Ad Widget .

ಉಜಿರೆ: ಸೌಜನ್ಯಳಿಗೆ ನ್ಯಾಯ ಕೊಡಿಸಲಾಗದಿದ್ದರೆ ನಮಗೆ ದಯಾಮರಣ ಕರುಣಿಸಿ| ಸೌಜನ್ಯಪರ ಪ್ರತಿಭಟನಾ ಸಭೆಯಲ್ಲಿ ತಿಮರೋಡಿ ಆಕ್ರೋಶ

ಸಮಗ್ರ ನ್ಯೂಸ್: ಕಳೆದ ಹನ್ನೆರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ನರೇಂದ್ರ ಮೋದಿ, ಸಿದ್ದರಾಮಯ್ಯ, ರಾಷ್ಟ್ರಪತಿಗಳು ಮಾತನಾಡುತ್ತಿಲ್ಲ. ನಿಮಗೆ ಸೌಜನ್ಯಳಿಗೆ ನ್ಯಾಯ ಕೊಡಿಸಲಾಗದಿದ್ದರೆ ಹೋರಾಟಗಾರರಿಗೆ ದಯಾಮರಣ ಕರುಣಿಸಿ’ ಎಂದು ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಉಜಿರೆಯಲ್ಲಿ ನಡೆದ ಸೌಜನ್ಯ ಪರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ತಿಮರೋಡಿ, ‌ಹೋರಾಟದ ಹಾದಿ ತಪ್ಪಿಸಿದ ಅಧಿಕಾರಿಗಳ ವಿರುದ್ದ, ಹಾಗೂ ಉದ್ದೇಶ ಪೂರಕವಾಗಿ ಮಾತನಾಡುತ್ತಿರುವ ರಾಜ್ಯದ ಮಾಧ್ಯಮವೊಂದರ ಮುಖ್ಯಸ್ಥರ ವಿರುದ್ದ ಹರಿಹಾಯ್ದರು.

Ad Widget . Ad Widget .

‘ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಕೇಳುವುದೇ ತಪ್ಪು. ಭಾರತದಂತ ರಾಷ್ಟ್ರದಲ್ಲಿ ಹುಟ್ಟಿದ ನಮಗೆ ಈ ರೀತಿಯ ದುರ್ಗತಿ ಬರಬಾರದು. ಇದು ನಮ್ಮ ವ್ಯವಸ್ಥೆಗೆ ಶೋಭೆಯಲ್ಲ’ ಎಂದರು.

ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರರಾದ ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ಗಿರೀಶ್ ಮಟ್ಟಣ್ಣನವರ್, ಕುಸುಮಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *