November 2023

ಬೆಳ್ತಂಗಡಿ: ತಡರಾತ್ರಿ ಮನೆ ಬಾಗಿಲು ತಟ್ಟಿದ್ರಾ ನಕ್ಸಲರು? ಅಸಲಿ ಕಥೆ ಇಲ್ಲಿದೆ ನೋಡಿ…

ಸಮಗ್ರ ನ್ಯೂಸ್: ನಕ್ಸಲ್​ ಪೀಡಿತ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮದ ಒಂಟಿ ಮನೆಯೊಂದರ ಬಾಗಿಲನ್ನು ನಿನ್ನೆ (ನ.21) ರಾತ್ರಿ ಐದು ಜನ ಅಪರಿಚಿತರ ತಂಡ ತಟ್ಟಿದ ಘಟನೆ ನಡೆದಿದೆ. ಇದು ಬಹಳ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ. ‘ಜಮೀನು ರಿಜಿಸ್ಟರ್ ವಿಚಾರದಲ್ಲಿ ಹಣದ ವ್ಯತ್ಯಾಸದಿಂದ ದೂರು ಹಿನ್ನಲೆ ಆರೋಪಿ ಬೆಳಗ್ಗೆ ಸಿಗಲ್ಲವೆಂದು ರಾತ್ರಿಯೇ ಮೂಡಬಿದ್ರೆ ಪೊಲೀಸರು ಹಣ […]

ಬೆಳ್ತಂಗಡಿ: ತಡರಾತ್ರಿ ಮನೆ ಬಾಗಿಲು ತಟ್ಟಿದ್ರಾ ನಕ್ಸಲರು? ಅಸಲಿ ಕಥೆ ಇಲ್ಲಿದೆ ನೋಡಿ… Read More »

ಬಂಟ್ವಾಳ: ಮಹಿಳೆ ಸಾವು|ಇದು ಹೃದಯಾಘಾತ ಅಲ್ಲ ಕೊಲೆ?

ಸಮಗ್ರ ನ್ಯೂಸ್: ಬಂಟ್ವಾಳ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇದು ಸಂಶಯಾಸ್ಪದ ಸಾವು ಈ ಬಗ್ಗೆ ತನಿಖೆಯಾಗಬೇಕು ಎಂದು ದೂರು ದಾಖಲಾಗಿದೆ. ಬಂಟ್ವಾಳ, ಮೊಡಂಕಾಪು ರಾಜೀವಪಲ್ಕೆ ನಿವಾಸಿ ಯೋಗೀಶ್ ಅವರ ಪತ್ನಿ ಬೇಬಿ ಅವರು ಸಾವನ್ನಪ್ಪಿದ ಮಹಿಳೆ. ರಾತ್ರಿ ಸುಮಾರು 2 ಗಂಟೆ ವೇಳೆ ಇವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು,ಅಸ್ತಮಾ ರೋಗದಿಂದ ಬಳಲುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಅವರು ಮನೆಯವರಿಗೆ ತಿಳಿಸಿದ್ದಾರೆ. ಇದೊಂದು ವ್ಯವಸ್ಥಿತವಾದ ಕೊಲೆ:

ಬಂಟ್ವಾಳ: ಮಹಿಳೆ ಸಾವು|ಇದು ಹೃದಯಾಘಾತ ಅಲ್ಲ ಕೊಲೆ? Read More »

ಸುಳ್ಳು ಜಾಹೀರಾತು ವಿಚಾರ| ಸುಪ್ರೀಂ ಕೋರ್ಟಿನಿಂದ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡದ ಎಚ್ಚರಿಕೆ

ಸಮಗ್ರ ನ್ಯೂಸ್: ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ಸುಳ್ಳು ಮತ್ತು ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸದಿದ್ದರೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ. ಯೋಗ ಗುರು ರಾಮ್‌ದೇವ್ ಸ್ಥಾಪಿಸಿರುವ ಪತಂಜಲಿ ಆಯುರ್ವೇದ್ ಕಂಪನಿಯು ಗಿಡಮೂಲಿಕೆ ಉತ್ಪನ್ನಗಳ ವಿಚಾರದಲ್ಲಿ ವ್ಯವಹರಿಸುತ್ತಿದೆ. ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಅಂಶಗಳೇ ಇವೆ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಸುಳ್ಳು ಜಾಹೀರಾತು ವಿಚಾರ| ಸುಪ್ರೀಂ ಕೋರ್ಟಿನಿಂದ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡದ ಎಚ್ಚರಿಕೆ Read More »

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ/ ಒಪ್ಪಿಗೆ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ

ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ವಿಚಾರ ಇದೀಗ ಥಾಯ್ಲೆಂಡ್‍ನಲ್ಲಿ ಮುಂಚೂಣಿಗೆ ಬಂದಿದ್ದು, ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುವ ಹಿನ್ನಲೆಯಲ್ಲಿ ನಾಗರಿಕ ಸಂಹಿತೆ ಕಾಯ್ದೆಯ ತಿದ್ದುಪಡಿಗೆ ಥಾಯ್ಲೆಂಡ್ ಸರ್ಕಾರ ಒಪ್ಪಿಗೆ ನೀಡಿದೆ. ಇದು ಕಾನೂನಾಗಿ ಪರಿವರ್ತನೆಯಾದಲ್ಲಿ, ನೇಪಾಳ ಮತ್ತು ತೈವಾನ್ ದೇಶಗಳ ನಂತರ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಮೂರನೇ ದೇಶವಾಗಿ ಥಾಯ್ಲೆಂಡ್ ಗುರುತಿಸಲ್ಪಡಲಿದೆ. ಈ ತಿದ್ದುಪಡಿಯು ಥಾಯ್ಲೆಂಡ್‍ನಲ್ಲಿ ಇನ್ನು ಮುಂದೆ ಸಲಿಂಗ ದಂಪತಿಗಳಿಗೆ ಪತಿ ಮತ್ತು ಪತ್ನಿ ಎಂಬ ಪದಗಳಿಗೆ ಬದಲಾಗಿ ವ್ಯಕ್ತಿಗಳು ಮತ್ತು

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ/ ಒಪ್ಪಿಗೆ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ Read More »

ಇಂದು ಜಿ-20 ವರ್ಚುವಲ್ ಸಭೆ/ ಮೋದಿ ಅಧ್ಯಕ್ಷತೆ

ಸಮಗ್ರ ನ್ಯೂಸ್: ಇಂದು ಜಿ-20 ನಾಯಕರ ವರ್ಚುವಲ್ ಶೃಂಗಸಭೆಯು ನಡೆಯಲಿದ್ದು, ಪ್ರಧಾನಿ ಮೋದಿ ಇದರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಭಾಗವಹಿಸುತ್ತಿದ್ದು, ಸಂಜೆ 5.3ಒ ರಿಂದ ಸಭೆ ನಡೆಯಲಿದೆ. ಈ ಸಭೆಯು ಕಳೆದ ಸೆಪ್ಟಂಬರ್‍ನಲ್ಲಿ ನಡೆದ ಶೃಂಗಸಭೆಯ ಫಲಿತಾಂಶಗಳು ಹಾಗೂ ನಂತರದ ಬೆಳವಣಿಗೆಗಳ ಕುರಿತು ಅವಲೋಕನ ನಡೆಸಲಿದೆ. ಇದರ ಜೊತೆಗೆ ಜಾಗತಿಕ ಆರ್ಥಿಕತೆ, ಹಣಕಾಸು, ಹವಾಮಾನ ಕಾರ್ಯಸೂಚಿ ಮತ್ತು ಡಿಜಿಟಲೀಕರಣದ ಕುರಿತು ಚರ್ಚೆ ನಡೆಸಲಿದ್ದಾರೆ. ಈ ವರ್ಚುವಲ್ ಶೃಂಗಸಭೆಯ ಅಧ್ಯಕ್ಷತೆಯನ್ನು

ಇಂದು ಜಿ-20 ವರ್ಚುವಲ್ ಸಭೆ/ ಮೋದಿ ಅಧ್ಯಕ್ಷತೆ Read More »

ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್‍ನಿಂದ ನಿಷೇಧ

ಸಮಗ್ರ ನ್ಯೂಸ್: ಮಹಿಳಾ ಕ್ರಿಕೆಟ್‍ನ ಸುರಕ್ಷತೆ, ನ್ಯಾಯಸಮ್ಮತೆ ಹಾಗೂ ಸಮಗ್ರತೆ ರಕ್ಷಣೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಮಹಿಳಾ ಕ್ರಿಕೆಟ್‍ನಿಂದ ಮಂಗಳಮುಖಿಯರಿಗೆ ಸಂಪೂರ್ಣ ನಿಷೇಧ ಹೇರಿದೆ. ಏಕದಿನ ವಿಶ್ವಕಪ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಈ ನಿಯಮ ಜಾರಿಗೊಳಿಸಿದೆ. ಕಳೆದ ಸೆಪ್ಟಂಬರ್‍ನಲ್ಲಿ ಕೆನಡಾದ ಮಂಗಳಮುಖಿ ಕ್ರಿಕೆಟರ್ ಡೇನಿಯಲ್ ಮೆಕ್‍ಗಹೆ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಡೇನಿಯಲ್ ಮೆಕ್‍ಗೆಹೆಗೆ ಆಡುವ ಅವಕಾಶ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಐಸಿಸಿ

ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್‍ನಿಂದ ನಿಷೇಧ Read More »

ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ| ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ

ಸಮಗ್ರ ನ್ಯೂಸ್: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರತಿಮಾ ಕೊಲೆ ಕೆಲಸದ ಕಾರಣಕ್ಕೆ ನಡೆದಿಲ್ಲ, ಆರೋಪಿ ಕಿರಣ್​​ ಅರೆಸ್ಟ್ ಆದಾಗ ಸುಳ್ಳು ಹೇಳಿದ್ದಾನೆ. ಕಿರಣ್​​ ಹಣಕ್ಕಾಗಿ ಕೊಲೆ ಮಾಡಿದ್ದು ಬಹಿರಂಗವಾಗಿದ್ದು, ವಿಚಾರಣೆಯ ವೇಳೆ ಅಸಲಿ ಸತ್ಯ ಬಯಲಾಗಿದೆ. ತಲಘಟ್ಟಪುರ ಇನ್ಸ್​ಪೆಕ್ಟರ್​​​​​​ ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆದಿದೆ. ಆರೋಪಿ ಕೊಲೆ ಬಳಿಕ ಮನೆಯಲ್ಲಿ ಹಣ, ಒಡವೆ ದೋಚಿದ್ದಾನೆ. ಪ್ರತಿಮಾ ಮನೆಯಲ್ಲಿದ್ದ 5 ಲಕ್ಷ ಹಣವನ್ನೂ ಹಾಗೂ ಪ್ರತಿಮಾ

ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ| ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ Read More »

ಮಂಗಳೂರು: ಗ್ರಾಹಕರ ಪರ ಆದೇಶ ಪಾಲಿಸದ ಐವರು ಬಿಲ್ಡರ್ ಗಳಿಗೆ ಜೈಲುಶಿಕ್ಷೆ

ಸಮಗ್ರ ನ್ಯೂಸ್: ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದ ಐವರು ಬಿಲ್ಡರ್‌ಗಳು ತಲಾ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು ತಲಾ ₹ 1 ಲಕ್ಷ ದಂಡ ಪಾವತಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ಮಾಡಿದೆ. ಮಂಗಳೂರು ನಗರದ ಮಾರಿಯನ್ ಇನ್ಫ್ರಾಸ್ಟ್ರಕ್ಚರ್ಸ್‌ ಸಂಸ್ಥೆಯ ಪಾಲುದಾರರಾಗಿರುವ ಉಜ್ವಲ ಡಿಸೋಜ ಮತ್ತು ನವೀನ್ ಕಾರ್ಡೋಜ ಹಾಗೂ ಅವರೊಂದಿಗೆ ಅಭಿವೃದ್ಧಿ ಪಾಲುದಾರಾರಾಗಿರುವ ವಿಲಿಯಂ ಸಲ್ದಾನ, ಗಾಯತ್ರಿ ಪೈ ಬಿ., ಮತ್ತು ಲ್ಯೂಸಿ ಸಲ್ದಾನ

ಮಂಗಳೂರು: ಗ್ರಾಹಕರ ಪರ ಆದೇಶ ಪಾಲಿಸದ ಐವರು ಬಿಲ್ಡರ್ ಗಳಿಗೆ ಜೈಲುಶಿಕ್ಷೆ Read More »

ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌| ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್

ಸಮಗ್ರ ನ್ಯೂಸ್:ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಗೆಲುವು ಸಾಧಿಸುವ ಮೂಲಕ ಭಾರತದ ಪ್ರಖ್ಯಾತ ಬಿಲಿಯರ್ಡ್ಸ್ ಹಾಗೂ ಸ್ನೂಕರ್‌ ಆಟಗಾರ ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸೌರವ್ ಕೊಥಾರಿಯನ್ನು ಸೋಲಿಸುವ ಮೂಲಕ ಬೆಂಗಳೂರಿನ ಪಂಕಜ್ ಆಡ್ವಾಣಿ ಈ ದಾಖಲೆಯನ್ನು ನಿರ್ಮಿಸಿದರು. ಪಂಕಜ್‌ ಆಡ್ವಾಣಿ 1000-416 ರಿಂದ ಸೌರವ್ ಕೊಥಾರಿಯನ್ನು ಸೋಲಿಸಿದರು. ಅವರು 2005 ರಲ್ಲಿ ಈ ಸ್ಪರ್ಧೆಯಲ್ಲಿ ತಮ್ಮ ಮೊದಲ ವಿಶ್ವ ಪ್ರಶಸ್ತಿಯನ್ನು ಗೆದ್ದಿದ್ದರು.

ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌| ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್ Read More »

ಜಾತಿ ಗಣತಿ ವಿಚಾರ|ಕಾಂಗ್ರೆಸ್‌ನಲ್ಲಿಯೇ ಪರ-ವಿರೋಧ

ಜಾತಿ ಗಣತಿ ತಿರಸ್ಕರಿಸುವ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಸಹಿ ಹಾಕುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದ್ದು, ಈ ಮೂಲಕ ಕಾಂಗ್ರೆಸ್‌ನಲ್ಲಿಯೇ ಜಾತಿ ಗಣತಿ ಕುರಿತು ಪರ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದೆ. ಒಕ್ಕಲಿಗರ ಮನವಿ ಪತ್ರಕ್ಕೆ ಸಹಿ ಮಾಡುವ ಮೂಲಕ ಕಾಂತರಾಜ ಆಯೋಗ ವರದಿಗೆ ಡಿಸಿಎಂ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿ ಜಾರಿಗೆ ಸಚಿವರಾದ ಪರಮೇಶ್ವ‌ರ್, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಆಗ್ರಹಿಸಿದ್ದರೆ, ಒಕ್ಕಲಿಗ ಮತ್ತು ಲಿಂಗಾಯಿತ ಸಮಾಜದ ಸಚಿವರು ವಿರೋಧ

ಜಾತಿ ಗಣತಿ ವಿಚಾರ|ಕಾಂಗ್ರೆಸ್‌ನಲ್ಲಿಯೇ ಪರ-ವಿರೋಧ Read More »