November 2023

ಸಿದ್ದರಾಮಯ್ಯ ವಿರುದ್ಧ ಹೇಳಿಕೆ/ ಸೂಲಿಬೆಲೆ ವಿರುದ್ಧದ ಎಫ್‍ಐಆರ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹೇಳಿಕೆ ಹಿನ್ನಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ನೀಡಿದ ಹೇಳಿಕೆ ವಿರುದ್ಧ ಕಾರವಾರ ಗ್ರಾಮಾಂತರ ಪೋಲೀಸರು ಎಫ್‍ಐಆರ್ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಹೈಕೋರ್ಟ್‍ಗೆ ಅಪೀಲ್ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಎಫ್‍ಐಆರ್ ಗೆ ತಡೆ ನೀಡಿ, ವಿಚಾರಣೆಯನ್ನು ಮುಂದೂಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಹೇಳಿಕೆ/ ಸೂಲಿಬೆಲೆ ವಿರುದ್ಧದ ಎಫ್‍ಐಆರ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್ Read More »

ಅಕ್ರಮ ವಿದ್ಯುತ್ ಸಂಪರ್ಕ/ ಕುಮಾರಸ್ವಾಮಿಗೆ 68 ಸಾವಿರ ದಂಡ ವಿಧಿಸಿದ ಬೆಸ್ಕಾಂ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೀಪಾವಳಿ ಹಬ್ಬದಂದು ಜೆ ಪಿ ನಗರದ ತಮ್ಮ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು 68 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ಪ್ರಕರಣ ದಂಡ ವಿಧಿಸಿರುವ ಬೆಸ್ಕಾಂ, ದಂಡದ ಮೊತ್ತವನ್ನು ಏಳು ದಿನಗಳ ಒಳಗಾಗಿ ಪಾವತಿ ಮಾಡುವಂತೆ ಸೂಚಿಸಿದೆ. ವಿದ್ಯುತ್ ಕಳ್ಳತನ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಫ್‍ಐಆರ್ ದಾಖಲಾಗಿ, ಬೆಸ್ಕಾಂ

ಅಕ್ರಮ ವಿದ್ಯುತ್ ಸಂಪರ್ಕ/ ಕುಮಾರಸ್ವಾಮಿಗೆ 68 ಸಾವಿರ ದಂಡ ವಿಧಿಸಿದ ಬೆಸ್ಕಾಂ Read More »

ಮಕ್ಕಳಿಗಾಗಿ ರಾಗಿ ಮಾಲ್ಟ್ ಭಾಗ್ಯ ಯೋಜನೆ/ ಮುಂದಿನ ತಿಂಗಳಿನಿಂದ ಜಾರಿ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಪೋಷಕಾಂಶ ನೀಡುವ ನಿಟ್ಟಿನಲ್ಲಿ, ಮುಂದಿನ ತಿಂಗಳಿನಿಂದ ಶಾಲಾ ಮಕ್ಕಳಿಗಾಗಿ ರಾಗಿ ಮಾಲ್ಟ್ ಭಾಗ್ಯ ಯೋಜನೆಗೆ ಚಾಲನೆ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್ ನೀಡುವ ಕುರಿತು ನಿರ್ಧಾರ ಮಾಡಲಾಗಿದೆ ಎಂದು ಅವರು ಪತ್ರಕರ್ತರ ಜೊತೆ ತಿಳಿಸಿದರು.

ಮಕ್ಕಳಿಗಾಗಿ ರಾಗಿ ಮಾಲ್ಟ್ ಭಾಗ್ಯ ಯೋಜನೆ/ ಮುಂದಿನ ತಿಂಗಳಿನಿಂದ ಜಾರಿ Read More »

ಯೋಗೀಶ್ ಹೊಸೋಳಿಕೆ ಸಂಪಾದನೆಯ ಎಲಾಡಿಕೆ ಕೃತಿ ಬಿಡುಗಡೆ

ಸಮಗ್ರ ನ್ಯೂಸ್: ಯೋಗೀಶ್ ಹೊಸೋಳಿಕೆ ಸಂಪಾದನೆಯ ಮದುವೆ ನೆನಪಿನ ಕುರಿತ ಮೊತ್ತ ಮೊದಲ ಅರೆಭಾಷೆಯ ಎಲಾಡಿಕೆ ಕೃತಿಯು ನ. 14ರಂದು ಹೊಸೋಳಿಕೆ ಕಟ್ಟೆಮನೆ ದೈವಸ್ಥಾನದಲ್ಲಿ ದೀಪಾವಳಿ ಆಚರಣೆಯೊಂದಿಗೆ ಕುಟುಂಬಸ್ಥರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ವಿಶಿಷ್ಟ ರೀತಿಯಲ್ಲಿ ಬಿಡುಗಡೆಗೊಂಡಿತು. ಗುತ್ತಿಗಾರು ಕಿರಣ ರಂಗ ಅಧ್ಯಯನ ಸಂಸ್ಥೆ ಪುಸ್ತಕ ಪ್ರಕಟಿಸಿ, ಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಪುಸ್ತಕ ಬಿಡುಗಡೆ ಗೊಳಿಸಿದರು. ಕುಟುಂಬದ ಅಧ್ಯಕ್ಷ ಎಚ್.ಬಿ. ಕೇಶವ ಹೊಸೋಳಿಕೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಿರಣ ಸಂಸ್ಥೆ

ಯೋಗೀಶ್ ಹೊಸೋಳಿಕೆ ಸಂಪಾದನೆಯ ಎಲಾಡಿಕೆ ಕೃತಿ ಬಿಡುಗಡೆ Read More »

ಸುಳ್ಯ: ನೈತಿಕ ಪೊಲೀಸ್ ಗಿರಿ ಹಿನ್ನಲೆ| ಐದು ಮಂದಿ ಮೇಲೆ ಗಡಿಪಾರು ಆದೇಶ

ಸಮಗ್ರ ನ್ಯೂಸ್: ಕರ್ನಾಟಕ ಪೋಲಿಸ್ ಅಧಿನಿಯಮ 1953 ರ ಕಲಂ 55 ಪ್ರಕಾರ ಬಳ್ಳಾರಿ ಜಿಲ್ಲೆಗೆ ಲತೀಶ್ ಗುಂಡ್ಯ ಸೇರಿದಂತೆ ಐವರ ಮೇಲೆ ಗಡಿಪಾರು ಆದೇಶ ಹೊರಡಿಸಲಾಗಿದೆ. ನೈತಿಕ ಪೊಲೀಸ್ ಗಿರಿ ಸೇರಿದಂತೆ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಇದೀಗ ಪೊಲೀಸರು ಮತ್ತೆ ಗಡಿಪಾರು ಅಸ್ತ್ರ ಪ್ರಯೋಗ ಮಾಡಿದ್ದು ಜಿಲ್ಲೆಯ ಐದು ಮಂದಿ ಬಜರಂಗದಳ ಸಂಘಟನೆಯ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಜರಂಗದಳ ಕಾರ್ಯಕರ್ತ ಲತೀಶ್ ಗುಂಡ್ಯ, ಪ್ರಜ್ವಲ್,

ಸುಳ್ಯ: ನೈತಿಕ ಪೊಲೀಸ್ ಗಿರಿ ಹಿನ್ನಲೆ| ಐದು ಮಂದಿ ಮೇಲೆ ಗಡಿಪಾರು ಆದೇಶ Read More »

ಉಡುಪಿ: ತಾಯಿ ಮಕ್ಕಳ ಕಗ್ಗೊಲೆ ಪ್ರಕರಣ| ಸ್ಥಳ ಮಹಜರು ವೇಳೆ ಆಕ್ರೋಶಿತರಿಂದ ಹಲ್ಲೆಗೆ ಯತ್ನ

ಸಮಗ್ರ ನ್ಯೂಸ್: ಉಡುಪಿಯ ನೇಜಾರು ತೃಪ್ತಿ ಲೇಔಟ್‌ ನಲ್ಲಿ ನಡೆದ ತಾಯಿ, ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯನ್ನು ಪೊಲೀಸರು ಸ್ಥಳ ಮಹಜರು ನಡೆಸಲು ಕರೆ ತಂದ ವೇಳೆ ಸ್ಥಳದಲ್ಲಿ ಸೇರಿದ್ದ ಆಕ್ರೋಶಿತರ ಗುಂಪು ಆರೋಪಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಹಜರು ನಡೆಸುವ ವೇಳೆ ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಒತ್ತಾಯಿಸಿದ್ದ ಆಕ್ರೋಶಿತ ಗುಂಪು, ಆತನಿಗೆ ಬದುಕುವ

ಉಡುಪಿ: ತಾಯಿ ಮಕ್ಕಳ ಕಗ್ಗೊಲೆ ಪ್ರಕರಣ| ಸ್ಥಳ ಮಹಜರು ವೇಳೆ ಆಕ್ರೋಶಿತರಿಂದ ಹಲ್ಲೆಗೆ ಯತ್ನ Read More »

ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐನಿಂದ ಮಹತ್ವದ ಸೂಚನೆ| ಸಾಲ ನೀಡದಂತೆ ನಿರ್ದೇಶನ|ಯಾರಿಗೆ? ಯಾಕೆ?

ಸಮಗ್ರ ನ್ಯೂಸ್: ಹಣಕಾಸು ಸಂಸ್ಥೆಗಳು ಹಾಗೂ ಆರ್ಥಿಕ ವಹಿವಾಟಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವ ಅವಕಾಶ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಕ್ಷಣದಿಂದಲೇ ಜಾರಿಗೆ ಬರುವಂಥ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಪ್ರಮುಖವಾಗಿ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್​ಬಿಐ ಈ ನಿರ್ದೇಶನವನ್ನು ನೀಡಿದೆ. ಆರ್ಥಿಕ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಬಜಾಜ್​ ಫೈನಾನ್ಸ್​ ಲಿ. ಕಂಪನಿಗೆ ಆರ್​​ಬಿಐ ಈ ನಿರ್ದೇಶನ ನೀಡಿದೆ. ಕಂಪನಿಯು ತನ್ನ ಎರಡು ಸಾಲ ಯೋಜನೆಗಳಾದ ಇಕಾಮ್​ ಮತ್ತು ಇನ್​ಸ್ಟಾ ಇಎಂಐ ಕಾರ್ಡ್​ ಅನ್ವಯ

ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐನಿಂದ ಮಹತ್ವದ ಸೂಚನೆ| ಸಾಲ ನೀಡದಂತೆ ನಿರ್ದೇಶನ|ಯಾರಿಗೆ? ಯಾಕೆ? Read More »

ಕೇರಳ ಅರಣ್ಯ ಪ್ರದೇಶ ವ್ಯಾಪ್ತಿಯ ಬಿರುನಾಣಿ ಸಮೀಪ ನೆನ್ನೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ|ಓರ್ವ ನಕ್ಸಲನಿಗೆ ಗಾಯ

ಸಮಗ್ರ ನ್ಯೂಸ್: ಕೇರಳದ ಕಣ್ಣೂರು ಜಿಲ್ಲೆ ವ್ಯಾಪ್ತಿಯ ಕೊಡಗಿನ ಬಿರುನಾಣಿ ಗಡಿ ಭಾಗದಲ್ಲಿ ನಕ್ಸಲ್ ನಿಗ್ರಹ ತಂಡ ಹಾಗೂ ನಕ್ಸಲರ ನಡುವೆ ನ. 13ರಂದು ಗುಂಡಿನ ಚಕಮುಕಿ ನಡೆದು ಒರ್ವ ನಕ್ಸಲನಿಗೆ ಗಾಯವಾಗಿದೆ. ಗಾಯಗೊಂಡ ನಕ್ಸಲ್ ಶ್ರೀಮಂಗಳ ಕುಟ್ಟ ವ್ಯಾಪ್ತಿಯ ಆಸ್ಪತ್ರೆ ಅಥವಾ ಔಷಧಿ ಮಳಿಗೆಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಕುಟ್ಟ ಗಡಿ ಭಾಗ ಹಾಗೂ ಅದರ ವ್ಯಾಪ್ತಿಯಲ್ಲಿ ಬಿಗಿ ನಾಕಬಂದಿ ಹಾಕಿದ್ದು ದಿನದ 24 ಗಂಟೆ ಬಿಗಿ ಪೊಲೀಸ್ ತಪಾಸಣಾ ಕಾರ್ಯ, ಹಾಗೂ ಹೆಚ್ಚಿನ

ಕೇರಳ ಅರಣ್ಯ ಪ್ರದೇಶ ವ್ಯಾಪ್ತಿಯ ಬಿರುನಾಣಿ ಸಮೀಪ ನೆನ್ನೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ|ಓರ್ವ ನಕ್ಸಲನಿಗೆ ಗಾಯ Read More »

ಮನೆಗೆ ನುಗ್ಗಿದ ರಾಕೇಟ್ ಪಟಾಕಿ|ಬಟ್ಟೆ, ಸಾಮಾಗ್ರಿ ದಹಿಸಿದ ಬೆಂಕಿ

ಸಮಗ್ರ ನ್ಯೂಸ್: ದೀಪಾವಳಿ ಹಬ್ಬಕ್ಕೆ ಹಚ್ಚಿದ ರಾಕೇಟ್ ಪಟಾಕಿ ಮನೆಯೊಳಗೆ ನುಸುಳಿದ ಪರಿಣಾಮ ಬಟ್ಟೆ ಹಾಗೂ ಇತರೆ ಸಾಮಾಗ್ರಿಗಳು ಸುಟ್ಟು ನಷ್ಟ ಉಂಟಾಗಿರುವ ಘಟನೆ ವರದಿಯಾಗಿದೆ. ಮಡಿಕೇರಿಯ ಮಹದೇವಪೇಟೆ ರಸ್ತೆಯಲ್ಲಿರುವ ಕನಿಕಾ ಪರಮೇಶ್ವರಿ ದೇವಾಲಯ ಮುಂಭಾಗದಲ್ಲಿ ಬಶೀರ್ ಎಂಬುವವರಿಗೆ ಸೇರಿದ ಕಟ್ಟಡವಿದ್ದು ಈ ಮನೆಯಲ್ಲಿ ನಯಾಜ್ ಎಂಬುವರು ಬಾಡಿಗೆಗೆ ವಾಸವಾಗಿದ್ದಾರೆ. ರಾತ್ರಿ ಯಾರೋ ಬೆಂಕಿ ಹೊತ್ತಿಸಿ ಹಾರಿ ಬಿಟ್ಟ ರಾಕೇಟ್ ಪಟಾಕಿ ಮನೆಯ ಕಿಟಕಿ ಮೂಲಕ ಹಾದು ಬಂದು ಸಿಡಿದಿದೆ. ಇದರಿಂದ ಬಟ್ಟೆ ಹಾಗೂ ಇತರೆ ವಸ್ತುಗಳು

ಮನೆಗೆ ನುಗ್ಗಿದ ರಾಕೇಟ್ ಪಟಾಕಿ|ಬಟ್ಟೆ, ಸಾಮಾಗ್ರಿ ದಹಿಸಿದ ಬೆಂಕಿ Read More »

ದೀಪಾವಳಿ ವೇಳೆ ಹಲವು ಜಿಲ್ಲೆ ಗಳಲ್ಲಿ ಹೆಚ್ಚಿದ ವಾಯುಮಾಲಿನ್ಯ|ಮಡಿಕೇರಿಯಲ್ಲಿ ಉತ್ತಮ ಗಾಳಿ ಗುಣಮಟ್ಟ ದಾಖಲೆ

ಸಮಗ್ರ ನ್ಯೂಸ್: ಬೆಂಗಳೂರಿನ ಜಯನಗರದಲ್ಲೇ ಅತಿ ಹೆಚ್ಚು ಎಕ್ಯೂಐ ದಾಖಲು.ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟು ಆತಂಕ ಸೃಷ್ಟಿಸಿರುವ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮೂರು ದಿನ ಕಾಲ ವಾಯು ಗುಣಮಟ್ಟ ಸೂಚ್ಯಂಕ( ಎಕ್ಯೂಐ) ಹೆಚ್ಚಳವಾಗಿ ಕಳಪೆ ಮಟ್ಟಕ್ಕೆ ತಲುಪಿದೆ. ದೀಪಾವಳಿ ನಿಮಿತ್ತ ಸಾರ್ವಜನಿಕರು ಪಟಾಕಿ ಸುಟ್ಟ ಪರಿಣಾಮ ನ.12ರಿಂದ ನ.14ರವರೆಗೆ ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರಿನ ಜಯನಗರದಲ್ಲಿ ಅತಿ ಹೆಚ್ಚು ಎಕ್ಯೂಐ ದಾಖಲಾಗಿದೆ. ಮಂಗಳೂರು, ಬೀದರ್, ತುಮಕೂರು ಕ್ರಮವಾಗಿ ನಂತರ ಸ್ಥಾನಗಳಿವೆ.

ದೀಪಾವಳಿ ವೇಳೆ ಹಲವು ಜಿಲ್ಲೆ ಗಳಲ್ಲಿ ಹೆಚ್ಚಿದ ವಾಯುಮಾಲಿನ್ಯ|ಮಡಿಕೇರಿಯಲ್ಲಿ ಉತ್ತಮ ಗಾಳಿ ಗುಣಮಟ್ಟ ದಾಖಲೆ Read More »