ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಹುರಿದ ಅಡಿಕೆ| ಮಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟ 20 ಕಂಟೈನರ್ ಆಮದು ಅಡಿಕೆ
ಸಮಗ್ರ ನ್ಯೂಸ್: ಹುರಿದ ಅಡಿಕೆ ರೂಪದಲ್ಲಿ ಕಸ್ಟಮ್ಸ್ ಸುಂಕ ತಪ್ಪಿಸಿಕೊಂಡು ಅವ್ಯಾಹತವಾಗಿ ವಿದೇಶ ಅಡಿಕೆ ಭಾರತಕ್ಕೆ ಬರುತ್ತಿರುವುದು ರಾಜ್ಯದ ಅಡಿಕೆ ವಹಿವಾಟು ಸಂಸ್ಥೆಗಳು ಹಾಗೂ ಬೆಳೆಗಾರರ ನಿದ್ದೆಗೆಡಿಸಿದೆ. ‘ತಿಂಗಳ ಈಚೆಗೆ ಸುಮಾರು 20 ಕಂಟೇನರ್ ಅಡಿಕೆ ವಿದೇಶದಿಂದ ಭಾರತಕ್ಕೆ ಬಂದಿದ್ದು, ಪ್ರತಿ ಕಂಟೇನರ್‌ನಲ್ಲಿ 20ರಿಂದ 24 ಟನ್ ಅಡಿಕೆ ಇರಬಹುದೆಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಬಹುಪಾಲು ಹುರಿದ ಅಡಿಕೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಕಸ್ಟಮ್ಸ್ ಇಲಾಖೆಯವರು ಹೇಳುವಂತೆ ಹುರಿದ ಅಡಿಕೆಗೆ ಕನಿಷ್ಠ ಆಮದು ಸುಂಕ ಅನ್ವಯವಾಗುವುದಿಲ್ಲ. ಹೀಗಾಗಿ, […]