November 2023

ದೇವಸ್ಥಾನದ ಆವರಣದಲ್ಲಿ ಪುರಾತನ ಆಭರಣ, ನಿಧಿ ಪತ್ತೆ

ಸಮಗ್ರ ನ್ಯೂಸ್:ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದಪುರ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಬಳಿ ಪುರಾತನ ಆಭರಣಗಳು ಹಾಗೂ ನಿಧಿ ಪತ್ತೆಯಾಗಿದೆ. ವಿರಾಜಪೇಟೆ ಸಿದ್ದಾಪುರ ಮಾರ್ಗ ಮಧ್ಯದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಪುರಾತನ ಈಶ್ವರ ದೇವಸ್ಥಾನವು ಟಾಟಾ ಕಾಫಿ ಸಂಸ್ಥೆಗೆ ಸೇರಿದ ಜಾಗದಲ್ಲಿ ದೇವಸ್ಥಾನವಿದ್ದು ತೋಟ ಕಾರ್ಮಿಕರು ಕೆಲಸ ನಿರ್ವಹಿಸುತಿದ್ದ ವೇಳೆ ಭೂಮಿಯಡಿಯಲ್ಲಿ ಕುಡಿಕೆಯಲ್ಲಿ ಆಭರಣಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ. ತೋಟದ ವ್ಯವಸ್ಥಾಪಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ […]

ದೇವಸ್ಥಾನದ ಆವರಣದಲ್ಲಿ ಪುರಾತನ ಆಭರಣ, ನಿಧಿ ಪತ್ತೆ Read More »

ಮೂಡಿಗೆರೆ: ಬೈಕ್ ಗೆ ಲಾರಿ ಡಿಕ್ಕಿ| ಸವಾರ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಬೈಕ್ ಗೆ ತರಕಾರಿ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಿದರನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವರನ್ನು ಮೂಡಿಗೆರೆ ತಾಲೂಕಿನ ಕೆಂಜಿಗೆ ಸಮೀಪದ ಬಾಳೆಹಳ್ಳಿಯ ಮಂಜುನಾಥ್ ಎಂದು ಗುರುತಿಸಲಾಗಿದೆ. ಅವರ ತಂದೆಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಗಳೂರಿಗೆ ಹೋಗುತ್ತಿದ್ದ ಲಾರಿ ಅವಸರದಿಂದ ಬಂದ ರಭಸಕ್ಕೆ ಮೃತದೇಹವನ್ನು 1 ಕಿ.ಮೀ. ಎಳೆದೊಯ್ದ ಲಾರಿಯೂ ಪಲ್ಟಿಯಾಗಿದೆ. ಈ ಬಗ್ಗೆ ಮೂಡಿಗೆರೆ

ಮೂಡಿಗೆರೆ: ಬೈಕ್ ಗೆ ಲಾರಿ ಡಿಕ್ಕಿ| ಸವಾರ ಸ್ಥಳದಲ್ಲೇ ಸಾವು Read More »

ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲೊಂದು ವಿಕೃತ ಪ್ರಕರಣ| ಮೂತ್ರಶಂಕೆಗೆ ತೆರಳಿದ್ದ ಏಳರ ಬಾಲಕಿ ಮೇಲೆ ಅತ್ಯಾಚಾರ

ಸಮಗ್ರ ನ್ಯೂಸ್: ಮೂತ್ರಶಂಕೆಗೆ ತೆರಳಿದ್ದ ಏಳು ವರ್ಷದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ನಡೆಸಲಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಾಣಿಯೂರು ಎಂಬಲ್ಲಿಂದ ವರದಿಯಾಗಿದೆ. ಆರೋಪಿಯನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾಗೇಶ(24) ಎಂದು ಗುರುತಿಸಲಾಗಿದೆ. ಈತ ಮಹಾರಾಷ್ಟ್ರ ಮೂಲದ ಕೂಲಿ ಕಾರ್ಮಿರರೋರ್ವರ ಏಳು ವರ್ಷದ ಮಗಳು ಮೂತ್ರ ಮಾಡಲೆಂದು ತೆರಳಿದ್ದ ವೇಳೆ ಪೊದೆಯ ಮರೆಗೆ ಕರೆದೊಯ್ದು ಮಲಗಿಸಿ ಬಲವಂತವಾಗಿ ಸಂಭೋಗಿಸಿದ್ದಾನೆ ಎಂದು ದೂರಲಾಗಿದೆ. ಘಟನೆಯಲ್ಲಿ ಬಾಲಕಿ ರಕ್ತಸ್ರಾವಗೊಂಡು ತೀವ್ರವಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ

ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲೊಂದು ವಿಕೃತ ಪ್ರಕರಣ| ಮೂತ್ರಶಂಕೆಗೆ ತೆರಳಿದ್ದ ಏಳರ ಬಾಲಕಿ ಮೇಲೆ ಅತ್ಯಾಚಾರ Read More »

ಕರ್ನಾಟಕದ ಶಾಸಕರ ಹೆಗಲಲ್ಲಿ ರಾರಾಜಿಸಲಿದೆ ಗಂಡಭೇರುಂಡ

ಸಮಗ್ರ ನ್ಯೂಸ್: ಕರ್ನಾಟಕದ ಅಧಿಕೃತ ಲಾಂಛನ ಗಂಡಬೇರುಂಡ ಇನ್ನು ಶಾಸಕರ ಹೆಗಲಿನಲ್ಲಿ ರಾರಾಜಿಸಲಿದೆ. ಕರ್ನಾಟಕದ ಉಭಯ ಸದನಗಳ ಶಾಸಕರು ಇನ್ನು ಮುಂದೆ ಅಧಿವೇಶನಗಳಿಗೆ ಹಾಜರಾಗುವಾಗ ಗಂಡಬೇರುಂಡ ಲಾಂಛನವನ್ನು ಧರಿಸಲಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಿಂದ ಶಾಸಕರು ಮತ್ತು ಎಂಎಲ್‌ಸಿಗಳು ತಮ್ಮ ಭುಜದ ಎಡಭಾಗದಲ್ಲಿ ಬ್ಯಾಡ್ಜ್‌ಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಶಾಸಕರು ರಾಜ್ಯ ಮತ್ತು ದೇಶದ ಹೊರಗೆ ಪ್ರಯಾಣಿಸುವಾಗ ಅವುಗಳನ್ನು ಧರಿಸಬೇಕೆಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 4 ರಂದು ಬೆಳಗಾವಿ ಅಧಿವೇಶನ ಆರಂಭವಾಗಲಿದೆ. ಇತ್ತೀಚೆಗೆ ಹೊರರಾಜ್ಯದಿಂದ ಚುನಾಯಿತ ಪ್ರತಿನಿಧಿಗಳು

ಕರ್ನಾಟಕದ ಶಾಸಕರ ಹೆಗಲಲ್ಲಿ ರಾರಾಜಿಸಲಿದೆ ಗಂಡಭೇರುಂಡ Read More »

ಮಹಿಳೆಯರಿಗೆ ಗುಡ್ ನ್ಯೂಸ್| ಶಕ್ತಿ ಯೋಜನೆ ಪ್ರಯಾಣ ಈಗ ಇನ್ನಷ್ಟು ಸುಲಭ

ಸಮಗ್ರ ನ್ಯೂಸ್: ಸರ್ಕಾರದ ಶಕ್ತಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ವತಿಯಿಂದ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಮಹಿಳೆಯರು ಕೆಎಸ್​ಆರ್​ಟಿಸಿ ಬಸ್​ ನಲ್ಲಿ ಪ್ರಯಾಣಿಸುವಾಗ ಇನ್ಮುಂದೆ ಮೊಬೈಲ್‌ನಲ್ಲಿ ಆಧಾರ್‌ ಕಾರ್ಡ್‌ ತೋರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ. ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಮೂಲ, ನಕಲು, ಡಿಜಿ ಲಾಕರ್ ಪ್ರತಿ ತೋರಿಸಿ ಪ್ರಯಾಣ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಅಧಿಕೃತ

ಮಹಿಳೆಯರಿಗೆ ಗುಡ್ ನ್ಯೂಸ್| ಶಕ್ತಿ ಯೋಜನೆ ಪ್ರಯಾಣ ಈಗ ಇನ್ನಷ್ಟು ಸುಲಭ Read More »

ಚಾಮರಾಜನಗರದ 7 ಗ್ರಾಮಗಳಿಗಿಲ್ಲ ದೀಪಾವಳಿಯ ಸಂಭ್ರಮ

ಸಮಗ್ರ ಸಮಾಚಾರ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ತುಂಬಾ ಜೋರಿದೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಈ ಕಳೆ ಕಾಣುತ್ತಿಲ್ಲ, ಯಾಕೆ ಹಬ್ಬದ ಸಂಭ್ರಮವಿಲ್ಲ? ಹಬ್ಬ ಆಚರಿಸುವುದಿಲ್ವ ಹೀಗೆ ನಾನಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.ಚಾಮರಾಜನಗರದ ಏಳು ಗ್ರಾಮಗಳಲ್ಲಿ ದೀಪಾವಳಿಯ ಸಡಗರ ಸಂಭ್ರಮ ಯಾವುದೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಮಂಗಳವಾರ ಹಬ್ಬ ಬಂದಿರುವುದು. ಹಾಗಾದರೆ ಈ ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಯಾವಾಗ ಆಚರಿಸುತ್ತಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ

ಚಾಮರಾಜನಗರದ 7 ಗ್ರಾಮಗಳಿಗಿಲ್ಲ ದೀಪಾವಳಿಯ ಸಂಭ್ರಮ Read More »

ಬಲಿಪಾಡ್ಯಮಿಯ ವಿಶೇಷತೆ; ಒಂದು ಮೇಲ್ನೋಟ| ದಾನವ ಅರಸನ‌ ವಾಮನ ತುಳಿದದ್ದೇಕೆ?

ಸಮಗ್ರ ವಿಶೇಷ: ದೀಪಗಳ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿ ವಿರುದ್ಧದ ಶಿಷ್ಟ ರಕ್ಷಣೆಯ ಸಂಕೇತವನ್ನು ಸೂಚಿಸುವ ಈ ಹಬ್ಬವನ್ನು ಮನೆಗಳು, ದೇವಾಲಯ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ಕಥೆಯ

ಬಲಿಪಾಡ್ಯಮಿಯ ವಿಶೇಷತೆ; ಒಂದು ಮೇಲ್ನೋಟ| ದಾನವ ಅರಸನ‌ ವಾಮನ ತುಳಿದದ್ದೇಕೆ? Read More »

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ

ಸಮಗ್ರ ಸಮಾಚಾರ: ಮಧ್ಯಪ್ರದೇಶ ಚುನಾವಣೆಗೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನತೆಗೆ ಗುಡ್​ ನ್ಯೂಸ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ಶ್ರೀರಾಮನ ಉಚಿತ ದರ್ಶನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಹಂತ ಹಂತವಾಗಿ ಮಧ್ಯಪ್ರದೇಶದ ಜನರನ್ನು ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ Read More »

ಮದೆನಾಡು:ಕಾಡಾನೆ ಹಾವಳಿ| ಗ್ರಾಮಸ್ಥರಿಂದ ಆಕ್ರೋಶ

ಸಮಗ್ರ ನ್ಯೂಸ್:ಮದೆನಾಡು ಗ್ರಾಮದ ಬೆಟ್ಟತ್ತೂರು ಭಾಗದಲ್ಲಿ ಕಾಡಾನೆ ಹಾವಳಿ. ಕಾಫಿ,ತೆಂಗಿನಗಿಡ ,ಬಾಳೆಗಿಡ ಬೆಳೆ ನಾಶಕಾಡಾನೆ ಹಾವಳಿ ತಡೆಗಟ್ಟುವಂತೆ ಸ್ಥಳೀಯ ನಿವಾಸಿಗಳಿಂದ ಅರಣ್ಯ ಇಲಾಖೆಗೆ ಒತ್ತಾಯ ಸಮಸ್ಯೆ ಬಗೆಹರಿಸದಿದ್ದಲ್ಲಿ ಮಡಿಕೇರಿ ಅರಣ್ಯ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ಎಚ್ಚರಿಕೆ. ಅಳಲು ತೊಡಿಕೊಂಡ ಗ್ರಾಮಸ್ಥರು.

ಮದೆನಾಡು:ಕಾಡಾನೆ ಹಾವಳಿ| ಗ್ರಾಮಸ್ಥರಿಂದ ಆಕ್ರೋಶ Read More »

ಕೊಡಗಿನ ಹುತ್ತರಿ/ ನವೆಂಬರ್ 27ರಂದು ಇಗ್ಗುತಪ್ಪ ದೇವಾಲಯದಲ್ಲಿ ಆಚರಣೆ

ಕೊಡಗಿನ ಸುಗ್ಗಿ ಹಬ್ಬ ಎಂದು ಪ್ರಸಿದ್ದವಾಗಿರುವ ಹುತ್ತರಿಗೆ ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಕರೆಯಲ್ಪಡುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಮ್ಮಂಗಲ ಜ್ಯೋತಿಷ್ಯರು ನವೆಂಬರ್ 27ರಂದು ಮಹೂರ್ತ ನಿಗದಿ ಮಾಡಿದರು. ನವೆಂಬರ್ 27ರ ರಾತ್ರಿ 7.20ಕ್ಕೆ ನೆರೆ ಕಟ್ಟುವುದು, ರಾತ್ರಿ 8.20ಕ್ಕೆ ಕದಿರು ಕುಯ್ಯುವುದು ಮತ್ತು ರಾತ್ರಿ 9.20ಕ್ಕೆ ಪ್ರಸಾದ ಸ್ವೀಕಾರ ಕಾರ್ಯಕ್ರಮ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆಯಲಿದೆ. ಕೊಡಗಿನ ಇತರ ಕಡೆಗಳಲ್ಲಿ ರಾತ್ರಿ 7.45ಕ್ಕೆ ನೆರೆ ಕಟ್ಟುವುದು, ರಾತ್ರಿ 8.45ಕ್ಕೆ ಕದಿರು

ಕೊಡಗಿನ ಹುತ್ತರಿ/ ನವೆಂಬರ್ 27ರಂದು ಇಗ್ಗುತಪ್ಪ ದೇವಾಲಯದಲ್ಲಿ ಆಚರಣೆ Read More »