ಸಮಗ್ರ ನ್ಯೂಸ್: ಲು ಕುಡಿಯುವ ಮುನ್ನ ಸ್ವಲ್ಪ ಎಚ್ಚೆತ್ತುಕೊಳ್ಳಿ. ರಾಜ್ಯದ ಮಾರುಕಟ್ಟೆಗೆ ಪೂರೈಕೆಯಾಗುವ ಬಹುತೇಕ ಖಾಸಗಿ ಬ್ರ್ಯಾಂಡ್‌ಗಳ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳಿವೆ ಮತ್ತು ಹಾಲು ಕಲಬೆರಕೆಯಾಗಿದೆ ಅನ್ನೊ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ನ ಪರೀಕ್ಷೆಯಿಂದ ಈ ವಿಷಯ ತಿಳಿದು ಬಂದಿದೆ.
ಹಾಲಿನ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆ 31 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ 44 ಬ್ರ್ಯಾಂಡ್‌ಗಳ 259 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಕೆಎಂಎಫ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ಎಲ್ಲಾ ಮಾದರಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು, ಫಲಿತಾಂಶ ಆತಂಕಕಾರಿಯಾಗಿದೆ. 259 ಮಾದರಿಗಳಲ್ಲಿ ಮೂರು ಮಾದರಿಗಳು ಕಲಬೆರಕೆಯಾಗಿವೆ.
98 ಮಾದರಿಗಳ ಹಾಲಿನ ಗುಣಮಟ್ಟ ಕಳಪೆಯಾಗಿದೆ. 9 ಮಾದರಿಗಳು ಕಲಬೆರಕೆಯಾಗಿದ್ದು, ಗುಣಮಟ್ಟ ಕಳಪೆಯಾಗಿದೆ. 110 ಮಾದರಿಗಳ ಗುಣಮಟ್ಟ ಫುಡ್ ಸೇಫ್ಟಿ ಆಯಂಡ್ ಸ್ಟ್ಯಾಂಡರ್ಡ್ ರೆಗ್ಯುಲೇಷನ್ (FSSR) ಆಯಕ್ಟ್‌ನ ಮಾನದಂಡಕ್ಕೆ ಅನುಗುಣವಾಗಿಲ್ಲ. 149 ಮಾದರಿಗಳ ಗುಣಮಟ್ಟ ಮಾತ್ರ FSSRನ ಮಾನದಂಡಕ್ಕೆ ಅನುಗುಣವಾಗಿದೆ ಅಂತ FSSAI ತಿಳಿಸಿದೆ.
ಇತ್ತ ನಂದಿನಿ ಬ್ರ್ಯಾಂಡ್‌ನ ಹಾಲು ಮಾತ್ರ ಗುಣಮಟ್ಟದಿಂದ ಕೂಡಿದೆ ಮತ್ತು FSSR ಮಾನದಂಡಕ್ಕೆ ಅನುಗುಣವಾಗಿದೆ ಹಾಗೂ ನಂದಿನಿ ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆಯಾಗಿಲ್ಲ ಅಂತ FSSAI ಮೂಲಗಳು ಹೇಳಿವೆ.