯಾಸಕರು ಮೂಢ ನಂಬಿಕೆಯ ಮೊರೆ ಹೋದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯಯಲ್ಲಿ ಡಾ. ರಮಾ ಗುಂಡೂರಾವ್ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಬೋಧನಾ ಸಹಾಯಕ ಪ್ರಾಧ್ಯಾಪಕಿಯಾಗಿ ನಿಯುಕ್ತಿಗೊಂಡಿದ್ದಾರೆ. ಅವರಿಗಾಗಿ ವಿಭಾಗದಲ್ಲಿ ಒಂದು ಚೇಂಬರ್ ಸಹ ಕಾಯ್ದಿರಿಸಲಾಗಿದೆ. ಆದರೆ ಆ ಚೇಂಬರ್‌ ಮೇಲೆ ಅದೇ ವಿಭಾಗದ ಬೇರೆ ಉಪನ್ಯಾಸಕರು ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಅವರು ರಮಾ ಅವರ ಚೇಂಬರ್​​ನಲ್ಲಿ ಕರಿ ಮಾಟದ ಗೊಂಬೆ ಹಾಗೂ ನಿಂಬೆ ಹಣ್ಣು ಮಾಟ ಮಾಡಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

Ad Widget . Ad Widget . Ad Widget .

ಕೊಠಡಿಯ ಕಿಟಿಕಿಯಿಂದ ರಮಾ ಅವರ ಚೇಂಬರ್ ನಲ್ಲಿ ಈ ಎಲ್ಲ ವಸ್ತು ಎಸೆದು ಹೋಗಿದ್ದಾರೆ. ಇನ್ನು ಈ ಚೇಂಬರ್ ಗಾಗಿ ಮೊದಲಿನಿಂದಲೂ ಜಟಾಪಟಿ ಕೂಡ ನಡೆದಿತ್ತು. ಆದರೆ ಆ ಚೇಂಬರ್ ಬಿಟ್ಟು ಕೊಡಲು ಡಾ. ರಮಾ ನಿರಾಕರಿಸಿದ್ದರು ಎನ್ನಲಾಗುತ್ತಿದೆ. ಯಾವಾಗ ಅವರು ಆ ಚೇಂಬರ್ ಬಿಟ್ಟು ಕೊಡಲು ನಿರಾಕರಿಸಿದ್ದರೋ ಆಗಲೇ ಬೇರೆಯವರು ವಾಮಾಚಾರದ ಮೊರೆ ಹೋಗಿರೊ ಆರೋಪ ಕೇಳಿ ಬಂದಿದೆ. ಈಗಾಗಲೇ ಚೇಂಬರ್ ವಿಚಾರದಲ್ಲಿ ತಿಕ್ಕಾಟ ಆಗಿದೆ. ಹಲವರ ಪ್ರಭಾವ ಸಹ ನನ್ನ ಮೇಲೆ‌ಹಾಕಲಾಗಿತ್ತು. ಆದರೆ ನಾನು ವಿಭಾಗದ ಚೇಂಬರ್ ಬಿಡದೇ ಇರುವುದಕ್ಕೆ ಈ ರೀತಿ ವಾಮಾಚಾರ ಮಾಡಿಸಿದ್ದಾರೆ. ಎರಡು ದಿನ ರಜೆ ಮುಗಿಸಿ ಬಂದು ಬಾಗಿಲು ತೆಗೆದಾಗ ಗಮನಕ್ಕೆ ಬಂತ್ತು. ಆಗ ವಾಪಸ್ ಡೋರ್ ಕ್ಲೋಸ್ ಮಾಡಿದ್ದೆವು. ತುಂಬಾ ಭಯವಾಗಿದ ಕಾರಣ ಚೇಂಬರ್ ಓಪನ್ ಮಾಡಲಿಲ್ಲ. ಇದಕ್ಕೆಲ್ಲ ವಿಭಾಗದ ಮುಖ್ಯಸ್ಥ ಸಂಗಪ್ಪ ಚಲವಾದಿ ಕಾರಣ ಎಂದು ಆರೋಪ ಮಾಡಿದ್ದಾರೆ.

Leave a Comment

Your email address will not be published. Required fields are marked *