Ad Widget .

ಕಡಬ: ಸಿನಿಮೀಯ ರೀತಿಯಲ್ಲಿ ಹಾಸನದಿಂದ ಶಿಕ್ಷಕಿಯ ಅಪಹರಣ| ಅತ್ತೆ ಮಗಳ ಕಿಡ್ನಾಪ್ ಮಾಡಿದ ಅಳಿಯನ ಮಾವನ ಮನೆಗೆ ಕಳುಹಿಸಿದ ಪೊಲೀಸರು

ಸಮಗ್ರ ನ್ಯೂಸ್: ಮದುವೆಗೆ ಒಪ್ಪದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿ ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ದಕ್ಷಿಣ ಕನ್ನಡ ನೆಲ್ಯಾಡಿ ಬಳಿ ವಶಕ್ಕೆ ಪಡೆದುಕೊಂಡಿದ್ದು, ಹಾಸನಕ್ಕೆ ಆರೋಪಿಗಳು ಹಾಗೂ ಶಿಕ್ಷಕಿಯನ್ನು ಕರೆತಂದಿದ್ದಾರೆ.

Ad Widget . Ad Widget .

ಘಟನೆ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿ ಸಂಬಂಧಿ ರಾಮು ಹಾಗೂ ಆತನ ಸ್ನೇಹಿತರನ್ನು ಬಂಧನ ಮಾಡಿರುವ ಪೊಲೀಸರು ಆರೋಪಿಗಳ ವಿಚಾರಣೆಯನ್ನು ನಡೆಸಿದ್ದಾರೆ.

Ad Widget . Ad Widget .

ಏನಿದು ಪ್ರಕರಣ?
ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಶಿಕ್ಷಕಿಯನ್ನು ಕಿಡ್ನಾಪ್ ಮಾಡಿದ್ದರು, ಅಪಹರಣದ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರ್ಪಿತಾ ಅಪರಹರಣಕ್ಕೊಳಗಾದ ಶಿಕ್ಷಕಿಯಾಗಿದ್ದು, ಇಂದು ಬೆಳಗ್ಗೆ ಸುಮಾರು 8 ಗಂಟೆ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ್​ನಲ್ಲಿ ಬಂದು ಬಲವಂತವಾಗಿ ಎಳೆದೊಯ್ದಿದ್ದರು. ಅರ್ಪಿತಾ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಅಪಹರಣ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮದುವೆಗೆ ಅರ್ಪಿತಾ ಮತ್ತು ಕುಟುಂಬಸ್ಥರು ಒಪ್ಪದ ಹಿನ್ನೆಲೆ ಸ್ನೇಹಿತರೊಂದಿಗೆ ಸೇರಿ ಅಪಹರಣ ಮಾಡಿದ್ದರು ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್​ಪಿ ಸುಜಾತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಘಟನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಯುವತಿಯ ಪೋಷಕರು , ರಾಮು ಎಂಬವನೇ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಆತ ನಮ್ಮ ಚಿಕ್ಕಮನ ಮಗನಾಗಿದ್ದಾನೆ. 15 ದಿನಗಳ ಹಿಂದೆ ಅಪ್ಪ-ಅಮ್ಮನ ಜೊತೆ ಮನೆಗೆ ಬಂದಿದ್ದ. ಮದುವೆ ಮಾಡಿಕೊಡಿ ಎಂದು ಹೇಳಿದ್ದರು. ಆದರೆ ಮಗಳು ಒಪ್ಪದ ಹಿನ್ನೆಲೆ ನಾವು ಮದುವೆಗೆ ನಿರಾಕರಿಸಿದ್ದೇವೆ ಎಂದು ಅರ್ಪಿತಾ ತಾಯಿ ಹೇಳಿದ್ದರು.

Leave a Comment

Your email address will not be published. Required fields are marked *