November 2023

ಉಡುಪಿ: ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳು ಭಸ್ಮ| ದೀಪಾವಳಿ ಪೂಜೆಯ ಹೊತ್ತು‌ ನಡೆದ ಅಗ್ನಿ ಅವಘಡಕ್ಕೆ ಅಪಾರ ನಷ್ಟ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಗಂಗೊಳ್ಳಿಯ ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ಎಂಟು ಮೀನುಗಾರಿಕಾ ದೋಣಿಗಳು ಸೋಮವಾರ ಬೆಳಗಿನ ಜಾವ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಗೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ದೀಪಾವಳಿ ಹಬ್ಬದ ಅಂಗವಾಗಿ ಸಿಡಿಸಿದ ಪಟಾಕಿ ಕಿಡಿ ದೋಣಿಯ ಮೇಲೆ ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಇತರ ಮೂಲಗಳು ತಿಳಿಸಿವೆ. ಒಂದು ದೋಣಿಯಲ್ಲಿ ಮೊದಲಿಗೆ ಕಾಣಿಸಿಕೊಂಡ ಬೆಂಕಿಯು ಸ್ವಲ್ಪ ಸಮಯದಲ್ಲಿಯೇ ಲಂಗರು ಹಾಕಲಾಗಿದ್ದ ಇತರ ದೋಣಿಗಳಿಗೂ ಹರಡಿತು. […]

ಉಡುಪಿ: ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳು ಭಸ್ಮ| ದೀಪಾವಳಿ ಪೂಜೆಯ ಹೊತ್ತು‌ ನಡೆದ ಅಗ್ನಿ ಅವಘಡಕ್ಕೆ ಅಪಾರ ನಷ್ಟ Read More »

ರಾಜಧಾನಿಯಲ್ಲಿ ಮತ್ತೊಮ್ಮೆ ಅಗ್ನಿ ಅವಘಡ…

ಸಮಗ್ರ ಸಮಾಚಾರ: ಬೆಂಗಳೂರಿನಲ್ಲಿ ದಿನೇ ದಿನೇ ಬೆಂಕಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿದೆ. ನಿನ್ನೆ ತಡರಾತ್ರಿ ಬಾಣಸವಾಡಿ ಔಟರ್ ರಿಂಗ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡ ಧಗಧಗನೇ ಹೊತ್ತಿ ಉರಿದಿದೆ. ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಕೆಳ ಹಾಗೂ ಮೊದಲ ಮಹಡಿಯಲ್ಲಿ ಫರ್ನಿಚರ್ಸ್ ಶೋರೂಂ ಇತ್ತು. ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇತ್ತು. ಇನ್ನೂ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಸಾಫ್ಟ್​​ವೇರ್ ಕಂಪನಿಯೊಂದು ಕಾರ್ಯ ನಿರ್ವಹಿಸುತ್ತಿತ್ತು. ನಾಲ್ಕು ಅಂತಸ್ತಿಗೂ ಬೆಂಕಿ ವ್ಯಾಪಿಸಿದ್ದು, ಕಟ್ಟಡದಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.ಶಾಟ್​

ರಾಜಧಾನಿಯಲ್ಲಿ ಮತ್ತೊಮ್ಮೆ ಅಗ್ನಿ ಅವಘಡ… Read More »

ಕಡಬ: ಮಕ್ಕಳಾಗಿಲ್ಲ ಎಂದು ಸಾವಿಗೆ ಶರಣಾದ ವ್ಯಕ್ತಿ

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರುಮಕ್ಕಳಾಗಲಿಲ್ಲವೆಂದು ಮನನೊಂದು ಸಾವಿಗೆ ಶರಣಾದ ಘಟನೆ ಕಡಬ ತಾಲೂಕು ಕಾಣಿಯೂರು ಗ್ರಾಮದ ಅಬ್ಬಡದಲ್ಲಿ ಅ.12 ರಂದು ನಡೆದಿದೆ. ಮೃತಪಟ್ಟವರನ್ನು ಲೋಕಯ್ಯ (43 ವರ್ಷ) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಸಾವಿಗೆ ಶರಣಾಗಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಅವರು ಶೋಭಾ ಅನ್ನುವವರ ಜೊತೆ ವಿವಾಹವಾಗಿದ್ದರು. ಆದರೆ ಅವರಿಗೆ ಸಂತಾನ ಭಾಗ್ಯ ಒಲಿದು ಬಂದಿರಲಿಲ್ಲ. ಇದರಿಂದ ನೊಂದು ಮದ್ಯ ಸೇವನೆ ಮಾಡಲು ಶುರು ಮಾಡಿಕೊಂಡಿದ್ದರು. ಇತ್ತೀಚೆಗೆ ಸುಮಾರು 4 ವರ್ಷಗಳಿಂದ ಲೋಕಯ್ಯ

ಕಡಬ: ಮಕ್ಕಳಾಗಿಲ್ಲ ಎಂದು ಸಾವಿಗೆ ಶರಣಾದ ವ್ಯಕ್ತಿ Read More »

ತೆಂಗಿನೆಣ್ಣೆ ಎಂದು ಗೊತ್ತಿದ್ರೂ ಏನೆಂದು ಪ್ರಶ್ನಿಸಿದ KSRTC ನಿರ್ವಾಹಕ| ಬಾಂಬ್ ಎಂದು ಉತ್ತರಿಸಿದ ಮಹಿಳಾ ಪ್ರಯಾಣಿಕರ ಜೊತೆಗೆ ವಾಗ್ವಾದ| ಬಂಟ್ವಾಳ ಪೊಲೀಸರಿಗೆ ತಲೆನೋವಾದ ಕೋಳಿಜಗಳ!!

ಸಮಗ್ರ ನ್ಯೂಸ್: ಸರಕು ಸಾಗಾಟಕ್ಕೆ ಸಂಬಂಧಿಸಿ ಬಿ.ಸಿ.ರೋಡಿನಲ್ಲಿ ಕೆಎಸ್ಸಾರ್ಟಿಸಿ ಪ್ರಯಾಣಿಕರ ಮಧ್ಯೆ ವಾಗ್ವಾದದ ಎರಡನೇ ಘಟನೆ ವರದಿಯಾಗಿದ್ದು, ರವಿವಾರ ಮಂಗಳೂರಿನಿಂದ ಹಾಸನಕ್ಕೆ ತೆರಳುವ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತೆಂಗಿನೆಣ್ಣೆ ತುಂಬಿದ ಕ್ಯಾನ್‌ಗಳ ಜತೆ ಪ್ರಯಾಣಿಸುತ್ತಿದ್ದಾರೆ ಎಂದು ನಿರ್ವಾಹಕ ಇಳಿಸಿ ವಾಗ್ವಾದ ನಡೆಸಿದ್ದು, ಬಳಿಕ ಪೊಲೀಸರ ಮಾತುಕತೆಯಿಂದ ಮಹಿಳೆ ಅದೇ ಬಸ್ಸಿನಲ್ಲಿ ಪ್ರಯಾಣಿಸಿದರು. ರವಿವಾರ ಹಾಸನಕ್ಕೆ ತೆರಳುವ ಬಸ್ಸಿಗೆ ಮಂಗಳೂರಿನಲ್ಲಿ ಚೀಲವೊಂದನ್ನು ಹಿಡಿದು ಮಹಿಳೆ ಹತ್ತಿದ್ದರು. ನಿರ್ವಾಹಕ ಟಿಕೆಟ್‌ ನೀಡುವ ವೇಳೆ ಚೀಲದಲ್ಲೇನು ಎಂದು ಪ್ರಶ್ನಿಸಿದಾಗ ಮಹಿಳೆ ವ್ಯಂಗ್ಯವಾಗಿ

ತೆಂಗಿನೆಣ್ಣೆ ಎಂದು ಗೊತ್ತಿದ್ರೂ ಏನೆಂದು ಪ್ರಶ್ನಿಸಿದ KSRTC ನಿರ್ವಾಹಕ| ಬಾಂಬ್ ಎಂದು ಉತ್ತರಿಸಿದ ಮಹಿಳಾ ಪ್ರಯಾಣಿಕರ ಜೊತೆಗೆ ವಾಗ್ವಾದ| ಬಂಟ್ವಾಳ ಪೊಲೀಸರಿಗೆ ತಲೆನೋವಾದ ಕೋಳಿಜಗಳ!! Read More »

ಪುತ್ತೂರು: ಪುತ್ತಿಲ ಪರಿವಾರ ಕಾರ್ಯಕರ್ತನ‌ ಮೇಲೆ ಹಲ್ಲೆ ಯತ್ನ| ಹಿಂಜಾವೇ ಕಾರ್ಯಕರ್ತ ಅಜಿತ್ ಮೇಲೆ‌ ಮತ್ತೊಂದು ದೂರು‌ ದಾಖಲು

ಸಮಗ್ರ ನ್ಯೂಸ್: ಪುತ್ತಿಲ ಪರಿವಾರದ ಸದಸ್ಯನೋರ್ವನ ಮೇಲೆ ಹಲ್ಲೆಗೆ ಯತ್ನಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಸದಸ್ಯನ ಮೇಲೆ ಇದೀಗ ಮತ್ತೊಂದು ದೂರು ದಾಖಲಾಗಿದೆ. 5 ತಿಂಗಳ ಹಿಂದೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಘಟನೆಯ ಕುರಿತು ತಡವಾಗಿ ದೂರು ದಾಖಲು ಮಾಡಲಾಗಿದ್ದು ಪುತ್ತಿಲ ಪರಿವಾರದ ಸದಸ್ಯ ಮನೀಶ್ ಕುಲಾಲ್ ತಂದೆ ಪುತ್ತೂರು ನಗರ ಪೋಲೀಸ್ ಠನೆಗೆ ದೂರು ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಮುಖಂಡ ಅಜಿತ್ ರೈ ಹೊಸಮನೆ ವಿರುದ್ಧ ದೂರು ದಾಖಲಿಸಿದ್ದು, ಜುಲೈ 10 ರಂದು

ಪುತ್ತೂರು: ಪುತ್ತಿಲ ಪರಿವಾರ ಕಾರ್ಯಕರ್ತನ‌ ಮೇಲೆ ಹಲ್ಲೆ ಯತ್ನ| ಹಿಂಜಾವೇ ಕಾರ್ಯಕರ್ತ ಅಜಿತ್ ಮೇಲೆ‌ ಮತ್ತೊಂದು ದೂರು‌ ದಾಖಲು Read More »

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿ ಸದ್ದುಗಳೇ ಕೇಳಿ ಬರುತ್ತವೆ. ಇದರ ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯವನ್ನು ತರುತ್ತದೆ. ಇದೇ ರೀತಿ ಎಲ್ಲೆಡೆ ಸಂಭ್ರಮಾಚರಣೆ ನಡೆದರೆ, ತಮಿಳುನಾಡಿನ ಈ 7 ಹಳ್ಳಿಗಳ ಜನರು ಮಾತ್ರ ‘ಮೌನ ದೀಪಾವಳಿ’ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಏಳು ಹಳ್ಳಿಗಳು ಕೇವಲ ದೀಪಗಳು ಹಚ್ಚುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ್ದಾರೆ. ಇಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲಾಗಿದೆ. ಕಾರಣ ಈ

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು Read More »

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ?

ಸಮಗ್ರ ನ್ಯೂಸ್: ದೇಶವೇ ದೀಪಗಳಿಂದ ಜಗಮಗಿಸುತ್ತಿದ್ದು, ಎಲ್ಲೆಡೆ ಬೆಳಕಿನ-ಸುಡುಮದ್ದುಗಳ ಸಡಗರ ಕಂಡುಬರುತ್ತಿದ್ದರೆ ಇಲ್ಲೊಂದು ಕಡೆ ಮಾತ್ರ ವರ್ಷಗಟ್ಟಲೆ ಕಾಲದಿಂದ ದೀಪಾವಳಿ ಹಬ್ಬ ಆಚರಣೆಯನ್ನೇ ಮಾಡಿಲ್ಲ. ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆ ಗ್ರಾಮವೇ ಇಂಥದ್ದೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿನ ಅಯ್ಯಂಗಾರ್ ಸಮುದಾಯ ಸುಮಾರು 230 ವರ್ಷಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿಲ್ಲ. ನರಕ ಚತುರ್ದಶಿಯ ವಾರ್ಷಿಕ ಹಬ್ಬ ಆಚರಿಸಲು 1790ರಲ್ಲಿ ಶ್ರೀರಂಗಪಟ್ಟಣದ ನರಸಿಂಹ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ 800 ಅಮಾಯಕ ನಿರಾಯುಧ ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸುಲ್ತಾನ್ ಹತ್ಯೆ ಮಾಡಿಸಿದ್ದನು.

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ? Read More »

ಜೈಲು ಸೇರಿದ ಚೈತ್ರಾಳ ಮೇಲೆ ಆಫ್ರಿಕನ್ ರಿಂದ ದಾಳಿ| ಮಾತಿನ ಮಲ್ಲಿಯ ಮೇಲೆ‌ ಹಿಂಗ್ಯಾಕೆ ಮಾಡಿದ್ರು?

ಸಮಗ್ರ ನ್ಯೂಸ್: ಬೆಂಗಳೂರಿನ ಉದ್ಯಮಿಗೆ ಎಂಎಲ್‌ಎ ಟಿಕೆಟ್ ಕೊಡಿಸುತ್ತೇನೆಂದು ವಂಚಿಸಿದ ಆರೋಪದಲ್ಲಿ ಜೈಲು ಸೇರಿರುವ ಚೈತ್ರಾ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರುವ ಘಟನೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಹಿಳಾ‌ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಖೈದಿಗಳು ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಫ್ರಿಕನ್ ಮಹಿಳಾ ಖೈದಿಗಳು ಚೈತ್ರಾ ಮತ್ತು ಮೂವರು ಸ್ಥಳೀಯ ಖೈದಿಗಳ ಮೇಲೆ ಹಲ್ಲೆ

ಜೈಲು ಸೇರಿದ ಚೈತ್ರಾಳ ಮೇಲೆ ಆಫ್ರಿಕನ್ ರಿಂದ ದಾಳಿ| ಮಾತಿನ ಮಲ್ಲಿಯ ಮೇಲೆ‌ ಹಿಂಗ್ಯಾಕೆ ಮಾಡಿದ್ರು? Read More »

ವಿಶ್ವಕಪ್ ಕ್ರಿಕೆಟ್: ನೆದರ್ ಲ್ಯಾಂಡ್ಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಸಮಗ್ರ ನ್ಯೂಸ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ದ 160 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತದ ವಿರುದ್ದ ಹೋರಾಡಿದ ನೆದರ್ಲ್ಯಾಂಡ್ಸ್ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಬಲಿಷ್ಟ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶಗಳಿಗೆ ಸೋಲುಣಿಸಿದ್ದ ಡಚ್ ಪಡೆ ಈ ವಿಶ್ವಕಪ್ ನಲ್ಲಿ ಎಲ್ಲರ ಗಮನ ಸೆಳೆದಿತ್ತು. ಭಾರತ ನೀಡಿದ ಕಠಿಣ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ

ವಿಶ್ವಕಪ್ ಕ್ರಿಕೆಟ್: ನೆದರ್ ಲ್ಯಾಂಡ್ಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ Read More »

ಈ ದಿನಗಳಲ್ಲಿ ಬ್ಯಾಂಕ್​ಗೆ ಹೋಗಬೇಡಿ, ಹಾಲಿಡೇಸ್​ ಲಿಸ್ಟ್​ ಇಲ್ಲಿದೆ ನೋಡಿ

ದೇಶಾದ್ಯಂತ ಹಬ್ಬ ಹರಿದಿನಗಳು ನಡೆಯುತ್ತಿವೆ. ದೀಪಾವಳಿ, ವೈಫೊಂಟಾ ಮತ್ತು ಛತ್ ಈ ವಾರದ ದೊಡ್ಡ ಹಬ್ಬಗಳು ಸ್ವಾಭಾವಿಕವಾಗಿ, ಈ ಸಮಯದಲ್ಲಿ ಹೆಚ್ಚಿನ ಕಚೇರಿಗಳು ಆಫ್ ಆಗಿರುತ್ತವೆ. ಆದರೆ, ಬ್ಯಾಂಕ್ ಮುಚ್ಚುತ್ತದೆಯೇ ಎಂಬುದು ಪ್ರಶ್ನೆ. ರಜಾ ಪಟ್ಟಿಯ ಪ್ರಕಾರ, ನವೆಂಬರ್ 10 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ದೀಪಾವಳಿ ಹೊರತುಪಡಿಸಿ, ಗೋವರ್ಧನ ಪೂಜೆ, ವೈದುಜ್ ಸಂದರ್ಭದಲ್ಲಿ ದೇಶದ ಹಲವು ನಗರಗಳಲ್ಲಿ ನವೆಂಬರ್ 10 ರಿಂದ 15 ರವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ನವೆಂಬರ್‌ನಲ್ಲಿ 15 ದಿನಗಳ

ಈ ದಿನಗಳಲ್ಲಿ ಬ್ಯಾಂಕ್​ಗೆ ಹೋಗಬೇಡಿ, ಹಾಲಿಡೇಸ್​ ಲಿಸ್ಟ್​ ಇಲ್ಲಿದೆ ನೋಡಿ Read More »