November 2023

ಮಡಿಕೇರಿ: ವಕೀಲರ ಸಂಘದಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ| ಜಿಲ್ಲಾ ಕ್ರೀಡಾಂಗಣದಲ್ಲಿ ವಕೀಲರ ಕ್ರೀಡಾಕಲರವ

ಸಮಗ್ರ ನ್ಯೂಸ್: ಸಂವಿಧಾನ ಭಾರತೀಯರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುತ್ತದೆ -ಹೈಕೋಟ್೯ ನ್ಯಾಯಮೂರ್ತಿ ಮತ್ತು ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಉಮಾ ಅಭಿಪ್ರಾಯಸಿದ್ದಾರೆ. ಜನತೆಯ ಆಶೋತ್ತರಗಳಿಗೆ ಭಾರತೀಯ ಸಂವಿಧಾನ ಅರ್ಥಪೂರ್ಣವಾಗಿ ಸ್ಪಂದಿಸುತ್ತದೆ ಎಂದು ಹೇಳಿದರು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತವಾದ ಜಿಲ್ಲಾ ಮಟ್ಟದ ವಕೀಲರ ಕ್ರೀಡಾಕೂಟ ಸಂದಭ೯ ಸಂವಿಧಾನ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಭೋದಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಈ ಸಂದರ್ಭದಲ್ಲಿ ಮಾತನಾಡಿ, ಭಾರತದ ಸಂವಿಧಾನ ಸದಾ ನಮ್ಮೊಂದಿಗೆ […]

ಮಡಿಕೇರಿ: ವಕೀಲರ ಸಂಘದಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ| ಜಿಲ್ಲಾ ಕ್ರೀಡಾಂಗಣದಲ್ಲಿ ವಕೀಲರ ಕ್ರೀಡಾಕಲರವ Read More »

ದುಬೈನಲ್ಲಿ ಪುತ್ತರಿ ಸಂಭ್ರಮ| ಶಾಸಕ ಪೊನ್ನಣ್ಣ ಅವರಿಗೆ ಸನ್ಮಾನ

ಸಮಗ್ರ ನ್ಯೂಸ್: ಯುಎಇ ಕೊಡವ ಕಮಿಟಿ 2023 ದುಬೈನಲ್ಲಿ ಆಯೋಜಿಸಿದ್ದ ಪುತ್ತರಿ ಸಾಂಸ್ಕೃತಿಕ ಉತ್ಸವಗಳ ಸಂದರ್ಭ ವಿರಾಜಪೇಟೆ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪೊನ್ನಣ್ಣ ಪ್ರಜಾಪ್ರಭುತ್ವದಲ್ಲಿ ಸಮುದಾಯ ಪ್ರಾತಿನಿಧ್ಯದ ಮಹತ್ವವನ್ನು ಒತ್ತಿ ಹೇಳಿದರು. ನಮ್ಮ ಸಮುದಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯ ಎಷ್ಟು ಮುಖ್ಯ’ ಎಂದು ಹೇಳಿದರು. ಕೊಡವರನ್ನು ಸಂಪರ್ಕಿಸುವ ಮಹತ್ವ ಮತ್ತು ಅದರ ಪ್ರಸ್ತುತತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥಿತ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಅವರು ತಿಳಿಸಿದರು. ಜಾಗತಿಕ

ದುಬೈನಲ್ಲಿ ಪುತ್ತರಿ ಸಂಭ್ರಮ| ಶಾಸಕ ಪೊನ್ನಣ್ಣ ಅವರಿಗೆ ಸನ್ಮಾನ Read More »

ಬೆಂಗಳೂರು ಕಂಬಳ ನೋಡಿ ವಾಪಾಸ್ಸಾಗುತ್ತಿದ್ದ ವೇಳೆ ದುರ್ಘಟನೆ| ದ.ಕ ಜಿಲ್ಲೆಯ ಇಬ್ಬರು ಯುವಕರು ದುರ್ಮರಣ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ನೋಡಿ ವಾಪಾಸಾಗುತ್ತಿದ್ದ ವೇಳೆ ಕಾರು ಮತ್ತು ಬೋರ್‌ವೆಲ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ಯುವಕರು ಸಾವನಪ್ಪಿದ ಘಟನೆ ನಡೆದಿದೆ. ಮೃತರನ್ನು ಪೆರಾರ ಬಜ್ರೆ ಗ್ರಾಮದ ನಿವಾಸಿ ಕಿಶನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ನಿವಾಸಿ ಫಿಲೀಪ್ ಲೋಬೋ (32) ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚಿಗಣಿಪಾಳ್ಯ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ನಿತೀಶ್ ಬಂಡಾರಿ,

ಬೆಂಗಳೂರು ಕಂಬಳ ನೋಡಿ ವಾಪಾಸ್ಸಾಗುತ್ತಿದ್ದ ವೇಳೆ ದುರ್ಘಟನೆ| ದ.ಕ ಜಿಲ್ಲೆಯ ಇಬ್ಬರು ಯುವಕರು ದುರ್ಮರಣ Read More »

ಆಟಗಾರರ ಬದಲಾವಣೆಗೆ ಇಂದು ಕೊನೆಯ ದಿನ/ ಆರ್‍ಸಿಬಿಯಲ್ಲೂ ಒಂದು ಬದಲಾವಣೆ

ಸಮಗ್ರ ನ್ಯೂಸ್: ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿದ್ದು. ಅದಕ್ಕೂ ಮುನ್ನ ಆಟಗಾರರ ಹರಾಜು ಪಕ್ರಿಯೆ ನಡೆಯಲಿದೆ, ಇಂದು ಆಟಗಾರರ ಬದಲಾವಣೆಗೆ ಕಡೆಯ ದಿನವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಲ್‍ರೌಂಡರ್ ಶೆಹಬಾಜ್ ಅಹಮದ್ ಅವರನ್ನು ಸನ್‍ರೈಸರ್ಸ್ ಹೈದರಾಬಾದ್‍ಗೆ ನೀಡಿ, ಅಲ್ಲಿಂದ ಮಯಾಂಕ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೆಹಬಾಜ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಶೆಹಬಾಜ್ ಅಹಮದ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು.

ಆಟಗಾರರ ಬದಲಾವಣೆಗೆ ಇಂದು ಕೊನೆಯ ದಿನ/ ಆರ್‍ಸಿಬಿಯಲ್ಲೂ ಒಂದು ಬದಲಾವಣೆ Read More »

ಡಾ. ಅನುರಾಧಾ ಕುರುಂಜಿ ಅವರಿಗೆ ಕಾಸರಗೋಡಿನ ಮುಳ್ಳೇರಿಯಾದಲ್ಲಿ ಗೌರವಾರ್ಪಣೆ

ಸಮಗ್ರ ನ್ಯೂಸ್: ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಕಾಸರಗೋಡಿನ ಮುಳ್ಳೇರಿಯಾದ ಶ್ರೀ ಧರ್ಮಶಾಸ್ತ್ರಾ ಭಜನಾ ಮಂದಿರ ದೇಲಂಪಾಡಿಯಲ್ಲಿ 18 ವರ್ಷಗಳ ಬಳಿಕ ನಡೆದ 4 ದಿನಗಳ ವಿಜೃಂಭಣೆಯ ಅಯ್ಸಪ್ಪನ ಉತ್ಸವ “ಅಯ್ಯಪ್ಪ ತಿರುವಳಕ್ಕ್ ಮಹೋತ್ಸವ”ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕೇರಳ, ಕಾಸರಗೋಡಿನ ಸುತ್ತ ಮುತ್ತಲ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ, ತರಬೇತುದಾರರಾಗಿ, ಪ್ರಧಾನ ಭಾಷಣಕಾರರಾಗಿ, ಭಾಗವಹಿಸುತ್ತಿರುವ ಡಾ. ಅನುರಾಧಾ ಕುರುಂಜಿಯವರನ್ನು ವಿಜಯಕುಮಾರ್

ಡಾ. ಅನುರಾಧಾ ಕುರುಂಜಿ ಅವರಿಗೆ ಕಾಸರಗೋಡಿನ ಮುಳ್ಳೇರಿಯಾದಲ್ಲಿ ಗೌರವಾರ್ಪಣೆ Read More »

ತಿಂಗಳಿಗೆ 1.60 ಲಕ್ಷ ಸಂಬಳ ಕೊಡುವ ಈ ಜಾಬ್​ಗೆ ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: ಫೆರೋ ಸ್ಕ್ರ್ಯಾಪ್ ನಿಗಮ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಪ್ಲಿಕೇಶನ್ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 35 ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆಯ ಮಾಹಿತಿ:ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಆಪರೇಶನ್ ಡಿಪಾರ್ಟ್​ಮೆಂಟ್​)-9ಎಕ್ಸಿಕ್ಯೂಟಿವ್/ ಜೂನಿಯರ್

ತಿಂಗಳಿಗೆ 1.60 ಲಕ್ಷ ಸಂಬಳ ಕೊಡುವ ಈ ಜಾಬ್​ಗೆ ಬೇಗ ಅಪ್ಲೇ ಮಾಡಿ Read More »

ರಾಷ್ಟ್ರೀಯ ಕಾನೂನು ನ್ಯಾಯಮಂಡಳೀಯಲ್ಲಿ ಉದ್ಯೋಗಾವಕಾಶ/ ಡೆಪ್ಯುಟಿ ರಿಜಿಸ್ಟ್ರಾರ್ ಹುದ್ದೆಗಳಿಗೆ ನೇಮಕಾತಿ

ಸಮಗ್ರ ನ್ಯೂಸ್: ರಾಷ್ಟ್ರೀಯ ಕಾನೂನು ನ್ಯಾಯಮಂಡಳಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆಫ್‍ಲೈನ್ ಮೂಲಕ ಡಿಸೆಂಬರ್ 20,2023ರೊಳಗೆ ಅರ್ಜಿಯನ್ನು ಸಲ್ಲಿಸಬಹದು. 10 ಡೆಪ್ಯುಟಿ ರಿಜಿಸ್ಟ್ರಾರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಕಾನೂನು ಪದವಿ ಜೊತೆಗೆ ಡಿಸೆಂಬರ್ 20,2023ರ ಅನ್ವಯ ಗರಿಷ್ಟ 56 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ರಾಷ್ಟ್ರೀಯ ಕಾನೂನು ನ್ಯಾಯಮಂಡಳೀಯಲ್ಲಿ ಉದ್ಯೋಗಾವಕಾಶ/ ಡೆಪ್ಯುಟಿ ರಿಜಿಸ್ಟ್ರಾರ್ ಹುದ್ದೆಗಳಿಗೆ ನೇಮಕಾತಿ Read More »

ಕಾರವಾರ: ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಮಕ್ಕಳನ್ನು ಬಸ್‌ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಡ್‌ ಬಂದರ್ ಬಳಿ ಸಮುದ್ರದಲ್ಲಿ ನ. 25ರಂದು ಸಂಜೆ ನಡೆದಿದೆ. ಮೃತ ನಿವೇದಿತಾ ನಾಗರಾಜ ಭಂಡಾರಿ ಸಾಂತಗಲ್ ಗ್ರಾಮದ ನಿವಾಸಿಯಾಗಿದ್ದು, ನಿವೇದಿತಾ, ಮನೆಯಿಂದ ಸ್ಕೂಟಿಯಲ್ಲಿ ಇಬ್ಬರೂ ಗಂಡು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಕುಮಟಾದ ಪಿಕ್‌ಅಪ್ ಬಸ್‌ ನಿಲ್ದಾಣದ ಬಳಿ ಮಕ್ಕಳನ್ನು ಬಿಟ್ಟು ತೆರಳಿದ್ದಾರೆ. ಇನ್ನು, ಆತ್ಮಹತ್ಯೆಗೂ ಮುನ್ನ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್

ಕಾರವಾರ: ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ Read More »

ಸಂವಿಧಾನ ದಿನ/ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

ಸಮಗ್ರ ನ್ಯೂಸ್: ಡಾ.ಬಿ.ಆ‌ರ್ ಅಂಬೇಡ್ಕ‌ರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ಸಂವಿಧಾನದ ದಿನದ ಅಂಗವಾಗಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ ಆವರಣದಲ್ಲಿ ಅನಾವರಣಗೊಳಿಸಿದರು. ಸಸಿ ನಡುವ ಮೂಲಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ .ವೈ ಚಂದ್ರಚೂಡ್ ಹಾಗೂ ರಾಷ್ಟ್ರಪತಿ ಮುರ್ಮು ಅವರು ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸೇರಿದಂತೆ ಸುಪ್ರೀಂ ಕೋರ್ಟ್‌ ಹಲವು ನ್ಯಾಯಾಧೀಶರು

ಸಂವಿಧಾನ ದಿನ/ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ Read More »

ಪುತ್ತೂರು: ಕೈತಪ್ಪಿದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ| ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯದ ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿಶಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ನಿಶಾ ರನ್ನಿಂಗ್​ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಆದರೆ, ರನ್ನಿಂಗ್ ರೇಸ್ ನಲ್ಲಿ ಬಹುಮಾನ ಸಿಕ್ಕಿರಲಿಲ್ಲ. ಇದರಿಂದ ನಿಶಾ ತೀವ್ರ ಬೇಸರಗೊಂಡಿದ್ದಳು. ಬಳಿಕ ಖಿನ್ನತೆಗೊಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನ

ಪುತ್ತೂರು: ಕೈತಪ್ಪಿದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ| ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Read More »