November 2023

ಹವಾಮಾನ ವರದಿ| ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಮುಂದಿನ ನಾಲ್ಕು ದಿನಗಳ‌ ಕಾಲ ರಾಜ್ಯದ ಹಲವೆಡೆ ಉತ್ತಮ‌ ಮಳೆಯಾಗುವ ಸಾಧ್ಯತೆ ಇದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಟಿಸಿದೆ. ದಕ್ಷಿಣ ಒಳನಾಡಿನ ಜಿಲ್ಲೆಯಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ರಾಮನಗರ, ಮೈಸೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ, ತುಮಕೂರು, ವಿಜಯನಗರದ ಅಲ್ಲಲ್ಲಿ ಮಳೆಯಾಗಬಹುದು. ಕೆಲವೆಡೆ ಮೋಡ ಕವಿದ ವಾತಾವರಣ ಇರಬಹುದು. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯಾವುದೇ ಮಳೆ […]

ಹವಾಮಾನ ವರದಿ| ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಮಳೆ ಸಾಧ್ಯತೆ Read More »

ವಿದ್ಯುತ್ ಕಳ್ಳತನ ಆರೋಪ| ಮಾಜಿ ಸಿಎಂ ಎಚ್.ಡಿ.ಕೆ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ವಿದ್ಯುತ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ FIR ದಾಖಲಾಗಿದೆ. ಬೆಸ್ಕಾಂ ಅಧಿಕಾರಿಯೊಬ್ಬರ ದೂರಿನ ಆಧಾರದಲ್ಲಿ ಜಯನಗರ ಬೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೆಪಿ ನಗರ ನಿವಾಸಕ್ಕೆ ಎಚ್‌ಡಿ ಕುಮಾರಸ್ವಾಮಿ ಅವರು ವಿದ್ಯುತ್ ಅಲಂಕಾರ ಮಾಡಿದ್ದರು. ಇದಕ್ಕೆ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಇದು ಕಾನೂನು ಬಾಹಿರವಾಗಿದ್ದು, ಈ ಹಿನ್ನೆಲೆ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135 ಅಡಿಯಲ್ಲಿ ಪ್ರಕರಣ

ವಿದ್ಯುತ್ ಕಳ್ಳತನ ಆರೋಪ| ಮಾಜಿ ಸಿಎಂ ಎಚ್.ಡಿ.ಕೆ ವಿರುದ್ಧ ಎಫ್ಐಆರ್ Read More »

ಕುಶಾಲನಗರದಲ್ಲಿ‌ ಕೇರಳದ ವಾಹನ ಅಡ್ಡಗಟ್ಟಿ ದರೋಡೆ| ಇಬ್ಬರ ಬಂಧನ

ಸಮಗ್ರ ನ್ಯೂಸ್: ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಕೇರಳದ ವಾಹನವನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿದ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಆರು ಜನರ ಇರುವ ತಂಡ ಬೆಂಗಳೂರಿನಿಂದ ಕಾಸರಗೋಡು ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಲೋಹಿತ್ ದಾಸನ್ ಹಾಗೂ ಜೈಸಿತ್ ಎಂಬುವವರ ವಾಹನವನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದಾರೆ. ನಂತರ ಅದೇ ವಾಹನವನ್ನು ಸಿದ್ದಾಪುರ ರಸ್ತೆಯ ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾಗ, ವಾಹನವು ಮಗಚಿಕೊಂಡಿದೆ. ಪೊಲೀಸರು ತನಿಖೆ ಕೈಗೊಂಡಿದ್ದು ಇನ್ನುಳಿದ ನಾಲ್ಕು ಆರೋಪಿಗಳ ಬಂಧನಕ್ಕಾಗಿ ಕ್ರಮ

ಕುಶಾಲನಗರದಲ್ಲಿ‌ ಕೇರಳದ ವಾಹನ ಅಡ್ಡಗಟ್ಟಿ ದರೋಡೆ| ಇಬ್ಬರ ಬಂಧನ Read More »

ಚೆಂಬು ಕಳ್ಳತನ ಆಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ದಿನನಿತ್ಯ ಕಳ್ಳತನ ದರೋಡೆ, ಕೊಲೆ ಕೇಸ್ ಗಳನ್ನು ಪೊಲೀಸರು ಕೇಳಿರುತ್ತಾರೆ ಆದರೆ ಪೊಲೀಸರಿಗೆ ಇದೊಂದು ವಿಚಿತ್ರ ಕೇಸ್ ಪತ್ತೆಯಾಗಿದೆ. ಕಳ್ಳತನ ಕೇಸ್ ಅಂತ ಹೋದ ಹೊಯ್ಸಳ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಕಳ್ಳತನ ಆಗಿದೆ ಅಂತ ಕಂಟ್ರೋಲ್ ರೂಂಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಈ ವೇಳೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಫುಲ್ ಗಲಿಬಿಲಿಗೊಂಡಿದ್ದಾರೆ. ಕಸಿವಿಸಿ ಅನುಭವಿಸಿದ್ದಾರೆ. ಸ್ಥಳಕ್ಕೆ ಹೋದ ಪೊಲೀಸರಿಗೆ ಟಾಯ್ಲೆಟ್ ನಲ್ಲಿ ಬಳಸುವ ಚೆಂಬು ಕಳ್ಳತನ ಆಗಿದೆ ಎಂದು ಆ ವ್ಯಕ್ತಿ ಮಾಹಿತಿ

ಚೆಂಬು ಕಳ್ಳತನ ಆಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ Read More »

ಉಡುಪಿ: ತಾಯಿ ಮತ್ತು ಮಕ್ಕಳ ಹತ್ಯೆ ಪ್ರಕರಣ|ಆರೋಪಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಿದ್ದಾರೆ. ಪ್ರವೀಣ್​​​​ ಅರುಣ್​​​ ಚೌಗಲೆ ಬಂಧಿತ ಆರೋಪಿ. ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್​​​​ ಅರುಣ್​​​ ಚೌಗಲೆ CRPF ಸಿಬ್ಬಂದಿಯಾಗಿದ್ದ. ಕುಡಚಿಯ ಸಂಬಂಧಿ ಮನೆಯಲ್ಲಿ ಅಡಗಿ ಕುಳಿತಿದ್ದ ಪ್ರವೀಣ್​ ನನ್ನು ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಆರೋಪಿ ಅರೆಸ್ಟ್​​ ಮಾಡಲಾಗಿದೆ. ನವೆಂಬರ್​ 12ರಂದು ಉಡುಪಿಯ ಮನೆಗೆ ಬಂದು ಪಾಪಿ ತಾಯಿ ಮೂವರು ಮಕ್ಕಳಾದ

ಉಡುಪಿ: ತಾಯಿ ಮತ್ತು ಮಕ್ಕಳ ಹತ್ಯೆ ಪ್ರಕರಣ|ಆರೋಪಿ ಪೊಲೀಸ್ ವಶಕ್ಕೆ Read More »

ಹೆಚ್​​ಡಿಕೆ ಮೇಲೆ ಬಂತು ಕರೆಂಟ್ ಕದ್ದಿರೋ ಆರೋಪ

ಸಮಗ್ರಸಮಾಚಾರ: ರಾಜ್ಯ ರಾಜಕಾರಣದಲ್ಲಿ ಇದೀಗ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳತನದ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಕುಮಾರಸ್ವಾಮಿ ಮನೆ ವಿದ್ಯುತ್ ಅಲಂಕಾರಕ್ಕೆ ವಿದ್ಯುತ್ ಅನ್ನು ಅಕ್ರಮವಾಗಿ ಬಳಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಉಚಿತ ವಿದ್ಯುತ್ ಬೇಕಿದ್ರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಸಲ್ಲಿಸಬಹುದಿತ್ತು ಅಲ್ಲವಾ ಎಂದು ವ್ಯಂಗ್ಯ ಮಾಡಿದೆ. ನಿವಾಸಕ್ಕೆ ವಿದ್ಯುತ್ ಕಂಬದಿಂದ ವೈರ್ ಎಳೆದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​ ಕಾರ್ಪ್​ ನಲ್ಲಿ ಕಾಂಗ್ರೆಸ್ ಹಂಚಿಕೊಂಡಿದೆ. ಒಬ್ಬ ಮಾಜಿ ಸಿಎಂ

ಹೆಚ್​​ಡಿಕೆ ಮೇಲೆ ಬಂತು ಕರೆಂಟ್ ಕದ್ದಿರೋ ಆರೋಪ Read More »

ವೈದ್ಯಕೀಯ ಸಾಹಿತ್ಯ ಜನ ಮಾನಸಕ್ಕೆ ತಲುಪಲಿ:ಡಾ ಚಕ್ರಪಾಣಿ

ಸಮಗ್ರ ನ್ಯೂಸ್: ಡಾ|ಚೂಂತಾರು ಅವರು ಬರೆದ ಧನ್ವಂತರಿ ಪುಸ್ತಕವು ವಿವಿಧ ರೋಗ ಲಕ್ಷಣಗಳು ಹಾಗೂ ವಿವರವನ್ನು ನೀಡುವ ಕೃತಿಯಾಗಿದ್ದು ಓಡಿಸಿಕೊಂಡು ಹೋಗುವ ಗುಣವುಳ್ಳ ಭಾಷೆ ಹೊಂದಿದೆ. ಜೀವನ ಶೈಲಿ ಬದಲಾಯಿಸಿಕೊಂಡು ರೋಗದಿಂದ ದೂರ ಉಳಿಯಬಹುದಾದ ಸಲಹೆಗಳು ಮತ್ತು ಭವಿಷ್ಯದಲ್ಲಿ ವೈದ್ಯಕೀಯ ಎಂಬ ವೈದ್ಯಕೀಯ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬಲ್ಲ ಅಧ್ಯಾಯ ಹೊಂದಿದೆ. ವೈದ್ಯ ನಿಂತ ನೀರಾಗದೆ ನಿರಂತರ ಅಧ್ಯಯನ/ಅಭ್ಯಾಸಶೀಲನಾಗಬೇಕು ಎಂದು ಡಾ. ಶಿಕಾರಿಪುರ ಕೃಷ್ಣಮೂರ್ತಿ ನುಡಿದರು. ಪುಸ್ತಕ ವನ್ನು ಲೋಕಾರ್ಪಣೆ ಗೊಳಿಸಿದ ಡಾ ಚಕ್ರಪಾಣಿ ಅವರು ಇಂತಹ ಕೃತಿಗಳಿಂದ

ವೈದ್ಯಕೀಯ ಸಾಹಿತ್ಯ ಜನ ಮಾನಸಕ್ಕೆ ತಲುಪಲಿ:ಡಾ ಚಕ್ರಪಾಣಿ Read More »

ಇಸ್ರೇಲ್ ವಶಕ್ಕೆ ಗಾಜಾ/ ಹಮಾಸ್ ಆಳ್ವಿಕೆ ಅಂತ್ಯ

ಸಮಗ್ರ ನ್ಯೂಸ್: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಇದೀಗ ಗಾಜಾ ಪಟ್ಟಿಯನ್ನು ಇಸ್ರೇಲ್ ವಸಪಡಿಸಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್‍ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, 16 ವರ್ಷಗಳಿಂದ ಹಮಾಸ್ ಗಾಜಾಪಟ್ಟಿಯ ಮೇಲೆ ಆಳ್ವಿಕೆ ನಡೆಸಿದ್ದು, ಈ ಆಳ್ವಿಕೆ ಇಂದು ಅಂತ್ಯವಾಗಿದ್ದು, ಗಾಜಾ ಸಂಪೂರ್ಣವಾಗಿ ಇಸ್ರೇಲ್‍ನ ವಶಕ್ಕೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಗಾಜಾ ಮೇಲಿನ ಅಧಿಕಾರವನ್ನು ಹಮಾಸ್ ಕಳೆದುಕೊಂಡಿದ್ದು, ಉಗ್ರರೆಲ್ಲ ದಕ್ಷಿಣದ ಕಡೆಗೆ ಪರಾರಿಯಾಗುತ್ತಿದ್ದಾರೆ. ಹಮಾಸ್ ಪ್ರಾರಂಭಿಸಿದ ಯುದ್ಧಕ್ಕೆ ನಾವು ಅಂತ್ಯ ಹಾಡುತ್ತೇವೆ. ಹಮಾಸ್ ಹಲವಾರು

ಇಸ್ರೇಲ್ ವಶಕ್ಕೆ ಗಾಜಾ/ ಹಮಾಸ್ ಆಳ್ವಿಕೆ ಅಂತ್ಯ Read More »

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ/ ಉಗ್ರ ಸಂಘಟನೆಗಳ ನಿಷೇಧಿಸಿದ ಕೇಂದ್ರ

ಸಮಗ್ರ ನ್ಯೂಸ್: ಮಣಿಪುರದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿನಡೆಸುತ್ತಿರುವ ಒಂಬತ್ತು ಮೈತೇಯಿ ಉಗ್ರ ಸಂಘಟನೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ, ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್, ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್, ಮಣಿಪುರ ಪೀಪಲ್ಸ್ ಆರ್ಮಿ, ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್, ರೆಡ್ ಆರ್ಮಿ, ಕಂಗ್ಲೇಪಾಕ್ ಕಮ್ಯುನಿಸ್ಟ್ ಪಾರ್ಟಿ, ಕಂಗ್ಲೇ ಯೋಲ್ ಕನ್ಬಾ ಲುಪ್ಸ, ಮನ್ವಯ ಸಮಿತಿ ಮತ್ತು ಅಲಯನ್ಸ್ ಫಾರ್ ಸೋಷಿಯಲಿಸ್ಟ್ ಯೂನಿಟಿ ಕಂಗ್ಲೀಪಾಕ್ ಅನ್ನು ನಿಷೇಧಿಸಲಾಗಿದೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ/ ಉಗ್ರ ಸಂಘಟನೆಗಳ ನಿಷೇಧಿಸಿದ ಕೇಂದ್ರ Read More »

ಪೊನ್ನಂಪೇಟೆ: ಸಂತ ಅಂತೋಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ

ಸಮಗ್ರ ನ್ಯೂಸ್: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಕೊಡಗು ಪದವಿ ಪೂರ್ವ ಕಾಲೇಜಿನಿಂದ ಪ್ರತಿನಿದಿಸಿದ ಪ್ರಜ್ವಲ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ರಾಷ್ಟ್ರ ಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆ ಆಗಿದ್ದು ಮುಂದಿನ ತಿಂಗಳು ಮಹಾರಾಷ್ಟ್ರದಲ್ಲಿ ನಡೆಯಲಿದೆ. ಈ ವಿದ್ಯಾರ್ಥಿ ಸಂತ ಅಂತೋಣಿ ಪದವಿ ಪೂರ್ವ ಕಾಲೇಜು ಪೊನ್ನಂಪೇಟೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿತಿದ್ದು, ಸುರೇಶ್ ಕುಮಾರ್ ಮತ್ತು ಉಷಾರಾಣಿ ಎಂ ಜಿ. ದಂಪತಿಗಳ ಪುತ್ರರಾಗಿದ್ದಾರೆ.

ಪೊನ್ನಂಪೇಟೆ: ಸಂತ ಅಂತೋಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ Read More »