November 2023

ಅಯ್ಯಪ್ಪ‌ ವೃತಧಾರಿಗಳ ಜೊತೆಗೆ ಶಬರಿಮಲೆಗೆ ಹೊರಟ ಶ್ವಾನ| ಬೆಳಗಾವಿಯಿಂದ 600 ಕಿ.ಮೀ ಕಾಲ್ನಡಿಗೆಯಲ್ಲಿ ಜೊತೆಯಾದ ನಾಯಿ

ಸಮಗ್ರ ನ್ಯೂಸ್: ಯಾವುದೇ ಜಾತಿ ಮತ ಧರ್ಮದ ಬೇದವಿಲ್ಲದೆ ಪ್ರತಿಯೊಬ್ಬರನ್ನು ಸಮಾನರನ್ನಾಗಿ ಕಾಣುವ ಏಕೈಕ ದೇವಸ್ಥಾನ ಶಬರಿಮಲೆ. ದೇಶದಲ್ಲಿ ಅತೀ ಹೆಚ್ಚು ಭಕ್ತರನ್ನು ಸೆಳೆಯುವ ದೇವಸ್ಥಾನವಾಗಿರುವ ಶಬರಿಮಲೆ ಇದೀಗ ಮಂಡಲ ಪೂಜೆಗಾಗಿ ಮತ್ತೆ ತೆರೆದಿದೆ. ಈಗಾಗಲೇ ಶಬರಿಮಲೆ ಭಕ್ತರು ವೃತ ಕೈಗೊಂಡು ಶಬರಿಮಲೆ ಕಡೆಗೆ ತೆರಳುತ್ತಿದ್ದಾರೆ. ಅದರಲ್ಲೂ ಕಾಲ್ನಡಿಗೆ ಮೂಲಕ ಅಯ್ಯಪ್ಪನ ದರ್ಶನಕ್ಕೆ ತೆರಳುವ ಭಕ್ತರ ಸಂಖ್ಯೆ ಇದೀಗ ಹೆಚ್ಚಾಗುತ್ತಲೇ ಇದೆ. ಈ ರೀತಿ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಜೊತೆ ಶ್ವಾನಗಳು ತೆರಳುವ ಉದಾಹರಣೆಗಳು ಹಲವಾರು ಇದ್ದು, […]

ಅಯ್ಯಪ್ಪ‌ ವೃತಧಾರಿಗಳ ಜೊತೆಗೆ ಶಬರಿಮಲೆಗೆ ಹೊರಟ ಶ್ವಾನ| ಬೆಳಗಾವಿಯಿಂದ 600 ಕಿ.ಮೀ ಕಾಲ್ನಡಿಗೆಯಲ್ಲಿ ಜೊತೆಯಾದ ನಾಯಿ Read More »

ವಿಶ್ವಕಪ್‌ ಪುಟ್ಬಾಲ್ ನ ಆರ್ಹತಾ ಸುತ್ತು/ ನಾಳೆ ಭಾರತ-ಕತಾರ್ ನಡುವೆ ಪಂದ್ಯ

ಸಮಗ್ರ ನ್ಯೂಸ್: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಭಾರತ ಪ್ರಬಲ ಕತಾರ್ ತಂಡವನ್ನು ಎದುರಿಸಲಿದ್ದಾರೆ. ಇದಕ್ಕೆ ಮೊದಲು, ನವೆಂಬ‌ರ್ 16ರಂದು ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ 1-0 ಯಿಂದ ಕುವೈತ್‌ ತಂಡವನ್ನು ಅದರ ತವರಿನಲ್ಲೇ ಸೋಲಿಸಿದ್ದು, ತಂಡದ ವಿಶ್ವಾಸ ವೃದ್ಧಿಸಿದೆ. ನಾಳಿನ ಪಂದ್ಯದಲ್ಲಿ ಕತಾರ್ ತಂಡವೇ ಗೆಲ್ಲುನ ನೆಚ್ಚಿನ ತಂಡದಂತೆ ಕಾಣಿಸಿದರೂ, ಭಾರತ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ. ನಾಲ್ಕು ವರ್ಷಗಳ ಹಿಂದೆ ನಡೆದ ಏಷ್ಯನ್

ವಿಶ್ವಕಪ್‌ ಪುಟ್ಬಾಲ್ ನ ಆರ್ಹತಾ ಸುತ್ತು/ ನಾಳೆ ಭಾರತ-ಕತಾರ್ ನಡುವೆ ಪಂದ್ಯ Read More »

SBIನಲ್ಲಿ ಉದ್ಯೋಗಕ್ಕೆ ಆಹ್ವಾನ, ತಿಂಗಳಿಗೆ 45,000 ಸಂಬಳ ಕೊಡ್ತಾರೆ!

ಸಮಗ್ರ ಉದ್ಯೋಗ: State Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 96 ರಿಸಾಲ್ವರ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇನ್ನಷ್ಟು ಮಾಹಿತಿ ನಿಮಗಾಗಿ. Ageನವೆಂಬರ್ 1, 2023ಕ್ಕೆ ಗರಿಷ್ಠ 65 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಅಭ್ಯರ್ಥಿಗಳು

SBIನಲ್ಲಿ ಉದ್ಯೋಗಕ್ಕೆ ಆಹ್ವಾನ, ತಿಂಗಳಿಗೆ 45,000 ಸಂಬಳ ಕೊಡ್ತಾರೆ! Read More »

ಉಬರಡ್ಕ: ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ ಆರಂಭ

ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟ ಸಮಿತಿ ಉಬರಡ್ಕ ಮಿತ್ತೂರು ಆಶ್ರಯದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ ಉಬರಡ್ಕದಲ್ಲಿ ನ. 20ರಂದು ನಡೆಯಿತು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಉದ್ಘಾಟಿಸಿದರು. ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಸೌಜನ್ಯ ತಾಯಿ ಕುಸುಮಾವತಿ, ನ್ಯಾಯವಾದಿ ಮೋಹಿತ್ ಕುಮಾರ್, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನರವಿ, ಗೌಡ ಯುವ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ವೆಂಕಟ್ರಮಣ ಗೌಡ ಕೆದಂಬಾಡಿ ಮತ್ತಿತರರು ಉಪಸ್ಥಿತರಿದ್ದರು. ಉಬರಡ್ಕ ಮಿತ್ತೂರು

ಉಬರಡ್ಕ: ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ ಆರಂಭ Read More »

ಪಂಚರಾಜ್ಯ ಚುನಾವಣೆ/ ಬೃಹತ್ ಮೊತ್ತದ ಡ್ರಗ್ಸ್ ವಶ

ಸಮಗ್ರ ನ್ಯೂಸ್: ಮಧ್ಯಪ್ರದೇಶ, ಛತ್ತೀಸಗಢ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ₹1,760 ಕೋಟಿ ಮೌಲ್ಯದ ಡ್ರಗ್ಸ್‌ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಐದು ರಾಜ್ಯಗಳಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ ಪ್ರಮಾಣಕ್ಕಿಂತ 7 ಪಟ್ಟು (₹239.15 ಕೋಟಿ) ಹೆಚ್ಚಾಗಿದೆ ಎಂದು ಹೇಳಲಾಗಿದೆ. ಮತದಾರರಿಗೆ ಹಂಚುವ ಉದ್ದೇಶದಿಂದ ಕೂಡಿಟ್ಟ ನಗದು, ಮದ್ಯ ಮತ್ತು ಬೆಲೆಬಾಳುವ ವಸ್ತುಗಳನ್ನು

ಪಂಚರಾಜ್ಯ ಚುನಾವಣೆ/ ಬೃಹತ್ ಮೊತ್ತದ ಡ್ರಗ್ಸ್ ವಶ Read More »

ಐಸಿಸಿ ಏಕದಿನ ವಿಶ್ವಕಪ್ ತಂಡ/ ಕಪ್ತಾನನಾಗಿ ರೋಹಿತ್ ಶರ್ಮಾ ಆಯ್ಕೆ

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ 2023ರ ತಂಡವನ್ನು ಐಸಿಸಿ ಪ್ರಕಟಿಸಿದ್ದು, ಭಾರತ ತಂಡದ ಕಪ್ತಾನ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಜೊತೆಗೆ ಭಾರತದ ಐದು ಆಟಗಾರರು ಆಯ್ಕೆಯಾಗಿದ್ದಾರೆ. ಚಾಂಪಿಯನ್ ಆಸ್ಟ್ರೇಲಿಯಾ ತಂಡದಿಂದ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡದಿಂದ ತಲಾ ಒಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ. ರೋಹಿತ್ ಜೊತೆಗೆ ಭಾರತ ತಂಡದಿಂದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಟ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ. ಚಾಂಪಿಯನ್

ಐಸಿಸಿ ಏಕದಿನ ವಿಶ್ವಕಪ್ ತಂಡ/ ಕಪ್ತಾನನಾಗಿ ರೋಹಿತ್ ಶರ್ಮಾ ಆಯ್ಕೆ Read More »

ಬೆಳ್ತಂಗಡಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ| ಬಿಜೆಪಿ‌ ಕಾರ್ಯಕರ್ತನ ಮೇಲೆ‌ ಬಿತ್ತು ಕೇಸ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ ಆಡಿಯೋ ವೈರಲ್ ಅಗಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ರಜಿತ್ ಕೊಕ್ಕಡ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ, ಸೆಲೂನ್ ನಲ್ಲಿ ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತ ರಜಿತ್ ಕೊಕ್ಕಡ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಬಗ್ಗೆ ಅಶ್ಲೀಲವಾಗಿ ನಿಂದಿಸಿ ಮಾತನಾಡಿರುವ ಬಗ್ಗೆ

ಬೆಳ್ತಂಗಡಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ| ಬಿಜೆಪಿ‌ ಕಾರ್ಯಕರ್ತನ ಮೇಲೆ‌ ಬಿತ್ತು ಕೇಸ್ Read More »

ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆ|ಸುಳ್ಯದ ಸೈಂಟ್ ಜೋಸೆಫ್ ಶಾಲೆ ಪ್ರಥಮ

ಸಮಗ್ರ ನ್ಯೂಸ್: ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಸ್ಕೌಟ್ ತಂಡಕ್ಕೆ ಪ್ರಥಮ ಬಹುಮಾನ ಪಡೆದುಕೊಂಡಿತು. ರಾಜ್ಯದ 31 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಬಂದ 4 ತಂಡಗಳಲ್ಲಿ ಸೈಂಟ್ ಜೋಸೆಫ್ ಶಾಲಾ ತಂಡ ಪ್ರಥಮ ಬಹುಮಾನ ಪಡೆದಿದೆ.

ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆ|ಸುಳ್ಯದ ಸೈಂಟ್ ಜೋಸೆಫ್ ಶಾಲೆ ಪ್ರಥಮ Read More »

ಬಿಡುಗಡೆಯಾದ 4 ದಿನಕ್ಕೆ ಮತ್ತೆ ಅರೆಸ್ಟ್ ಆದ ಮುರುಘಾ ಶ್ರೀ

ಸಮಗ್ರ ನ್ಯೂಸ್: ನವೆಂಬರ್.16ರಂದು ಪೋಕ್ಸೊ ಮೊದಲನೇ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು. ಆದ್ರೇ 2ನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆಯೋ ಮುನ್ನವೇ ಬಿಡುಗಡೆ ಆಗಿದ್ದ ಕಾರಣ, ಅವರನ್ನು ಇಂದು ಜಾಮೀನು ಪಡೆದ 4 ದಿನಗಳಲ್ಲೇ ಮತ್ತೆ ಬಂಧಿತರಾಗಿದ್ದಾರೆ. ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೆ

ಬಿಡುಗಡೆಯಾದ 4 ದಿನಕ್ಕೆ ಮತ್ತೆ ಅರೆಸ್ಟ್ ಆದ ಮುರುಘಾ ಶ್ರೀ Read More »

ವಿಶ್ವಕಪ್ ಗೆ ಅವಮಾನ ಮಾಡಿದ ಮಿಚೆಲ್ ಮಾರ್ಷ್|

ಸಮಗ್ರ ನ್ಯೂಸ್: ವಿಶ್ವಕಪ್ 2023 ಫೈನಲ್ ಪಂದ್ಯ ಗೆದ್ದ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಈ ನಡುವೆ ಕ್ರಿಕೆಟಿಗ ಮಿಚೆಲ್ ಮಾರ್ಷ್ ಕಪ್ ಗೆ ಅವಮಾನ ಮಾಡಿದ ಪ್ರಕರಣ ನಡೆದಿದೆ. ಟೂರ್ನಮೆಂಟ್ ಗೆದ್ದ ಖುಷಿಯಲ್ಲಿ ಮಿಚೆಲ್ ಮಾರ್ಚ್ ಡ್ರೆಸ್ಸಿಂಗ್ ರೂಂನಲ್ಲಿ ವಿಶ್ವಕಪ್ ಮೇಲೆ ಕಾಲೆತ್ತಿ ಹಾಕಿ ಕುಳಿತು ಥಮ್ಸ್ ಅಪ್ ಮಾಡುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ನೆಟ್ಟಿಗರು ಕನಿಷ್ಠ ಪಕ್ಷ ನಿಮ್ಮ ಪರಿಶ್ರಮಕ್ಕಾದರೂ ಬೆಲೆ ಕೊಡಿ. ಅದು

ವಿಶ್ವಕಪ್ ಗೆ ಅವಮಾನ ಮಾಡಿದ ಮಿಚೆಲ್ ಮಾರ್ಷ್| Read More »