November 2023

ಇಂದು ವಿಶ್ವಕಪ್ ಫೈನಲ್| ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ನೇರಪ್ರಸಾರಕ್ಕೆ ರಾಜ್ಯಸರ್ಕಾರ ಆದೇಶ

ಸಮಗ್ರ ನ್ಯೂಸ್: ಇಂದು ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿ ನಡೆಯಲಿದ್ದು, ರಾಜ್ಯದ ಕ್ರಿಕೆಟ್ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ಪ್ರಸಾರ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದಿನಾಂಕ: 19-11-2023 ರಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸಾರ್ವಜನಿಕರಿಗೆ/ ಕ್ರೀಡಾಪಟುಗಳಿಗೆ ಅಗತ್ಯ ಅಳತೆಯ ದೊಡ ಪರದೆಯಲ್ಲಿ […]

ಇಂದು ವಿಶ್ವಕಪ್ ಫೈನಲ್| ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ನೇರಪ್ರಸಾರಕ್ಕೆ ರಾಜ್ಯಸರ್ಕಾರ ಆದೇಶ Read More »

ಸುಳ್ಯ: ಪೆರುವಾಜೆಯಿಂದ ನಾಪತ್ತೆಯಾಗಿದ್ದ ಬಾಲಕ ಮೈಸೂರಿನಲ್ಲಿ ಪತ್ತೆ

ಸಮಗ್ರ ನ್ಯೂಸ್: ಎರಡು ದಿನಗಳ ಹಿಂದೆ ಅಂಗಡಿಗೆ ತೆರಳುವುದಾಗಿ ತೆರಳಿ ಬಳಿಕ ನಾಪತ್ತೆಯಾಗಿದ್ದ ಎಂಟನೇ ತರಗತಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಶನಿವಾರ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16ರ ಸಂಜೆಯಿಂದ ನಾಪತ್ತೆಯಾಗಿದ್ದ. ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ

ಸುಳ್ಯ: ಪೆರುವಾಜೆಯಿಂದ ನಾಪತ್ತೆಯಾಗಿದ್ದ ಬಾಲಕ ಮೈಸೂರಿನಲ್ಲಿ ಪತ್ತೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜ್ಯೋತಿಷ್ಯ ಶಾಸ್ತ್ರ ಗ್ರಹಗತಿಯ ಆಧಾರದ ಮೇಲೆ ನಮ್ಮ ಭವಿಷ್ಯ ಹೇಳುತ್ತದೆ. ಈ ಭವಿಷ್ಯ ನಾವು ನಮ್ಮ ಬದುಕಿನಲ್ಲಿ ಏನು ಮಾಡಬಾರದು ಎಂಬುವುದರ ಮುನ್ಸೂಚನೆ ನೀಡುತ್ತದೆ, ಏನು ಮಾಡಿದರೆ ಒಳ್ಳೆಯದು ಎಂಬ ಸಲಹೆ ನೀಡುತ್ತದೆ. ನಾವಿಲ್ಲಿ ನವೆಂಬರ್ 19-26ರವರೆಗೆ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂಬ ಭವಿಷ್ಯ ನೀಡಲಾಗಿದೆ. ಮೇಷ ರಾಶಿ:ಮೇಷ ರಾಶಿಯವರಿಗೆ ಈ ವಾರ ಮಿಶ್ರ ಫಲಿಫಲ, ಆರೋಗ್ಯದ ಕಡೆ ಗಮನಹರಿಸಿ. ಕೆಲಸದಲ್ಲಿಯೂ ಈ ಸಮಯವು ನಿಮಗೆ ಸ್ವಲ್ಪ ಸವಾಲಿನ ಸಮಯವಾಗಿರುತ್ತದೆ. ನಿಮಗೆ ಕಚೇರಿಯಲ್ಲಿ ಯಾವುದೇ

ದ್ವಾದಶ ರಾಶಿಗಳ ವಾರಭವಿಷ್ಯ Read More »

Health Tips|ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಬೀಟ್ರೂಟ್ ಜ್ಯೂಸ್​​​ ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ಇದರಲ್ಲಿ ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಬೆಳಗ್ಗಿನ ಉಪಹಾರದ ಸಮಯದಲ್ಲಿ ಬೀಟ್ರೂಟ್ ಜ್ಯೂಸ್​​ ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ತೂಕ ಇಳಿಕೆ, ತ್ವಚೆಯ ಆರೈಕೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸುವವರು ಸಾಧ್ಯವಾದಷ್ಟು ತರಕಾರಿ ಹಣ್ಣುಗಳನ್ನು ಹಸಿಯಾಗಿ ತಿನ್ನುವುದು ಅಥವಾ ಜ್ಯೂಸ್ ರೂಪದಲ್ಲಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಅದರಲ್ಲಿಯೂ ಬೀಟ್ರೂಟ್ ಅತ್ಯಂತ

Health Tips|ಪ್ರತಿದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮ

ಸಮಗ್ರ ನ್ಯೂಸ್:ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ವತಿಯಿಂದ KSRTC ಬಸ್ ಸ್ಟಾಂಡ್ ಬಳಿ ಇರುವ ಶಾರದಾ ವಿದ್ಯಾಲಯದಲ್ಲಿ ಇತ್ತೀಚಿಗೆ ದೀಪಾವಳಿ ಕವಿಗೋಷ್ಠಿ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಗಣ್ಯರನ್ನು ಮತ್ತು ಕವಿಗಳನ್ನು ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ವಿದ್ಯಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಮತ್ತು ಜ್ಯೋತಿಷ್ಯರಾದ ಎಚ್. ಭೀಮರಾವ್ ವಾಷ್ಠರ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲರಾದ ಶಾರದಾ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ

ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮ Read More »

ಹಲಾಲ್ ಉತ್ಪನ್ನ ನಿಷೇಧ/ ಉತ್ತರ ಪ್ರದೇಶ ಸರ್ಕಾರದಿಂದ ಆದೇಶ

ಸಮಗ್ರ ನ್ಯೂಸ್: ಉತ್ತರ ಪ್ರದೇಶ ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ‘ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳು, ಔಷಧಗಳು ಸೇರಿ ಯಾವುದೇ ವಸ್ತುಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ’ ಎಂದು ತಿಳಿಸಲಾಗಿದೆ.

ಹಲಾಲ್ ಉತ್ಪನ್ನ ನಿಷೇಧ/ ಉತ್ತರ ಪ್ರದೇಶ ಸರ್ಕಾರದಿಂದ ಆದೇಶ Read More »

ಡೀಪ್ ಫೇಕ್/ ಬೆಂಗಳೂರು ನಗರ ಪೋಲೀಸರಿಂದ ಸಹಾಯವಾಣಿ

ಸಮಗ್ರ ನ್ಯೂಸ್: ರಾಷ್ಟ್ರಾದ್ಯಂತ ಸುದ್ದಿ ಮಾಡುತ್ತಿರುವ ಡೀಪ್‌ಫೇಕ್ ವಿರುದ್ಧ ಬೆಂಗಳೂರು ಪೊಲೀಸರು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂತಹ ವಿಡಿಯೋಗಳಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯವಾಣಿಯೊಂದನ್ನು ತೆರೆದು, ಅದಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು ನಗರ ಪೋಲೀಸರು ಈ ಕುರಿತು ಟ್ವೀಟ್ ಮಾಡಿದ್ದು, ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್ ಫೇಕ್ ಗೆ ಒಳಗಾಗಿದ್ದಲ್ಲಿ, 1930 ಗೆ ಕರೆಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ, ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ ಎಂದು ತಿಳಿಸಿದ್ದಾರೆ.

ಡೀಪ್ ಫೇಕ್/ ಬೆಂಗಳೂರು ನಗರ ಪೋಲೀಸರಿಂದ ಸಹಾಯವಾಣಿ Read More »

ಸುಳ್ಯ:ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕುಪತ್ರ, ಕೋವಿ ನವೀಕರಣ| ನ. 23 ರಂದು ಎಪಿಎಂಸಿ ಸಭಾಂಗಣದಲ್ಲಿ ಸಮಾಲೋಚನಾ ಸಭೆ

ಸಮಗ್ರ ನ್ಯೂಸ್:ಪೋಡಿ(Plotting) ಬಾಕಿ ಪ್ರಕ್ರಿಯೆಯ, ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕು ಪತ್ರ ಕೋವಿ ನವೀಕರಣ ಮತ್ತು ಹೊಸ ಆಯುಧ ಪರವಾನಗಿ ಸಿಗದೆ ಇರುವವರನ್ನು ಸೇರಿಸಿ ಕಾನೂನು ಬದ್ಧವಾಗಿ ಲಿಖಿತವಾಗಿ ರೂಪದಲ್ಲಿ ಮನವಿ ಕೊಟ್ಟಾಗ ಪರವಾನಗಿ ಸಮಸ್ಯೆಯನ್ನು ಎದುರಿಸುವುದು ಸಾಧ್ಯ ಎಂದು ಅಶೋಕ್ ಎಡಮಲೆ ಅವರು ಹೇಳಿದರು. ಸುಳ್ಯ ಮಲೆನಾಡು ಜಂಟಿ ಕ್ರೀಯ ಸಮಿತಿ ವತಿಯಿಂದ ಪೋಡಿ (Plotting) ಬಾಕಿ ಪ್ರಕ್ರಿಯೆಯ, ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕು ಪತ್ರ, ಕೋವಿ ನವೀಕರಣ ಮತ್ತು ಹೊಸ ಆಯುಧ ಪರವಾನಿಗೆ ಬಗ್ಗೆ

ಸುಳ್ಯ:ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕುಪತ್ರ, ಕೋವಿ ನವೀಕರಣ| ನ. 23 ರಂದು ಎಪಿಎಂಸಿ ಸಭಾಂಗಣದಲ್ಲಿ ಸಮಾಲೋಚನಾ ಸಭೆ Read More »

ಮಾಲ್ಡೀವ್ಸ್ ನಿಂದ ಸೇನೆ ಹಿಂತೆಗೆದುಕೊಳ್ಳಲು ಭಾರತಕ್ಕೆ ಸೂಚನೆ

ಸಮಗ್ರ ನ್ಯೂಸ್: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ದೇಶದಿಂದ ಭಾರತೀಯ ಸೇನೆ ಹಿಂದೆಗೆದುಕೊಳ್ಳುವಂತೆ, ಅಲ್ಲಿನ ಸರ್ಕಾರವು ಅಧಿಕೃತವಾಗಿ ಭಾರತಕ್ಕೆ ಸೂಚಿಸಿದೆ. ಹೊಸದಾಗಿ ಆಯ್ಕೆಯಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಕಚೇರಿಯಿಂದ ಶನಿವಾರ ಈ ಘೋಷಣೆ ಮಾಡಲಾಗಿದೆ. ರಾಷ್ಟ್ರಪತಿಗಳ ಕಚೇರಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದಾಗ ಅಧ್ಯಕ್ಷ ಮುಯಿಝು ಅವರು ಔಪಚಾರಿಕವಾಗಿ ಈ ಬಗ್ಗೆ ವಿನಂತಿಸಿದರು ಎಂದು ಪ್ರಕಟಣೆ ತಿಳಿಸಿದೆ. ಭೂ ವಿಜ್ಞಾನ ಸಚಿವರಾಗಿರುವ

ಮಾಲ್ಡೀವ್ಸ್ ನಿಂದ ಸೇನೆ ಹಿಂತೆಗೆದುಕೊಳ್ಳಲು ಭಾರತಕ್ಕೆ ಸೂಚನೆ Read More »

ಸೈಟಿಂಸ್ಟ್​ ಹುದ್ದೆಗೆ ಆಹ್ವಾನ, ತಿಂಗಳಿಗೆ ಲಕ್ಷ ಗಟ್ಟಲೆ ಸಂಬಳ!

ಸಮಗ್ರ ಉದ್ಯೋಗ: Bureau of Indian Standards ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಸೈಂಟಿಸ್ಟ್​- ಬಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಮೊದಲು ನವೆಂಬರ್ 3, 2023 ಅರ್ಜಿ ಹಾಕಲು ಕೊನೆಯ ದಿನವಾಗಿತ್ತು. ಬಳಿಕ ಆ ದಿನಾಂಕವನ್ನು ನವೆಂಬರ್ 20ಕ್ಕೆ ವಿಸ್ತರಿಸಲಾಗಿದೆ. ಇನ್ನಷ್ಟು ಮಾಹಿತಿ ನಿಮಗಾಗಿ. ಹುದ್ದೆಯ ಮಾಹಿತಿ:ಸಿವಿಲ್ ಎಂಜಿನಿಯರಿಂಗ್- 3ಎಲೆಕ್ಟ್ರಿಕಲ್ ಎಂಜಿನಿಯರಿಂಗ್- 3ಟೆಕ್ಸ್​ಟೈಲ್​ ಎಂಜಿನಿಯರಿಂಗ್- 1ಅಗ್ರಿಕಲ್ಚರ್ ಸೈನ್ಸ್- 2 ವಿದ್ಯಾರ್ಹತೆ:ಸಿವಿಲ್ ಎಂಜಿನಿಯರಿಂಗ್-

ಸೈಟಿಂಸ್ಟ್​ ಹುದ್ದೆಗೆ ಆಹ್ವಾನ, ತಿಂಗಳಿಗೆ ಲಕ್ಷ ಗಟ್ಟಲೆ ಸಂಬಳ! Read More »