November 2023

ಶ್ರೀಲಂಕಾ ಕ್ರಿಕೆಟ್ ಬಿಕ್ಕಟ್ಟು| ಅಂಡರ್ 19 ವಿಶ್ವಕಪ್‌ ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್

ಸಮಗ್ರ ನ್ಯೂಸ್: ಶ್ರೀಲಂಕಾ ಕ್ರಿಕೆಟ್ ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂದಿನ ವರ್ಷ ಶ್ರೀಲಂಕಾದಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್‌ ಪಂದ್ಯಾವಳಿಯನ್ನು ಐಸಿಸಿ, ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್ ಮಾಡಿದೆ. ಶ್ರೀಲಂಕಾದ ಕ್ರಿಕೆಟ್ ಚಟುವಟಿಕೆಗಳಲ್ಲಿ ಅಲ್ಲಿನ ಸರ್ಕಾರದ ಹಸ್ತಕ್ಷೇಪ ಮಾಡಿದ ಕಾರಣ, ಅಲ್ಲಿನ ಕ್ರಿಕೆಟ್ ಮಂಡಳಿಯನ್ನು ರದ್ದು ಮಾಡಿದ ನಂತರ ಐಸಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ಐಸಿಸಿ ಆಡಳಿತ ಸಮಿತಿ ಅಹಮದಾಬಾದ್ ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು, ಇದು ಶ್ರೀಲಂಕಾ ಕ್ರಿಕೆಟ್ ಅನ್ನು ಮತ್ತಷ್ಟು ಸಂಕಷ್ಟಕ್ಕೆ […]

ಶ್ರೀಲಂಕಾ ಕ್ರಿಕೆಟ್ ಬಿಕ್ಕಟ್ಟು| ಅಂಡರ್ 19 ವಿಶ್ವಕಪ್‌ ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್ Read More »

ಪೋಲಿಯೊ ಪೀಡಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

ಸಮಗ್ರ ನ್ಯೂಸ್: ಹಳೆಯ ಮನೆಯನ್ನು ದುರಸ್ತಿ ಮಾಡಲು ಕಾಮಗಾರಿ ಮಾಡುವ ಸಂದರ್ಭದಲ್ಲಿ ತಮ್ಮನೆ ಅಣ್ಣನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಹೊರವಲಯದ ಕಾಕೋಟು ಪರಂಬುವಿನಲ್ಲಿ ನಡೆದಿದೆ. ದಯಾನಂದ ಕೆ.ಜಿ.(67) ಹುಟ್ಟು ಅಂಗವಿಕಲರಾಗಿದ್ದು ಅವರಿಗೆ ಸೇರಿದ ಮೂವತ್ತೈದು ವರ್ಷಗಳು ಹಿಂದಿನ ಮನೆಯು ಮಳೆಗಾಲದಲ್ಲಿ ಸಂಪೂರ್ಣವಾಗಿ ಸೋರುತ್ತಿದ್ದ ಕಾರಣ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆ ರಿಪೇರಿ ಕೆಲಸ ಮಾಡಲು ದಯಾನಂದ ಕುಟುಂಬದ ಸದಸ್ಯರು ನಿರ್ಧಾರ ಮಾಡಿದರು. ಅದರಂತೆ ರಿಪೇರಿ ಕೆಲಸ ಮಾಡುವ ಸಮಯದಲ್ಲಿ ದಯಾನಂದ ಅವರ ಸಹೋದರ

ಪೋಲಿಯೊ ಪೀಡಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ Read More »

ಕುಶಾಲನಗರ: ಹೋಟೆಲ್ ಗೆ ನುಗ್ಗಿದ ಟ್ಯಾಂಕರ್

ಸಮಗ್ರ ನ್ಯೂಸ್: ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್ ಇದ್ದಕ್ಕಿದ್ದಂತೆ ಅಂಗಡಿಯೊಳಗೆ ನುಸುಲಿರುವ ಘಟನೆ ನ. 21ರ ನಡು ರಾತ್ರಿ 1ಗಂಟೆ ಸಮಯದಲ್ಲಿ ವರದಿಯಾಗಿದೆ. ಕುಶಾಲನಗರ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಟ್ಯಾಂಕರ್ ಸುಂಟಿಕೊಪ್ಪ ಬಳಿಯ ಗದ್ದೆಹಳ್ಳದಲ್ಲಿ (ಮಸೀದಿ ಸಮೀಪ) ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹಂಸ ಎಂಬುವವರ ಹೋಟೆಲ್ ಒಳಗೆ ನುಗ್ಗಿ ನಿಂತುಕೊಂಡಿದೆ. ಇದರಿಂದಾಗಿ ಹೋಟೆಲ್ ನ ಮುಂಭಾಗ ಸಂಪೂರ್ಣವಾಗಿ ಹಾಗೂ ಅದರ ಒತ್ತಿನಲ್ಲಿರುವ ಕೆ.ಕೆ. ಸೌಂಡ್ಸ್ ಶಾಮಿಯಾನದ ಅಂಗಡಿ ಹಾನಿಗೊಳಗಾಗಿವೆ. ಅದೃಷ್ಟವಶಾತ್ ಹೋಟೆಲ್ ಮತ್ತು ಕೆ.ಕೆ. ಸೌಂಡ್ಸ್

ಕುಶಾಲನಗರ: ಹೋಟೆಲ್ ಗೆ ನುಗ್ಗಿದ ಟ್ಯಾಂಕರ್ Read More »

ಸುಳ್ಯ: ಕಲ್ಕಿ ಮೊಬೈಲ್ ನಲ್ಲಿ ಕೊನೆಯ ಲಕ್ಕಿ ಕೂಪನ್ ಡ್ರಾ

ಸಮಗ್ರ ನ್ಯೂಸ್: ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕಲ್ಕಿ ಮೊಬೈಲ್ ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ಏರ್ಪಡಿಸಿದ ಲಕ್ಕಿ ಕೂಪನ್ ನ ಸ್ಮಾರ್ಟ್ ವಾಚ್ ನ ಕೊನೆಯ ಡ್ರಾವು ನ.20 ರಂದು ನಡೆಯಿತು. ಜ್ಯೋತಿಷ್ಯ ಭೀಮರಾವ್ ವಾಷ್ಠರ್ ನೆರವೇರಿಸಿದರು. ಸಂಸ್ಥೆಯ ಮಾಲಕ ಕೃಷ್ಣಪ್ರಸಾದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯ: ಕಲ್ಕಿ ಮೊಬೈಲ್ ನಲ್ಲಿ ಕೊನೆಯ ಲಕ್ಕಿ ಕೂಪನ್ ಡ್ರಾ Read More »

ರಾಜ್ಯ ಸರ್ಕಾರದ ಮುಖ್ಯ‌ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. 1986 ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ರಜನೀಶ್ ಈಗ ಗೃಹ ಇಲಾಖೆಯ ಹೆಚ್ಚಿವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ.30ಕ್ಕೆ ನಿವೃತ್ತರಾಗಲಿರುವ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಸ್ಥಾನಕ್ಕೆ ರಜನೀಶ್ ಗೋಯಲ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ‌ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ Read More »

2024ರ ಲೋಕಸಭಾ ಚುನಾವಣೆ/ ಮತ್ತೆ ಅಮೇಥಿಯತ್ತ ರಾಹುಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಉತ್ತರಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯನಾಡಿನಿಂದಲು ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋತು, ಕೇರಳದ ವಯನಾಡಿನಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿ ಅಮೇಥಿಯತ್ತ ಕಣ್ಣು ನೆಟ್ಟಿದ್ದಾರೆ. ಗಾಂಧಿ ಕುಟುಂಬವು ಅಮೇಥಿಯ ಜನರಿಗಾಗಿ ತಲೆತಲಾಂತರದಿಂದ ಶ್ರಮಿಸುತ್ತಿದ್ದು, ರಾಹುಲ್ ಮುಂದಿನ ಚುನಾವಣೆಯಲ್ಲಿ

2024ರ ಲೋಕಸಭಾ ಚುನಾವಣೆ/ ಮತ್ತೆ ಅಮೇಥಿಯತ್ತ ರಾಹುಲ್ Read More »

ಸರ್ಕಾರಿ ನೌಕರಿಗಾಗಿ ಹುಡುಕುತ್ತಿದ್ದೀರಾ? ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: Karnataka State Rural Livelihood Promotion Society ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್, ಕ್ಲಸ್ಟರ್​ ಸೂಪರ್​ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಿಕ್ಕಬಳ್ಳಾಪುರ & ರಾಮನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 22, 2023 ಅಂದರೆ ನಾಳೆ ಕೊನೆಯ ದಿನಾಂಕವಾಗಿದೆ. Job details:ಕ್ಲಸ್ಟರ್​ ಸೂಪರ್​ವೈಸರ್- 2ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್-2ಡೇಟಾ

ಸರ್ಕಾರಿ ನೌಕರಿಗಾಗಿ ಹುಡುಕುತ್ತಿದ್ದೀರಾ? ಈಗಲೇ ಅರ್ಜಿ ಸಲ್ಲಿಸಿ Read More »

ಬೆಂಗಳೂರಿನ ಕಂಬಳಕ್ಕೆ ಬ್ರಿಜ್ ಭೂಷಣ್ ಅನುಪಸ್ಥಿತಿ

ಸಮಗ್ರ ನ್ಯೂಸ್: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳದಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಭಾಗವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಅಶೋಕ್‍ಕುಮಾರ್ ರೈ ತಿಳಿಸಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಇದು ಕಾಂಗ್ರೆಸ್ ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿತ್ತು. ಇದೀಗ ಬ್ರಿಜ್ ಭೂಷಣ್ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸುವುದರೊಂದಿಗೆ ಕೋಪ

ಬೆಂಗಳೂರಿನ ಕಂಬಳಕ್ಕೆ ಬ್ರಿಜ್ ಭೂಷಣ್ ಅನುಪಸ್ಥಿತಿ Read More »

ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು/ ಪ್ರಾಯೋಗಿಕ ಸಂಚಾರ ಆರಂಭ

ಸಮಗ್ರ ನ್ಯೂಸ್: ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಬೆಳಿಗ್ಗೆ 5.45ಕ್ಕೆ ಹೊರಟ ರೈಲು, ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದ್ದು, ಅಲ್ಲಿಂದ ಮಧ್ಯಾಹ್ನ 2ಕ್ಕೆ ವಾಪಸ್ ಹೊರಟು ರಾತ್ರಿ 10.10ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರು ಮತ್ತು ಧಾರವಾಡ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ ಹಿನ್ನಲೆಯಲ್ಲಿ ಅದನ್ನು ಬೆಳಗಾವಿವರೆಗೆ ವಿಸ್ತರಿಸಲು

ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು/ ಪ್ರಾಯೋಗಿಕ ಸಂಚಾರ ಆರಂಭ Read More »

ಬೆಂಗಳೂರಿನ ಅನಾಥಾಶ್ರಮದಲ್ಲಿ ಅಕ್ರಮವಾಗಿ ಇಸ್ಲಾಂ ಧಾರ್ಮಿಕ ಶಿಕ್ಷಣ

ಸಮಗ್ರ ಸಮಾಚಾರ: ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರೋ ಮುಸ್ಲಿಂ ಸಮುದಾಯದ ದಾರುಲ್ ಉಲೂಮ್ ಸಾದಿಯಾ ಅನಾಥಾಶ್ರಮದಲ್ಲಿ ಮಕ್ಕಳಿಗೆ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನ್​ಗೊ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವ್ಯವಹಾರ ನಡೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೋಟಿಸ್​​ ನೀಡುವುದಾಗಿ ಹೇಳಿದ್ದಾರೆ.ಅನಾಥಾಶ್ರಮದಲ್ಲಿರುವ 200 ಮಕ್ಕಳನ್ನು ಶಾಲೆಗೂ ಕಳುಹಿಸಲಾಗುತ್ತಿಲ್ಲ. ಇಸ್ಲಾಂ ಧಾರ್ಮಿಕ ಶಿಕ್ಷಣ ಮಾತ್ರ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.

ಬೆಂಗಳೂರಿನ ಅನಾಥಾಶ್ರಮದಲ್ಲಿ ಅಕ್ರಮವಾಗಿ ಇಸ್ಲಾಂ ಧಾರ್ಮಿಕ ಶಿಕ್ಷಣ Read More »