November 2023

ಸುಳ್ಯ: ನ. 8ರಂದು ವಿದ್ಯಾಮಾತ ಅಕಾಡೆಮಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟನೆ

ಸಮಗ್ರ ನ್ಯೂಸ್: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನ.8ರಂದು ಸುಳ್ಯದ ವಿದ್ಯಾಮಾತಾ ಅಕಾಡಮಿಯಲ್ಲಿ ನಡೆಯಲಿದೆ. ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ವಿದ್ಯಾಮಾತಾ ಅಕಾಡೆಮಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ತರಗತಿ ಉದ್ಘಾಟಿಸುವರು ಎಂದು ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಾವತಿ ಬಡ್ಡಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ 28 […]

ಸುಳ್ಯ: ನ. 8ರಂದು ವಿದ್ಯಾಮಾತ ಅಕಾಡೆಮಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟನೆ Read More »

ಉತ್ತರಪ್ರದೇಶದಲ್ಲಿ ಭೂಕಂಪ/ ಅಯೋಧ್ಯೆಯಿಂದ 215 ಕಿ.ಮೀ ದೂರದಲ್ಲಿ ಕಂಪನ ಬಿಂದು.

ಸಮಗ್ರ ನ್ಯೂಸ್: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭೂ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.6 ಎಂದು ದಾಖಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು, ಭಾನುವಾರ ಮುಂಜಾನೆ 1 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವು, ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಕಂಪನ ಬಿಂದುವನ್ನು ಅಯೋಧ್ಯೆಯಿಂದ ಉತ್ತರಕ್ಕೆ 215 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ.

ಉತ್ತರಪ್ರದೇಶದಲ್ಲಿ ಭೂಕಂಪ/ ಅಯೋಧ್ಯೆಯಿಂದ 215 ಕಿ.ಮೀ ದೂರದಲ್ಲಿ ಕಂಪನ ಬಿಂದು. Read More »

ವಿಧಾನಸಭಾ ಚುನಾವಣೆ/ ತೆಲಂಗಾಣದತ್ತ ಕರ್ನಾಟಕದ ಕಾಂಗ್ರೆಸ್ ನಾಯಕರು

ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಇದೀಗ ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತು ಸಚಿವರುಗಳು ತೆಲಂಗಾಣದತ್ತ ಮುಖ ಮಾಡಿದ್ದಾರೆ. ಎಐಸಿಸಿ ನೂರಕ್ಕೂ ಅಧಿಕ ಕಾಂಗ್ರೆಸ್ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ನೇಮಿಸಿದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಈಗಾಗಲೇ ತೆಲಂಗಾಣದಲ್ಲಿ ಪ್ರಚಾರ ಆರಂಭಿಸಿದ್ದು, ಇದೀಗ ಎಐಸಿಸಿ ಕ್ಲಸ್ಟರ್ ಉಸ್ತುವಾರಿಗಳಾಗಿ, ಸಚಿವರಾದ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಬಿ. ನಾಗೇಂದ್ರ, ಜಮೀರ್ ಅಹ್ಮದ್ ಖಾನ್, ಶಿವರಾಜ್ ಎಸ್ ತಂಗಡಗಿ, ಪ್ರಿಯಾಂಕ್ ಖರ್ಗೆ, ಎಂ ಸಿ

ವಿಧಾನಸಭಾ ಚುನಾವಣೆ/ ತೆಲಂಗಾಣದತ್ತ ಕರ್ನಾಟಕದ ಕಾಂಗ್ರೆಸ್ ನಾಯಕರು Read More »

ಕಡಬ: ಗಂಡ-ಹೆಂಡತಿ ಜಗಳ ವಿಷಸೇವನೆಯಲ್ಲಿ ಅಂತ್ಯ| ಪತ್ನಿ‌ ಸಾವು; ಪತಿ ಸ್ಥಿತಿ ಚಿಂತಾಜನಕ

ಸಮಗ್ರ ನ್ಯೂಸ್: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನುತ್ತಾರೆ. ಆದರೆ ಇಲ್ಲಿ ಗಂಡ –ಹೆಂಡತಿ ಜಗಳ ವಿಪರೀತ ಮಟ್ಟಕ್ಕೆ ತಿರುಗಿ ಸಾವಿನಲ್ಲಿ ಅಂತ್ಯವಾಗಿದೆ. ಈ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಚಾಪೆಲ್ಲ ಎಂಬಲ್ಲಿ ನ.04ರಂದು ಸಂಜೆ ನಡೆದಿದ್ದು, ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ನಿವಾಸಿಗಳಾದ ಸಂಜೀವ ಮತ್ತು ಕುಸುಮ ದಂಪತಿ ನಡುವೆ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಶನಿವಾರ ಕೂಡ ಮಾತಿಗೆ ಮಾತು ಬೆಳೆದಿದೆ. ಕೋಪದ ಭರದಲ್ಲಿ

ಕಡಬ: ಗಂಡ-ಹೆಂಡತಿ ಜಗಳ ವಿಷಸೇವನೆಯಲ್ಲಿ ಅಂತ್ಯ| ಪತ್ನಿ‌ ಸಾವು; ಪತಿ ಸ್ಥಿತಿ ಚಿಂತಾಜನಕ Read More »

ಸುಳ್ಯ: ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ವರದಿಯಾಗಿದೆ. ಪಂಜ ಸಮೀಪದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಮತ್ತು ಹೊನ್ನಮ್ಮ ದಂಪತಿಯ ಪುತ್ರ ಬಿಪಿನ್ ಚಿದ್ಗಲ್ಲು ಸಮುದ್ರ ಪಾಲಾದ ಯುವಕ. ಬಿಪಿನ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ನಿನ್ನೆ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದು, ಇಂದು(ನ.5) ಅಲ್ಲಿ ಬೀಚ್‌ಗೆ ಹೋಗಿದ್ದ ವೇಳೆ ಸಮುದ್ರ ಪಾಲಾಗಿದ್ದಾನೆ. ಆತನ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಊರಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ.

ಸುಳ್ಯ: ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು Read More »

ವಿಶ್ವಕಪ್ ಕ್ರಿಕೆಟ್| ಸಚಿನ್ ಸೇರಿ ದಿಗ್ಗಜರ ದಾಖಲೆ ಉಡೀಸ್ ಗೈದ ರಚೀನ್ ರವೀಂದ್ರ

ಸಮಗ್ರ ನ್ಯೂಸ್: ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್ ತಂಡದ ಯುವ ಆಟಗಾರ ರಚೀನ್ ರವೀಂದ್ರ ಪಾಕಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಹಲವರ ದಾಖಲೆಯನ್ನು ಮುರಿದಿದ್ದಾರೆ.ಇದು ರಚೀನ್​ ಅವರ ಚೊಚ್ಚಲ ವಿಶ್ವಕಪ್​ ಟೂರ್ನಿ ಇಲ್ಲಿ ಮೂರು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಚಿನ್​ ಪಾಕ್​ ಬೌಲರ್​ಗಳಿಗೆ ಸರಿಯಾಗಿ ದಂಡಿಸಿ ಮೆರೆದಾಡಿದರು. 94 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ

ವಿಶ್ವಕಪ್ ಕ್ರಿಕೆಟ್| ಸಚಿನ್ ಸೇರಿ ದಿಗ್ಗಜರ ದಾಖಲೆ ಉಡೀಸ್ ಗೈದ ರಚೀನ್ ರವೀಂದ್ರ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನ5 ರಿಂದ 11 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ. ಮೇಷ: ಮೇಷ ರಾಶಿಯವರಿಗೆ ಸ್ವತಂತ್ರವಾಗಿ ಗುರುವಿದ್ದು, ರಾಹು ಮೀನ ರಾಶಿಗೆ ಹೋಗಿದ್ದಾನೆ. ಲಗ್ನದಲ್ಲಿ ಗುರುವಿದ್ದರೂ ನಿಮಗೆ ಮಾರ್ಗವನ್ನು ತೋರಿ ಸದೃಢವಾದ ಕಾಯ ಕೊಟ್ಟು, ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ಆದರೂ, ಶೇಕಡ 100ರಷ್ಟು ಕೆಲಸ, ಕಾರ್ಯಗಳಲ್ಲಿ ಜಯಗಳಿಸಲು ನಿಮ್ಮ ಒಳ್ಳೆಯ ಸಮಯಕ್ಕಾಗಿ ಮೇ 1ನೇ ತಾರಿಕಿನವರೆಗೆ ಕಾಯಬೇಕು. ನಿಮಗೆ ಗುರುವು ಒಳ್ಳೆಯ ಫಲ ತರುತ್ತಾನೆ. ದತ್ತದೇವರ

ದ್ವಾದಶ ರಾಶಿಗಳ ವಾರಭವಿಷ್ಯ Read More »

ವಿರಾಜಪೇಟೆ:ಜಿಂಕೆ ಬೇಟೆ |ಇಬ್ಬರ ಬಂಧನ

ಸಮಗ್ರ ನ್ಯೂಸ್: ರಕ್ಷಿತಾರಣ್ಯದಲ್ಲಿ ಬೇಟೆಯಾಡಿ ಎರಡು ಜಿಂಕೆಗಳನ್ನು ಕೊಂದು ಮಾಂಸ ಮಾಡಿ ಇನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಯಶಸ್ವಿಯಾಗಿದ್ದಾರೆ. ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಎಂ.ಸಿ.ಮುತ್ತಣ್ಣ ಅವರಿಗೆ ದೊರೆತ ಖಚಿತ ವರ್ತಮಾನದ ಮೇಲೆನ. 3ರಂದು ಪೆರುoಬಾಡಿ ಕಡೆಯಿಂದ ಬಿಟ್ಟಂಗಾಲದತ್ತ ಸಾಗುತ್ತಿದ್ದ ಇನೋವಾ (KA 02 MA 7011) ಕಾರನ್ನು ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಹೆಗ್ಗಳ ಗ್ರಾಮದಲ್ಲಿ ತಡೆದು ನಿಲ್ಲಿಸಿ ತಪಾಸಣೆ

ವಿರಾಜಪೇಟೆ:ಜಿಂಕೆ ಬೇಟೆ |ಇಬ್ಬರ ಬಂಧನ Read More »

ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ| 6 ಮಂದಿ ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್: ಕೇರಳದ ಮಾನಂದವಾಡಿಯಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ. ಗೋಣಿಕೊಪ್ಪಲು ಹಾಗೂ ವಯನಾಡಿನ ಆರು ಮಂದಿ, ದಂತ ಸಹಿತ ಪೋಲಿಸ್ ವಶಕ್ಕೆ. ರಾಜ್ಯದಿಂದ ದಂತ ತೆಗೆದುಕೊಂಡು ಕೇರಳದಲ್ಲಿ ಮಾರಾಟಕ್ಕೆ ಯತ್ನ. ಮಾನಂದವಾಡಿ ಲಾಡ್ಜ್ ನಲ್ಲಿದ್ದ ಆರೋಪಿಗಳು ಕೇರಳ ಅರಣ್ಯ ಇಲಾಖೆಯ ಗುಪ್ತಚರ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳ ಜಂಟಿ ಕಾರ್ಯಾಚರಣೆ. ಆನೆ ದಂತ ಸಹಿತ ಲಾಡ್ಜ್ ನಲ್ಲಿ ತಂಗಿದ್ದ ಆರೋಪಿಗಳು ವಶಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪಲು ಪಟ್ಟಣದಲ್ಲಿ ಕೇರಳ ಪೊಲೀಸರಿಂದ ತನಿಖೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರ

ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ| 6 ಮಂದಿ ಪೊಲೀಸರ ವಶಕ್ಕೆ Read More »

ಮಡಿಕೇರಿ: ಲಾರಿ ಡಿಕ್ಕಿಯಾಗಿ ಪಲ್ಟಿಯಾದ ಕಾರು

ಸಮಗ್ರ ನ್ಯೂಸ್:ಬೆಂಗಳೂರಿನಿಂದ ಮಡಿಕೇರಿಯತ್ತ ತೆರಳುತ್ತಿದ್ದ ಕಾರಿಗೆ ಇಬ್ಬನಿ ರೆಸಾರ್ಟ್ ಸಮೀಪ ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿಗರಿದ್ದ ಕಾರು ಪಲ್ಟಿಯಾದ ಘಟನೆ ಸಂಭವಿಸಿದೆ. ಲಾರಿ ಅಪ್ಪಳಿಸಿದ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿ ಮಗುಚಿಕೊಂಡಿದೆ. ವೃದ್ದರೊಬ್ಬರ ಸಮೇತ ಕಾರಿನಲ್ಲಿದ್ದ ದಂಪತಿ ಮತ್ತು ಇಬ್ಬರು ಪುಟ್ಟ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮಡಿಕೇರಿ: ಲಾರಿ ಡಿಕ್ಕಿಯಾಗಿ ಪಲ್ಟಿಯಾದ ಕಾರು Read More »