November 2023

ಬಂದ್ ಆಗಲಿದೆ ಬೆಂಗಳೂರಿನ ಐಕಾನಿಕ್ ಹೋಟೆಲ್ ‘ನ್ಯೂ ಕೃಷ್ಣ ಭವನ’| ಏಳು ದಶಕಗಳ ನೆಚ್ಚಿನ ಹೊಟೇಲ್ ಬಂದ್ ಆಗಲು‌ ಕಾರಣವೇನು?

ಸಮಗ್ರ ನ್ಯೂಸ್: ಬೆಂಗಳೂರಿನ ಅತ್ಯಂತ ಹಳೆಯ ರೆಸ್ಟೋರೆಂಟ್​ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನವು ಡಿಸೆಂಬರ್​ 6 ರಿಂದ ಬಂದ್​ ಆಗಲಿದೆ. ಮಲ್ಲೇಶ್ವರಂನ ಹೃದಯ ಭಾಗದ ಸಂಪಿಗೆ ಥಿಯೇಟರ್​ ಎದುರಿರುವ ನ್ಯೂ ಕೃಷ್ಣ ಭವನ, ಸಸ್ಯಹಾರಿ ಊಟ, ಗ್ರೀನ್​ ಮಸಾಲೆ ಇಡ್ಲಿಗಳು, ಮಂಡ್ಯ ಶೈಲಿಯ ರಾಗಿ ದೋಸೆಗಳು ಮತ್ತು ಇನ್ನಿತರ ಸಸ್ಯಹಾರಿ ಅಡುಗೆಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇದೀಗ ಬಂದ್​ ಆಗಲಿದೆ ಎಂದು ​ರೆಸ್ಟೋರೆಂಟ್ ಮುಂಭಾಗದಲ್ಲಿ ಬ್ಯಾನ್​ರ್​ ಹಾಕಲಾಗಿದೆ. ಇದರಿಂದ ಗ್ರಾಹಕರಿಗೆ ಶಾಕ್​ ನೀಡಿದಂತಾಗಿದೆ. ಹಳೆಯ ಕಾಲದ ಆಕರ್ಷಣೆಯೊಂದಿಗೆ 1954 […]

ಬಂದ್ ಆಗಲಿದೆ ಬೆಂಗಳೂರಿನ ಐಕಾನಿಕ್ ಹೋಟೆಲ್ ‘ನ್ಯೂ ಕೃಷ್ಣ ಭವನ’| ಏಳು ದಶಕಗಳ ನೆಚ್ಚಿನ ಹೊಟೇಲ್ ಬಂದ್ ಆಗಲು‌ ಕಾರಣವೇನು? Read More »

ಡಿ.8 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೀಪೋತ್ಸವದ ಕಾರ್ಯಕ್ರಗಳು ಡಿಸೆಂಬರ್‌ ಎಂಟರಿಂದ ಆರಂಭಗೊಳ್ಳಲಿದ್ದು, ಡಿಸೆಂಬರ್‌ 12 ರಂದು ಲಕ್ಷ ದೀಪೋತ್ಸವ ನಡೆಯಲಿದೆ. ಅತಿ ಅದ್ಧೂರಿ ಹಾಗೂ ವಿಜೃಂಭಣೆಯಿಂದ ನಡೆಯುವ ಈ ದೇವತಾ ಕಾರ್ಯವು ಇತರೆ ಉತ್ಸವಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಐದು ದಿನಗಳ ಕಾಲ ನಡೆಯುವ ಮಂಜುನಾಥ ಸ್ವಾಮಿಯ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಲಕ್ಷ ದೀಪೋತ್ಸವದ ಜೊತೆಗೆ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಕೂಡ ನಡೆಲಿದೆ. ಜೊತೆಗೆ ಖ್ಯಾತ ವಿದ್ವಾಂಸರು, ಗಣ್ಯರು

ಡಿ.8 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ Read More »

ಮಂಗಳೂರು: ಭಿನ್ನಕೋಮಿನ ಜೋಡಿ ತಡೆದ‌ ಪ್ರಕರಣ| ಇಬ್ಬರು ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಬೈಕ್‌ನಲ್ಲಿ ಹೋಗುತ್ತಿದ್ದ ಭಿನ್ನ ಕೋಮಿನ ಯುವಕ ಮತ್ತು ಯುವತಿಯನ್ನು ತಡೆದು ತರಾಟೆಗೆ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಷಯ್‌ ರಾವ್‌ ಮತ್ತು ಶಿಬಿನ್‌ ಬಂಧಿತರು. ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ನಗರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಯುವತಿಯನ್ನು ಆರೋಪಿಗಳು ತಡೆದು ಪ್ರಶ್ನಿಸಿದ್ದರು. ಆಗ ಪೊಲೀಸರು ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಭಿನ್ನಕೋಮಿನ ಜೋಡಿ ತಡೆದ‌ ಪ್ರಕರಣ| ಇಬ್ಬರು ಆರೋಪಿಗಳ ಬಂಧನ Read More »

ಅಬ್ಬರಿಸಿದ ಮ್ಯಾಕ್ಸ್ ವೆಲ್| ಆಸೀಸ್ ಗೆ 5 ವಿಕೆಟ್ ಗಳ ಜಯ

ಸಮಗ್ರ ನ್ಯೂಸ್: ಗುವಾಹಟಿಯ ಬರ್ಸಾಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟಿ-20 ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಶತಕದ ಫಲವಾಗಿ ಆಸೀಸ್​ಗೆ 5 ವಿಕೆಟ್​ಗಳ ಜಯ ದಕ್ಕಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಆರಂಭಿಕ ಋತುರಾಜ್​ ಗಾಯಕ್ವಾಡ್ (123 ರನ್, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಸ್ಪೋಟಕ ಶತಕದ ಫಲವಾಗಿ ಟೀಂ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 222 ರನ್​ ಗಳಿಸಿತ್ತು. 223 ರನ್​ಗಳ ಗುರಿ

ಅಬ್ಬರಿಸಿದ ಮ್ಯಾಕ್ಸ್ ವೆಲ್| ಆಸೀಸ್ ಗೆ 5 ವಿಕೆಟ್ ಗಳ ಜಯ Read More »

ಎಲ್ಲಾ ತಾಲೂಕುಗಳಲ್ಲಿ ‘ಬಗರ್ ಹುಕುಂ’ ಸಮಿತಿ| 8 ತಿಂಗಳಲ್ಲಿ ಜಮೀನು ಸಕ್ರಮಕ್ಕೆ ಕ್ರಮ

ಸಮಗ್ರ ನ್ಯೂಸ್: ಭೂರಹಿತ ಸಾಗುವಳಿದಾರರ ಜಮೀನು ಸಕ್ರಮೀಕರಣಗೊಳಿಸುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ಕಂಡು ಬಂದ ಹಿನ್ನಲೆಯಲ್ಲಿ, ಎಲ್ಲಾ ತಾಲೂಕುಗಳಲ್ಲೂ ಶೀಘ್ರದಲ್ಲೇ ಬಗರ್ ಹುಕುಂ ಸಮಿತಿಗಳನ್ನು ರಚಿಸಿ, ಮುಂದಿನ 8 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿದಾರರು ಸಕ್ರಮಕ್ಕಾಗಿ ಈವರೆಗೆ 9.29 ಲಕ್ಷ ಅರ್ಜಿ ಸಲ್ಲಿಸಿದ್ದಾರೆ. ಸಕ್ರಮೀಕರಣಗೊಳಿಸಲು ಪರಿಶೀಲನೆ ನಡೆಸಿದಾಗ ಹಲವು ಅಕ್ರಮಗಳು ಬಯಲಾಗಿವೆ ಎಂದರು. ಒಬ್ಬನೇ 25 ಅರ್ಜಿಗಳನ್ನು ಹಾಕಿರುವುದು, ಸಾಗುವಳಿ

ಎಲ್ಲಾ ತಾಲೂಕುಗಳಲ್ಲಿ ‘ಬಗರ್ ಹುಕುಂ’ ಸಮಿತಿ| 8 ತಿಂಗಳಲ್ಲಿ ಜಮೀನು ಸಕ್ರಮಕ್ಕೆ ಕ್ರಮ Read More »

ಹೊಸ ಸೊಂಕು ಪತ್ತೆ… ಮತ್ತೆ ಶುರುವಾಯ್ತು ಮಾಸ್ಕ್

ಸಮಗ್ರ ನ್ಯೂಸ್: ಕೊರೊನದಿಂದ ಜನ ಬೇಸತ್ತು ಇನ್ನೂ ಹೊರಬಂದಿಲ್ಲ, ಅದ್ರೆ ಇದೀಗ ಚೀನಾದ ಹೊಸ ಸೊಂಕಿನ ಆತಂಕ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಮತ್ತೆ ಮಾಸ್ಕ್ ಧರಿಸಲು ಆದೇಶಿಸಿದೆ.ಕೆಮ್ಮುವಾಗ ಸಮವಸ್ತ್ರದಿಂದ ಬಾಯಿ ಮೂಗು ಮುಚ್ಚಿಕೊಳ್ಳುವುದು. ಕೈಯನ್ನು ಆಗಾಗಾ ಸ್ವಚ್ಛವಾಗಿ ತೊಳೆಯುವುದು, ಅನಗತ್ಯವಾಗಿ ಕಣ್ಣು, ಮೂಗು ಮುಟ್ಟಬೇಡಿ ಎಂದು ಆದೇಶಿಸಿದೆ.ಜನಸಂದಣಿ ಜಾಗದಲ್ಲಿ ಮಾಸ್ಕ್ ಬಳಸಬೇಕು, ನೀರು ಚೆನ್ನಾಗಿ ಕುಡಿಯಬೇಕು, ಪೌಷ್ಟಿಕ ಆಹಾರ ಸೇವಿಸುವಂತೆ ಹೇಳಿದ್ದಾರೆ. ರೋಗದ ಲಕ್ಷಣ ಕಂಡು ಬಂದಲ್ಲಿ

ಹೊಸ ಸೊಂಕು ಪತ್ತೆ… ಮತ್ತೆ ಶುರುವಾಯ್ತು ಮಾಸ್ಕ್ Read More »

ಸುಳ್ಯ: ಅಮಲಿನ ನಶೆಯಲ್ಲಿ ರಾಂಗ್ ಡ್ರೈವ್| ಸರ್ಕಾರಿ ವಾಹನ ತಡೆದು, ಅಧಿಕಾರಿಯ ತರಾಟೆಗೈದ ಸಾರ್ವಜನಿಕರು

ಸಮಗ್ರ ನ್ಯೂಸ್: ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಘಟನೆ ಸೋಮವಾರ(ನ.27) ರಾತ್ರಿ ನಡೆದಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ

ಸುಳ್ಯ: ಅಮಲಿನ ನಶೆಯಲ್ಲಿ ರಾಂಗ್ ಡ್ರೈವ್| ಸರ್ಕಾರಿ ವಾಹನ ತಡೆದು, ಅಧಿಕಾರಿಯ ತರಾಟೆಗೈದ ಸಾರ್ವಜನಿಕರು Read More »

ಕುಕ್ಕೆ ಸುಬ್ರಹ್ಮಣ್ಯ: ಹೃದಯಾಘಾತದಿಂದ ಯಾತ್ರಾರ್ಥಿ ಮಹಿಳೆ ಸಾವು

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಬೆಂಗಳೂರಿನ ಎಂವಿ ಗಾರ್ಡನ್‌ ನಿವಾಸಿ ಶಿವಕುಮಾರ್‌ ಅವರ ಪತ್ನಿ ಲಕ್ಷ್ಮೀ (32) ಮೃತರು. ಶಿವಕುಮಾರ್‌ ಅವರು ಪತ್ನಿ, ಮಕ್ಕಳೊಂದಿಗೆ ಸಕಲೇಶಪುರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಲಕ್ಷ್ಮೀ ಹಾಗೂ ಮಕ್ಕಳು ಸಂಬಂಧಿಕರ ಜತೆ ಧರ್ಮಸ್ಥಳಕ್ಕೆ ತೆರಳಿ ರವಿವಾರ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ರಾತ್ರಿ ಲಕ್ಷ್ಮೀ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗೆ ಕಡಬ ಸರಕಾರಿ

ಕುಕ್ಕೆ ಸುಬ್ರಹ್ಮಣ್ಯ: ಹೃದಯಾಘಾತದಿಂದ ಯಾತ್ರಾರ್ಥಿ ಮಹಿಳೆ ಸಾವು Read More »

ಕೊಡಗು ಮೈಸೂರು ಲೋಕಸಭಾ ಚುನಾವಣೆ| ಕಾಂಗ್ರೆಸ್ ನಿಂದ ಯಾರೇ ಸ್ಪಧಿ೯ಸಿದರೂ 2 ಲಕ್ಷ ಮತಗಳ ಅಂತರದಿಂದ ಗೆಲವು – ಪ್ರತಾಪ್ ಸಿಂಹ

ಸಮಗ್ರ ನ್ಯೂಸ್: ಮೈಸೂರಿನಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಸಂಸದ ಈ ಬಾರಿ ಜೆಡಿಎಸ್ ಕೂಡ ಬಿಜೆಪಿ ಜತೆ ಮೈತ್ರಿಯಾಗಿದೆ. ಜೆಡಿಎಸ್ ಸಹಕಾರ ನೀಡಿರುವುದು ಬಿಜೆಪಿಗೆ ಮತ್ತಷ್ಟು ಬಲಬಂದಂತಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಮೋದಿ ಅವರ ಅಭಿಮಾನಿಗಳಿದ್ದಾರೆ. ಮೋದಿ ಅವರು ದೇಶಕ್ಕಾಗಿ ಮಾಡಿರುವ ಕಾಯ೯ಗಳು, ಯೋಜನೆಗಳನ್ನು ಮೆಚ್ಚಿರುವ ಜನ ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಇವರೆಲ್ಲರ ಸಹಕಾರ ಬಿಜೆಪಿಗೆ ಮತ್ತೊಮ್ಮೆ ದೊರಕಲಿದೆ. ಹೀಗಾಗಿ 2 ಲಕ್ಷ ಮತಗಳ ಅಂತರದ ಗೆಲವು ಸುಲಭ ಸಾಧ್ಯವಾಗಲಿದೆ. ಡಿಸೆಂಬರ್ ನಲ್ಲಿ ಮೈಸೂರು – ಕುಶಾಲನಗರ ಚತುಷ್ಪಥ

ಕೊಡಗು ಮೈಸೂರು ಲೋಕಸಭಾ ಚುನಾವಣೆ| ಕಾಂಗ್ರೆಸ್ ನಿಂದ ಯಾರೇ ಸ್ಪಧಿ೯ಸಿದರೂ 2 ಲಕ್ಷ ಮತಗಳ ಅಂತರದಿಂದ ಗೆಲವು – ಪ್ರತಾಪ್ ಸಿಂಹ Read More »

ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಖಾಸಗಿ ವಾಹನ‌ ಬಳಕೆಗೆ ಸರ್ಕಾರದಿಂದ ಬ್ರೇಕ್

ಸಮಗ್ರ‌ ನ್ಯೂಸ್: ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಶಾಲಾ, ಕಾಲೇಜುಗಳ ಶೈಕ್ಷಣಿಕ ಪ್ರವಾಸಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಇದರ ನಡುವೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಖಾಸಗಿ ವಾಹನಗಳ ಬಳಸಿ ಪ್ರವಾಸ ಹೊರಡುವುದಕ್ಕೆ ರಾಜ್ಯದ ಶಿಕ್ಷಣ ಇಲಾಖೆ ಬ್ರೇಕ್‌ ಹಾಕಿದೆ. ಶಾಲಾ ಶೈಕ್ಷಣಿಕ ಪ್ರವಾಸವನ್ನು ಕಡ್ಡಾಯವಾಗಿ ಕೆಎಸ್‌ಆರ್‌ಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ವಾಹನಗಳಲ್ಲಿ ಮಾತ್ರ ತೆರಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ಹಾಗು ಖಾಸಗಿ ವಾಹನಗಳಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಮಾಡಬಾರದೆಂದು ಶಿಕ್ಷಣ ಇಲಾಖೆ ಆಯುಕ್ತರು ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಹತ್ವದ

ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಖಾಸಗಿ ವಾಹನ‌ ಬಳಕೆಗೆ ಸರ್ಕಾರದಿಂದ ಬ್ರೇಕ್ Read More »