November 2023

ಉಡುಪಿ: ಕಟಪಾಡಿ ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ

ಸಮಗ್ರ ನ್ಯೂಸ್: ರೈಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಉಡುಪಿಯ ಕಟಪಾಡಿ ಸಮೀಪದ ಅಚ್ಚಡ ಬಳಿ ನಡೆದಿದೆ. ರೈಲು ಹಳಿಯಲ್ಲಿ ಓಡಾಡುವ ವೇಳೆ ಮುಂಜಾನೆ 4.30ರ ಸುಮಾರಿಗೆ ಸಂಚರಿಸುವ ವೇಳೆ ರೈಲು ಡಿಕ್ಕಿ ಹೊಡೆದಿರಬಹುದು ಅಥವಾ ರೈಲಿನಿಂದ ಆಯ ತಪ್ಪಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.ಸಮಾಜ ಸೇವಕರಾದ ಸೂರಿ ಶೆಟ್ಟಿ ಕಾಪು, ಆಸ್ಟಿನ್ ಕೋಟ್ಯಾನ್ ಕಟಪಾಡಿ, ಆಂಬುಲೆನ್ಸ್ ಚಾಲಕ ನಾಗರಾಜ ಛಿದ್ರಗೊಂಡಿರುವ ಯುವಕನ ಶವವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ […]

ಉಡುಪಿ: ಕಟಪಾಡಿ ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ Read More »

ನನ್ನನ್ನು ವಿರೋಧಿಸಿದರೆ, ಮೋದಿ ಅವರನ್ನು ವಿರೋಧಿಸಿದಂತೆ: ಬಿ. ವೈ. ವಿಜಯೇಂದ್ರ

ಸಮಗ್ರ ನ್ಯೂಸ್: ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ನರೇಂದ್ರ ಮೋದಿಯವರು. ಹಾಗಾಗಿ ನನ್ನನ್ನು ವಿರೋಧಿಸಿದರೆ, ಪ್ರಧಾನಿ ಮೋದಿ ಅವರನ್ನು ವಿರೋಧಿಸಿದಂತೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ. ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದವರು ಯಾರು? ಯಡಿಯೂರಪ್ಪನಾ? ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಸಚಿವ ಪ್ರಹ್ಲಾದ್ ಜೋಷಿ, ಬಿ. ಎಲ್.

ನನ್ನನ್ನು ವಿರೋಧಿಸಿದರೆ, ಮೋದಿ ಅವರನ್ನು ವಿರೋಧಿಸಿದಂತೆ: ಬಿ. ವೈ. ವಿಜಯೇಂದ್ರ Read More »

“ಸಪ್ತಸಾಗರದಾಚೆ ಎಲ್ಲೋ”/ ಎರಡನೇ ಭಾಗ ಇಂದು ತೆರೆಗೆ

ಸಮಗ್ರ ನ್ಯೂಸ್: ಜನಮೆಚ್ಚುಗೆಗೆ ಪಾತ್ರವಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಎರಡನೇ ಭಾಗ ಇಂದು ತೆರೆ ಕಾಣುತ್ತಿದೆ. ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿದ್ದ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಮೊದಲ ಭಾಗದ ಕೊನೆಯಲ್ಲಿ ನಾಯಕ ಜೈಲು ಸೇರಿದ್ದ. ಇದೀಗ ತೆರೆ ಮೇಲೆ ಬರುತ್ತಿರುವ ಎರಡನೇ ಭಾಗವು ನಾಯಕ ಜೈಲಿನಿಂದ ಹೊರಬಂದ ನಂತರದ ಕಥೆಯನ್ನು ಹೊಂದಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ,

“ಸಪ್ತಸಾಗರದಾಚೆ ಎಲ್ಲೋ”/ ಎರಡನೇ ಭಾಗ ಇಂದು ತೆರೆಗೆ Read More »

ಸುಳ್ಯ: ಗ್ರಾಹಕರ ಜೊತೆಗೆ ಉದ್ದಟತನ ಮೆರೆದ ಮೆಸ್ಕಾ ಎಇ ಸುಪ್ರೀತ್ ಸಸ್ಪೆಂಡ್

ಸಮಗ್ರ ನ್ಯೂಸ್: ಗ್ರಾಹಕರ ಜೊತೆಗೆ ದೂರವಾಣಿಯಲ್ಲಿ ಅನುಚಿತವಾಗಿ ಮಾತನಾಡಿದ ಸುಳ್ಯ ಮೆಸ್ಕಾಂ ಎಇ ಸುಪ್ರೀತ್ ರನ್ನು ಸಸ್ಪೆಂಡ್ ಮಾಡಲಾಗಿದೆ. ವಿದ್ಯುತ್ ಸಪ್ಲೈ ಬಗ್ಗೆ ಗ್ರಾಹಕರೊಬ್ಬರು ಸಮಸ್ಯೆ ಹೇಳಿಕೊಂಡಿದ್ದು ಈ ವೇಳೆ ಗ್ರಾಹಕರ ಜೊತೆಗೆ ಸುಪ್ರೀತ್ ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿದ್ದು, ಸುಪ್ರೀತ್ ಕುಮಾರ್ ರವರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಅನುಚಿತ ಮಾತುಗಳ ಆಡಿಯೋ ವೈರಲ್ ಆಗಿರುವುದರಿಂದ ಮೆಸ್ಕಾಂನ ಘನತೆಗೆ ಕುಂದುಂಟಾಗಿರುವುದರಿಂದ ಸುಪ್ರೀತ್ ರನ್ನು ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಸುಳ್ಯ: ಗ್ರಾಹಕರ ಜೊತೆಗೆ ಉದ್ದಟತನ ಮೆರೆದ ಮೆಸ್ಕಾ ಎಇ ಸುಪ್ರೀತ್ ಸಸ್ಪೆಂಡ್ Read More »

ಸುಳ್ಯದಲ್ಲಿ `ಶೋ’ ತೋರಿಸಿ ಗುಜುರಿ ಪಾಲಾಯಿತೇ ‘ಮತ್ಸ್ಯವಾಹಿನಿ’| ಏಕಾಏಕಿ ತ್ರಿಚಕ್ರ ವಾಹನಗಳನ್ನು ಹೊತ್ತೊಯ್ದದ್ದೆಲ್ಲಿಗೆ?

ಸಮಗ್ರ ನ್ಯೂಸ್: ಸ್ವ ಉದ್ಯೋಗಕ್ಕಾಗಿ ಕಳೆದ 8 ತಿಂಗಳ ಹಿಂದೆ ಸುಳ್ಯಕ್ಕೆ ಬಂದಿದ್ದ ಮೀನುಗಾರಿಕಾ ಇಲಾಖೆಯ ಮತ್ಸ್ಯವಾಹಿನಿ ರಿಕ್ಷಾವನ್ನು ಅನಾಮಿಕು ಹೊತ್ತೊಯ್ದಿದ್ದು, ಈ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ಸಮಾಜದಲ್ಲಿ ದುಡಿದು ತಿನ್ನುವರಿಗಿಂತ ಬಡಿದು ತಿನ್ನುವವರೇ ಹೆಚ್ಚು. ಆದರೆ ಸುಳ್ಯದಲ್ಲಿ ಜನತೆ ತಮ್ಮ ಪಾಲಿನ ರೊಟ್ಟಿಯನ್ನು ತಾವೇ ದುಡಿದು ತಿನ್ನುವವರೇ ಹೆಚ್ಚಾಗಿ ಇರುವುದು. ಅಂತಃ ಮನಸ್ಥಿತಿ ಇರುವ ಜನರಿಗೆ ಬಡಿದು ತಿನ್ನುವ ಅಯೋಗ್ಯರು ಅನ್ಯಾಯ ಮಾಡಿಬಿಟ್ಟಿದ್ದಾರೆ. ಕಳೆದ ಮಾ. 26ರಂದು ಕೇಂದ್ರ ಸರಕಾರದ ಪ್ರಧಾನ ಮಂತ್ರಿ

ಸುಳ್ಯದಲ್ಲಿ `ಶೋ’ ತೋರಿಸಿ ಗುಜುರಿ ಪಾಲಾಯಿತೇ ‘ಮತ್ಸ್ಯವಾಹಿನಿ’| ಏಕಾಏಕಿ ತ್ರಿಚಕ್ರ ವಾಹನಗಳನ್ನು ಹೊತ್ತೊಯ್ದದ್ದೆಲ್ಲಿಗೆ? Read More »

ಮಂಗಳೂರು: ಗಡಿಪಾರು ಅಸ್ತ್ರದ ವಿರುದ್ದ ಸಂಸದ ನಳಿನ್ ವಾಗ್ದಾಳಿ

ಸಮಗ್ರ ನ್ಯೂಸ್: ಪುತ್ತೂರಿನ ಭಜರಂಗದಳ ಕಾರ್ಯಕರ್ತರ ವಿರುದ್ದ ಗಡಿಪಾರು ಅಸ್ತ್ರ ವಿಚಾರವಾಗಿ ಪುತ್ತೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ‌ಮಾಡುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿ ಅಪರಾಧಿ ಅಲ್ಲದಿದ್ದರೂ ಗಡೀಪಾರು ಮಾಡ್ತಿದಾರೆ. ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇಂಥ ದ್ವೇಷದ ರಾಜಕಾರಣ ಸರಿಯಲ್ಲ, ಇದನ್ನ ಖಂಡಿಸುತ್ತೇನೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ. ಗಡಿಪಾರು ವಿಚಾರವಾಗಿ ಅಧಿಕಾರಿಗಳ ತರಾಟೆಗೆ ತೆಗೊಂಡಿದೇನೆ, ಒಂದು ಕೇಸ್

ಮಂಗಳೂರು: ಗಡಿಪಾರು ಅಸ್ತ್ರದ ವಿರುದ್ದ ಸಂಸದ ನಳಿನ್ ವಾಗ್ದಾಳಿ Read More »

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ

ಸಮಗ್ರ ನ್ಯೂಸ್: ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಗುರುವಾರ ರಾತ್ರಿ ವಿಷಪೂರಿತ ಹಾವು ಕಡಿದಿದ್ದು, ಅವರು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಹಿರೇಬಂಡಾಡಿಯಲ್ಲಿ ಮನೆ ಬಳಿಯ ತೋಟಕ್ಕೆ ಹೋದ ವೇಳೆ ಅವರಿಗೆ ವಿಷಪೂರಿತ ಕಟ್ಟು ಹಾವು (ಕ್ರೈಟ್‌) ಕಡಿದಿತ್ತು. ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ Read More »

ಲೈಂಗಿಕ ದೌರ್ಜನ್ಯ ಪ್ರಕರಣ| ಮುರುಘಾ ಶ್ರೀಗೆ ಬಿಡುಗಡೆ ಭಾಗ್ಯ

ಸಮಗ್ರ ನ್ಯೂಸ್: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶ್ರೀಗಳ ವಿರುದ್ಧ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷದ ಡಿಸೆಂಬರ್​ನಿಂದ ಶ್ರೀಗಳು ಚಿತ್ರದುರ್ಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ನವೆಂಬರ್ 8ರಂದು ಒಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜಾಮೀನು ನೀಡಿದ್ದರೂ, ಇನ್ನೊಂದು ಪ್ರಕರಣದ ವಿಚಾರಣೆ ಬಾಕಿ ಉಳಿದಿದ್ದ ಕಾರಣ ಮುರುಘಾ ಶರಣರ ಬಿಡುಗಡೆಯಾಗಿರಲಿಲ್ಲ. ಇದೀಗ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ

ಲೈಂಗಿಕ ದೌರ್ಜನ್ಯ ಪ್ರಕರಣ| ಮುರುಘಾ ಶ್ರೀಗೆ ಬಿಡುಗಡೆ ಭಾಗ್ಯ Read More »

ವಿಶ್ವಕಪ್ ಕ್ರಿಕೆಟ್| ಆಸ್ಟ್ರೇಲಿಯಾ 8ನೇ ಬಾರಿ ಫೈನಲ್ ಗೆ ; ‘ಸೋತಾಫ್ರಿಕಾ’ ಮನೆಗೆ

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್​​ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿದೆ. ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಸೆಮಿಫೈನಲ್‌ನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿದ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ದಾಖಲೆಯ 8ನೇ ಬಾರಿಗೆ ವಿಶ್ವಕಪ್ ಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿದೆ. ಇನ್ನು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ, ಸೆಮಿಫೈನಲ್‌ನಲ್ಲಿ

ವಿಶ್ವಕಪ್ ಕ್ರಿಕೆಟ್| ಆಸ್ಟ್ರೇಲಿಯಾ 8ನೇ ಬಾರಿ ಫೈನಲ್ ಗೆ ; ‘ಸೋತಾಫ್ರಿಕಾ’ ಮನೆಗೆ Read More »

ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷ ಸಂಬಳ ಕೊಡುತ್ತಾರೆ!

ಸಮಗ್ರ ಉದ್ಯೋಗ: National Thermal Power Corporation Limited ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 4 Executive ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 18, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ. Education:ಎಕ್ಸಿಕ್ಯೂಟಿವ್ (SIIS- ಆಪರೇಶನ್ಸ್)- ಬಿಇ/ಬಿ.ಟೆಕ್ಎಕ್ಸಿಕ್ಯೂಟಿವ್(SIIS- ಟೆಕ್)- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಟೆಕ್, ಎಂಸಿಎ Job Details:ಎಕ್ಸಿಕ್ಯೂಟಿವ್ (SIIS- ಆಪರೇಶನ್ಸ್)- 2ಎಕ್ಸಿಕ್ಯೂಟಿವ್(SIIS- ಟೆಕ್)-2 ವಯೋಮಿತಿ:ಗರಿಷ್ಠ 35 ವರ್ಷ ಮೀರಿರಬಾರದು.

ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷ ಸಂಬಳ ಕೊಡುತ್ತಾರೆ! Read More »