Ad Widget .

ಸುರಂಗ ಕಾರ್ಮಿಕರ ಆರೋಗ್ಯದಲ್ಲಿ ಸಹಜ ಸ್ಥಿತಿ/ ಸಾವನ್ನೇ ಗೆದ್ದ ಶ್ರಮಿಕರು ಮನೆಯತ್ತ ಹೆಜ್ಜೆ

ಸಮಗ್ರ ನ್ಯೂಸ್: ಕುಸಿದ ಸುರಂಗದಲ್ಲಿ ಸಿಲುಕಿಕೊಂಡು 17 ದಿನಗಳ ಕಾರ್ಯಾಚರಣೆ ನಂತರ ಸುರಕ್ಷಿತವಾಗಿ ಮರಳಿದ ಎಲ್ಲ 41 ಕಾರ್ಮಿಕರ ಆರೋಗ್ಯ ಸಹಜವಾಗಿದ್ದು, ಅವರು ತಮ್ಮ ಮನೆಗಳಿಗೆ ತೆರಳಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗುರುವಾರ ಹೇಳಿದೆ. 41 ಜನರ ಪೈಕಿ 15 ಮಂದಿ ಏಮ್ಸ್‍ನಿಂದ ತಮ್ಮ ಊರಾದ ಜಾಖರ್ಂಡ್‍ಗೆ ಹೊರಟಿದ್ದು, ಈ 15 ಕಾರ್ಮಿಕರನ್ನು ಅವರ ಕುಟುಂಬಸ್ಥರ ಸಮೇತ ಉತ್ತರಾಖಂಡದ ಡೆಹ್ರಾಡೂನ್‍ನಿಂದ ದೆಹಲಿಗೆ ಏರ್ ಲಿಫ್ಟ್ ಮಾಡಿ ಅಲ್ಲಿಂದ ಅವರನ್ನು ವಿಮಾನದಲ್ಲಿ ರಾಂಚಿಗೆ ಕಳುಹಿಸಿಕೊಡಲಾಗುತ್ತದೆ.

Ad Widget . Ad Widget .

ಬುಧವಾರ ಅವರನ್ನು ಏಮ್ಸ್‍ಗೆ ಏರ್ ಲಿಫ್ಟ್ ಮಾಡಲಾಗಿತ್ತು. ಸಮಗ್ರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಅವರ ರಕ್ತ ಪರೀಕ್ಷೆ, ಎಕ್ಸ್-ರೇ ಮತ್ತು ಇಸಿಜಿ ವರದಿಗಳು ಸಹಜವಾಗಿವೆ. 17 ದಿನಗಳ ನಂತರ ಸುರಂಗದಿಂದ ಹೊರಬಂದ ಕಾರಣ, ಅವರಿಗೆ ಹೊರಗಿನ ಪರಿಸರಕ್ಕೆ ಒಗ್ಗಿಕೊಳ್ಳಲು ಸಮಯ ಬೇಕಾಗಬಹುದು ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ತಪಾಸಣೆಗಾಗಿ ಎರಡು ವಾರದ ನಂತರ ಸಮೀಪದ ಆಸ್ಪತ್ರೆಗಳಿಗೆ ಹೋಗುವಂತೆ ಕಾರ್ಮಿಕರಿಗೆ ಸಲಹೆ ನೀಡಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *