ಇಂದಿನಿಂದ ಪ್ರೋ ಕಬಡ್ಡಿ ಕಲರವ| ಎರಡು ತಿಂಗಳು ಭರಪೂರ ಮನರಂಜನೆ

ಸಮಗ್ರ‌ ನ್ಯೂಸ್: ಇಂದಿನಿಂದ ಬಹುನಿರೀಕ್ಷಿತ ವಿವೋ ಪ್ರೊ ಕಬಡ್ಡಿ ಲೀಗ್‌ ಸೀಸನ್‌ 10ರ ಹವಾ ಶುರುವಾಗಲಿದೆ. ಇಂದು ಪ್ರೊ ಕಬಡ್ಡಿ ಪಂದ್ಯಾವಳಿಗಳಿಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ.

Ad Widget ... ..

ಈ ರೋಚಕ ಪಂದ್ಯಾವಳಿಯ ಆರಂಭದಲ್ಲೇ ಸ್ಟಾರ್ ಆಟಗಾರರಾದ ಫಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು, ಕುತೂಹಲ ಕೆರಳಿಸಿದೆ. ಸದ್ಯ 4 ವರ್ಷಗಳ ನಂತರ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಸೀಸನ್‌ನಲ್ಲಿ ಎಲ್ಲಾ 12 ಫ್ರಾಂಚೈಸಿಗಳು ತಮ್ಮ ತವರಿನ ಅಂಗಳದಲ್ಲಿ ಆಡಲು ಸಿದ್ಧವಾಗಿವೆ.

Ad Widget

ಮುಖ್ಯವಾಗಿ ಡಿಸೆಂಬರ್ 2ರ ಇಂದಿನಿಂದ ಪ್ರಾರಂಭವಾಗಲಿರುವ ಪಂದ್ಯಾವಳಿಗಳು 2024ರ ಫೆಬ್ರವರಿ 21ರವರೆಗೆ ನಡೆಯಲಿವೆ. ಪ್ರೊ ಕಬಡ್ಡಿ ಲೀಗ್‌ ಸೀಸನ್‌ 10 ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು ಅಲ್ಲದೆ, ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಸಹ ಆಗಲಿದ್ದು, ಇಷ್ಟ ಬಂದ ಸ್ಥಳದಲ್ಲಿ ಕುಳಿತು ನಿಮ್ಮ ನೆಚ್ಚಿನ ತಂಡದ ಆಟದ ಮಜಾ ಆನಂದಿಸಬಹುದಾಗಿದೆ.

Leave a Comment

Your email address will not be published. Required fields are marked *