November 2023

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ.ಆ.ಸೊಸೈಟಿ ವತಿಯಿಂದ ದೀಪಾವಳಿ ಆಫರ್| ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ ಕೊಡುಗೆ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ಪ್ರಕಟಿಸಿದೆ. ನ.1ರಿಂದ ಅನ್ವಯವಾಗುವಂತೆ ಠೇವಣಿಗಳ ಮೇಲೆ ಬಡ್ಡಿದರವನ್ನು ಶೇ. 9ಕ್ಕೆ ಹೆಚ್ಚಿಸಲಾಗಿದ್ದು, ಅಲ್ಲದೇ ಹಿರಿಯ ನಾಗರೀಕರಿಗೆ, ನಿವೃತ್ತ ಯೋಧರಿಗೆ, ಸಂಘ ಸಂಸ್ಥೆಗಳಿಗೆ ವಾರ್ಷಿಕ 9.50% ಬಡ್ಡಿದರ ನೀಡುವ ಯೋಜನೆ ರೂಪಿಸಿದೆ. ಈ ಯೋಜನೆ ನ.01ರಿಂದ 30ರವರೆಗೆ ಮಾತ್ರ ಲಭ್ಯವಿರಲಿದ್ದು, ಠೇವಣಿದಾರರು, ಸದಸ್ಯರು ತಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸುವಂತೆ ಸಂಘದ ಪ್ರಕಟಣೆ […]

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ.ಆ.ಸೊಸೈಟಿ ವತಿಯಿಂದ ದೀಪಾವಳಿ ಆಫರ್| ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ ಕೊಡುಗೆ Read More »

ಐವರು ಶಂಕಿತ ಉಗ್ರರ ಪ್ರಕರಣವನ್ನ NIAಗೆ ವಹಿಸಿದ CCB

ಸಮಗ್ರನ್ಯೂಸ್: ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ (CCB) ರಾಷ್ಟ್ರೀಯ ತನಿಖಾ ದಳ (NIA)ಗೆ ವರ್ಗಾವಣೆ ಮಾಡಿದೆ. ಪ್ರಕರಣ ಸಂಬಂಧ ಎನ್​​ಐಎ ಅಧಿಕಾರಿಗಳು ಎಫ್​ಐಆರ್​ (FIR) ದಾಖಲಿಸಿಕೊಂಡಿದ್ದಾರೆ. ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್‌ ಬಂಧಿತ ಶಂಕಿತ ಉಗ್ರರು. ಸದ್ಯ ಎನ್​ಐಎ ಅಧಿಕಾರಿಗಳು ಸಿಸಿಬಿ ಬಂಧಿಸಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಭಾರಿ ಅನಾಹುತ

ಐವರು ಶಂಕಿತ ಉಗ್ರರ ಪ್ರಕರಣವನ್ನ NIAಗೆ ವಹಿಸಿದ CCB Read More »

ಯುವ ಸಂಗೀತ ನಿರ್ದೇಶಕ ಮನೋಜ್ ವಸಿಷ್ಠ ನಿಧನ

ಸಮಗ್ರ ನ್ಯೂಸ್: ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯುವ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನ.1ರಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಕಿರುತೆರೆಯ ಬಹುತೇಕ ರಿಯಾಲಿಟಿ ಶೋಗಳಲ್ಲಿ ಮನೋಜ್ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರವೀಣ್ ಡಿ ರಾವ್ ಅವರ ಅನೇಕ ಧಾರಾವಾಹಿ ಶೀರ್ಷಿಕೆಗಳಿಗೆ

ಯುವ ಸಂಗೀತ ನಿರ್ದೇಶಕ ಮನೋಜ್ ವಸಿಷ್ಠ ನಿಧನ Read More »

ಪುತ್ತೂರು: ಎವಿಜಿ ಶಾಲೆಯಲ್ಲಿ ಶಾರದಾ ಪೂಜೆ ಆಚರಣೆ

ಸಮಗ್ರ ನ್ಯೂಸ್: ಪುತ್ತೂರು ಸಮೀಪದ ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 21ರಂದು “ಶಾರದಾ ಪೂಜೆ ಹಾಗೂ ಆಯುಧ ಪೂಜೆ” ಕಾರ್ಯಕ್ರಮ ಆಚರಿಸಲಾಯಿತು. ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಶ್ರೀ ನಂದಿಕೇಶವ ಭಜನಾ ಮಂಡಳಿ, ಬೆದ್ರಳ ಇವರಿಂದ ಕುಣಿತ ಭಜನೆಯು ನಡೆಯಿತು. ಸವಣೂರು ವಿದ್ಯಾರಶ್ಮಿ ಶಾಲೆಯ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಭಾರ ಪ್ರಾಂಶುಪಾಲ ಶ್ರೀನಿವಾಸ್ ಹೆಚ್. ಬಿ. ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಇವರು ಗೌರವಿಸಿದರು.

ಪುತ್ತೂರು: ಎವಿಜಿ ಶಾಲೆಯಲ್ಲಿ ಶಾರದಾ ಪೂಜೆ ಆಚರಣೆ Read More »

ವಿಶ್ವಕಪ್ ಕ್ರಿಕೆಟ್ | ದ.ಆಫ್ರಿಕಾ ವಿರುದ್ಧ‌ ಹೀನಾಯ ಸೋಲುಕಂಡ ನ್ಯೂಜಿಲೆಂಡ್

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರಲ್ಲಿ ಆರಂಭಿಕ ಪಂದ್ಯಗಳಲ್ಲಿ ತೋರಿದ್ದ ಭರ್ಜರಿ ಪ್ರದರ್ಶನವನ್ನು ಕಾಯ್ದುಕೊಳ್ಳುವಲ್ಲಿ ನ್ಯೂಜಿಲೆಂಡ್ ವಿಫಲವಾಗಿದೆ. ದ.ಆಫ್ರಿಕಾ ವಿರುದ್ಧ ಇಂದಿನ ಪಂದ್ಯದಲ್ಲಿ 190 ರನ್ ಗಳ ಭಾರೀ ಅಂತರದಿಂದ ಹೀನಾಯ ಸೋಲುಂಡ ಕಿವೀಸ್ ಈ ಕೂಟದಲ್ಲಿ ಹ್ಯಾಟ್ರಿಕ್ ಸೋಲುಂಡಂತಾಗಿದೆ. ಈ ಬೃಹತ್ ಮೊತ್ತ ಬೆನ್ನತ್ತಲು ಹೊರಟ ಕಿವೀಸ್ ಸ್ಪಿನ್ ದಾಳಿಗೆ ನಲುಗಿ ಸಂಪೂರ್ಣ ನೆಲಕಚ್ಚಿತು. ವಿಶೇಷವಾಗಿ ಭಾರತೀಯ ಮೂಲದ ಸ್ಪಿನ್ನರ್ ಕೇಶವ್ ಮಹಾರಾಜ್ ದಾಳಿಗೆ ಕಿವೀಸ್ ಮಧ್ಯಮ ಕ್ರಮಾಂಕ ನಿರುತ್ತರವಾಯಿತು. ಕೇಶವ್

ವಿಶ್ವಕಪ್ ಕ್ರಿಕೆಟ್ | ದ.ಆಫ್ರಿಕಾ ವಿರುದ್ಧ‌ ಹೀನಾಯ ಸೋಲುಕಂಡ ನ್ಯೂಜಿಲೆಂಡ್ Read More »

ಬಿಹಾರದ ಸರಯೂ ನದಿಯಲ್ಲಿ ದೋಣಿ ದುರಂತ| 15 ಮಂದಿ ನಾಪತ್ತೆ; 4 ಶವ ಪತ್ತೆ

ಸಮಗ್ರ ನ್ಯೂಸ್: ಬಿಹಾರದ ಛಪ್ರಾದಲ್ಲಿ ದೋಣಿ ಮಗುಚಿ ನಾಲ್ವರು ಸಾವನ್ನಪ್ಪಿದ್ದು 15 ಜನ ಕಾಣೆಯಾಗಿರುವ ಘಟನೆ ನಡೆದಿದೆ. ಇಲ್ಲಿಯ ಸರಯೂ ನದಿಯಲ್ಲಿ 15ಕ್ಕೂ ಹೆಚ್ಚಿನ ಪ್ರಯಾಣಿಕರು ತುಂಬಿದ್ದ ದೋಣಿ ಪಲ್ಟಿಯಾಗಿದೆ. ಘಟನೆಯಲ್ಲಿ ಇದುವರೆಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೆಲವರು ಈಜಿ ದಡ ಸೇರಿದ್ದಾರೆ. ಮಾಂಝಿ ಪೊಲೀಸ್ ಠಾಣೆ ವ್ಯಾಪ್ತಿಯ ಮಥಿಯಾರ್ ಎಂಬಲ್ಲಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವವರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ರೈತರು ಹಾಗೂ ಕೂಲಿ ಕಾರ್ಮಿಕರು ಹೊಲದಲ್ಲಿ ಕೆಲಸ

ಬಿಹಾರದ ಸರಯೂ ನದಿಯಲ್ಲಿ ದೋಣಿ ದುರಂತ| 15 ಮಂದಿ ನಾಪತ್ತೆ; 4 ಶವ ಪತ್ತೆ Read More »

ಗ್ರಾಹಕರ ಗಮನಕ್ಕೆ… ಸುಳ್ಯದ ಈ ಭಾಗದಲ್ಲಿ ಇಂದು ಕರೆಂಟಿಲ್ಲ

ಸಮಗ್ರ ನ್ಯೂಸ್: ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ ಫೀಡರುಗಳಲ್ಲಿ ನ.2 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೊ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಗ್ರಾಹಕರ ಗಮನಕ್ಕೆ… ಸುಳ್ಯದ ಈ ಭಾಗದಲ್ಲಿ ಇಂದು ಕರೆಂಟಿಲ್ಲ Read More »

ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್ ಘೋಷಣೆ| ಇದರ ಹಿಂದಿತ್ತು‌ “ಒಂದು ಚೀಟಿಯ ಕಥೆ”

ಸಮಗ್ರ ನ್ಯೂಸ್: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ಹಾಗೂ ನೀರು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ. ಸಭಾ ಕಾರ್ಯಕ್ರಮದಲ್ಲೇ ನಿರ್ಣಯವಾದ ಈ ಘೋಷಣೆಯ ಹಿಂದೆ ಒಂದು ರೋಚಕ ಚೀಟಿ ಕತೆ ಇದೆ! ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ 68ನೇ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಅವರ ಪೂರ್ವನಿಗದಿತ ಭಾಷಣದಲ್ಲಿ ಉಚಿತ ವಿದ್ಯುತ್‌ ಮತ್ತು ನೀರಿನ ವಿಚಾರವೇ ಇರಲಿಲ್ಲ. ಅದೆಲ್ಲವೂ ಪ್ರಸ್ತಾವನೆಯಾಗಿ,

ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್ ಘೋಷಣೆ| ಇದರ ಹಿಂದಿತ್ತು‌ “ಒಂದು ಚೀಟಿಯ ಕಥೆ” Read More »

ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿಯವರಿಗೆ ಸಿಎಂ ಪತ್ರ

ಸಮಗ್ರ ಸಮಾಚಾರ: 15 ತಿಂಗಳ ಮಗು ಮೌರ್ಯ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯಗೆ ಮಗುವಿನ ತಂದೆ ಮಲ್ಲಿಕಾರ್ಜುನ್​ ಧನ್ಯವಾದ ಸಲ್ಲಿಸಿದ್ದಾರೆ. ಸೂಕ್ತ ಚಿಕಿತ್ಸೆ ಕೊಡಿಸಲು ಸಹಾಯ ಕೋರಿ ಸಿಎಂ ಸಿದ್ದರಾಮಯ್ಯಗೆ ಮಗುವಿನ‌ ತಂದೆ ಮಲ್ಲಿಕಾರ್ಜುನ್​ ಈ ಮೊದಲು ಪತ್ರ ಬರೆದಿದ್ದರು. ಇದೀಗ ತಂದೆ ಮಲ್ಲಿಕಾರ್ಜುನ್ ಮನವಿ ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅವರು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಈ ವಿಷಯವಾಗಿ X ಮಾಡಿರುವ ಮಗುವಿನ‌ ತಂದೆ

ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿಯವರಿಗೆ ಸಿಎಂ ಪತ್ರ Read More »

ಭಾರತ – ಬಾಂಗ್ಲಾ ನಡುವೆ ರೈಲು ಸಂಚಾರ ಆರಂಭ/ ಉಭಯ ಪ್ರಧಾನಿಗಳ ಸಂತಸ

ಸಮಗ್ರ ನ್ಯೂಸ್: ತ್ರಿಪುರಾದ ನಿಶ್ಚಿಂತ್‍ಪುರ್ ಮತ್ತು ನೆರೆಯ ಬಾಂಗ್ಲಾದೇಶದ ಗಂಗಾಸಾಗರ್ ನಡುವೆ ನೂತನ ರೈಲು ಸಂಚಾರ ಆರಂಭವಾಗಿದ್ದು, ಇದನ್ನು ಎರಡು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ಜಂಟಿಯಾಗಿ ವರ್ಚುವಲ್ ಆಗಿ ಉದ್ಘಾಟಿಸಿದರು. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈಶಾನ್ಯ ರಾಜ್ಯ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ರೈಲು ಸಂಪರ್ಕ ಆಗಿದೆ ಎಂದು ಮೋದಿ ಹೇಳಿದರು. ಇದರ ಜೊತೆಗೆ ಖುಲ್ನಾ – ಮೊಂಗ್ಲಾ ಬಂದರು ರೈಲು ಯೋಜನೆ ಮತ್ತು ಬಾಂಗ್ಲಾದೇಶದ ರಾಂಪಾಲ್‍ನಲ್ಲಿರುವ ಮೈತ್ರಿ ಸೂಪರ್ ಪವರ್

ಭಾರತ – ಬಾಂಗ್ಲಾ ನಡುವೆ ರೈಲು ಸಂಚಾರ ಆರಂಭ/ ಉಭಯ ಪ್ರಧಾನಿಗಳ ಸಂತಸ Read More »