November 2023

ಮಥುರಾದಲ್ಲಿ ಸಂತ ಮೀರಾ ಬಾಯಿ ಜನ್ಮೋತ್ಸವ/ ನವೆಂಬರ್ 23ಕ್ಕೆ ಕೃಷ್ಣ ಜನ್ಮಭೂಮಿಗೆ ಮೋದಿ ಭೇಟಿ

ಸಮಗ್ರ ನ್ಯೂಸ್: ಶ್ರೀಕೃಷ್ಣನ ಪರಮ ಭಕ್ತೆ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆ ಪ್ರಯುಕ್ತ, ಸಂತ ಮೀರಾಬಾಯಿ ಜನ್ಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 23ರಂದು ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಭೂಮಿಗೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಮೂಲಕ ಶ್ರೀ ಕೃಷ್ಣ ಜನ್ಮಭೂಮಿಗೆ ಭೇಟಿ ನೀಡಿದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಪ್ರಧಾನಿ‌ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಕೃಷ್ಣ ಜನ್ಮಭೂಮಿಯನ್ನು ಹೂವು […]

ಮಥುರಾದಲ್ಲಿ ಸಂತ ಮೀರಾ ಬಾಯಿ ಜನ್ಮೋತ್ಸವ/ ನವೆಂಬರ್ 23ಕ್ಕೆ ಕೃಷ್ಣ ಜನ್ಮಭೂಮಿಗೆ ಮೋದಿ ಭೇಟಿ Read More »

ಐಸಿಸಿ ಏಕದಿನ ಶ್ರೇಯಾಂಕ/ ಭಾರತದ್ದೇ ಪಾರುಪತ್ಯ

ಸಮಗ್ರ ನ್ಯೂಸ್: ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಎಲ್ಲಾ ವಿಭಾಗಗಳಲ್ಲೂ ಭಾರತದ ಆಟಗಾರರು ಪಾರುಪತ್ಯ ಮೆರೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಶುಭ್‍ಮನ್ ಗಿಲ್ ವಿಶ್ವಕಪ್ ಫೈನಲ್‍ನಲ್ಲಿ ವಿಫಲಗೊಂಡರೂ ತನ್ನ ಅಗ್ರಸ್ಥಾನ ಉಳಿಸಿಕೊಳ್ಳಲು ಸಫಲರಾಗಿದ್ದಾರೆ, ಆದರೆ ಈ ಬಾರಿ ರೇಟಿಂಗ್ ಅಂಕದಲ್ಲಿ ಕುಸಿತ ಕಂಡಿದ್ದಾರೆ. ವಿಶ್ವಕಪ್‍ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ ಮತ್ತು ರೋಹಿತ್ ಶರ್ಮಾ 769 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿಶ್ವಕಪ್‍ನಲ್ಲಿ ವೈಫಲ್ಯ ಕಂಡ

ಐಸಿಸಿ ಏಕದಿನ ಶ್ರೇಯಾಂಕ/ ಭಾರತದ್ದೇ ಪಾರುಪತ್ಯ Read More »

ವಿಶ್ವಕಪ್ ಸೋಲಿನ ಆಘಾತ/ ಟಿ-20ಗೆ ವಿದಾಯ ಹೇಳುತ್ತಾರಾ ರೋಹಿತ್?

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಸೋಲಿನ ನೋವಿನಿಂದ ಕ್ರಿಕೆಟ್ ಅಭಿಮಾನಿಗಳು ಹೊರಬರುವ ಮುನ್ನವೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಂದಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‍ಗೆ ವಿದಾಯ ಹೇಳಲಿದ್ದಾರೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಈ ನಿರ್ಧಾರವನ್ನು ಏಕದಿನ ವಿಶ್ವಕಪ್‍ಗೂ ಮೊದಲೇ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್ಕರ್ ಜೊತೆ ಮಾತನಾಡಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ಒಂದು ವರ್ಷದಿಂದ ಭಾರತ ತಂಡದ ಪರವಾಗಿ ಯಾವುದೇ ಟಿ-20 ಪಂದ್ಯಗಳಲ್ಲಿ

ವಿಶ್ವಕಪ್ ಸೋಲಿನ ಆಘಾತ/ ಟಿ-20ಗೆ ವಿದಾಯ ಹೇಳುತ್ತಾರಾ ರೋಹಿತ್? Read More »

ಉತ್ತರಾಖಂಡ: ಕಾರ್ಮಿಕರು ಸಿಲುಕಿದ ಸುರಂಗ ಪ್ರವೇಶಿಸಿದ NDRF

ಸಮಗ್ರ ನ್ಯೂಸ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯ 21 ಸದಸ್ಯರ ತಂಡವು ಆಮ್ಲಜನಕ ಸಿಲಿಂಡರ್ ಮತ್ತು ಸ್ಟ್ರೆಚರ್ ಗಳೊಂದಿಗೆ ಕುಸಿದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗವನ್ನು ಪ್ರವೇಶಿದೆ ಎಂದು ರಾಷ್ಟ್ರೀಯ ಮಾಧ್ಯಮ ಇಂಡಿಯಾ ಟುಡೇ ವರದಿ ಮಾಡಿದೆ. ಇಂದು ಮುಂಜಾನೆ ಪೈಪ್ ಲೈನ್ ಕೊರೆಯಲು ಕೆಲವು ಲೋಹದ ಸರಳುಗಳು ಅಡ್ಡಿಯಾದ ಕಾರಣ ವಿಶೇಷ ಬ್ಲೇಡ್ನೊಂದಿಗೆ ಕೋನ ಕಟ್ಟರ್ ಅನ್ನು ರಕ್ಷಣಾ ತಂಡದ ಸದಸ್ಯರು ಒಳಗೆ ಕಳುಹಿಸಿದ್ದಾರೆ. ಕಬ್ಬಿಣದ ರಚನೆಯ ಅಡಚಣೆಯನ್ನು ರಕ್ಷಣಾ ಸಂಸ್ಥೆಗಳು ಯಶಸ್ವಿಯಾಗಿ ತೆರವುಗೊಳಿಸಿದೆ.

ಉತ್ತರಾಖಂಡ: ಕಾರ್ಮಿಕರು ಸಿಲುಕಿದ ಸುರಂಗ ಪ್ರವೇಶಿಸಿದ NDRF Read More »

ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿ/ ಮರು ಪರೀಕ್ಷೆ ದಿನಾಂಕ ಪ್ರಕಟ

ಸಮಗ್ರ ನ್ಯೂಸ್: ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿಗೆ ಮರು ಪರೀಕ್ಷೆಯನ್ನು ನಡೆಸುತ್ತಿದ್ದು, ಡಿಸೆಂಬರ್ 23, 2023, ಶನಿವಾರರಂದು ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಈ ಹಿಂದಿನ ಪರೀಕ್ಷೆಗೆ ಆರ್ಹತೆ ಪಡೆದವರು, ಮುಂದೆ ನಡೆಯಲಿರುವ ಪರೀಕ್ಷೆಗೂ ಆರ್ಹತೆ ಪಡೆಯಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ನೇಮಕಾತಿ/ ಮರು ಪರೀಕ್ಷೆ ದಿನಾಂಕ ಪ್ರಕಟ Read More »

ನವೆಂಬರ್ 25 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 25ರಂದು ಬೆಂಗಳೂರಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಲಿದ್ದಾರೆ. ಹೆಚ್‍ಎಎಲ್ ಆಯೋಜಿಸಿರುವ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಹೆಚ್‍ಎಎಲ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.

ನವೆಂಬರ್ 25 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ Read More »

ಬೆಂಗಳೂರಿಗೆ ಮತ್ಸ್ಯವಾಹಿನಿ/ ಮನೆ ಬಾಗಿಲಲ್ಲೇ ಸಿಗಲಿದೆ ತಾಜಾ ಮೀನು

ಸಮಗ್ರ ನ್ಯೂಸ್: ರಾಜಧಾನಿಯ ನಾಗರಿಕರ ಮನೆ ಬಾಗಿಲಿಗೆ ತಾಜಾ ಮೀನು ಒದಗಿಸುವ ಮತ್ತು ಮೀನುಗಾರಿಕೆ ಕ್ಷೇತ್ರದ ಮಾರುಕಟ್ಟೆಯ ಸಮಸ್ಯೆಗೆ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರ ಮತ್ಸ್ಯ ವಾಹಿನಿ ಯೋಜನೆ ಪ್ರಾರಂಭಿಸಿದೆ. 150 ಮತ್ಸ್ಯ ವಾಹಿನಿ ವಾಹನಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಇದು ಬೆಂಗಳೂರಿನ ಮನೆಗಳಿಗೆ ತಾಜಾ ಮೀನುಗಳನ್ನು ಒದಗಿಸಲಿದೆ. ವಿಧಾನಸೌಧದಲ್ಲಿ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಿದ್ದಾರೆ. 150 ಮತ್ಸ್ಯವಾಹಿನಿ ವಾಹನಗಳು ಬೆಂಗಳೂರು ನಗರದಾದ್ಯಂತ ಸಂಚರಿಸಲಿದ್ದು, ಬೆಳಗ್ಗಿನ

ಬೆಂಗಳೂರಿಗೆ ಮತ್ಸ್ಯವಾಹಿನಿ/ ಮನೆ ಬಾಗಿಲಲ್ಲೇ ಸಿಗಲಿದೆ ತಾಜಾ ಮೀನು Read More »

ಡಿಗ್ರೀ ಪಾಸ್​ ಆಗಿದ್ರೆ ಸಾಕು, ತಿಂಗಳಿಗೆ 63,000 ಸಂಬಳ ಕೊಡ್ತಾರೆ!

ಸಮಗ್ರ ಉದ್ಯೋಗ: Circle Based Officers ಹುದ್ದೆಗಳನ್ನು ಭರ್ತಿ ಮಾಡಲು State Bank of India ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 12-12-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮೊದಲು ಅದಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನ ತಿಳಿಸುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಹುದ್ದೆಗೆ ಸಂಬಂಧಿಸಿದಂತೆ ನೇರ ಸಂದರ್ಶನ ಅರ್ಜಿ ಹಾಕುವ ವಿಧಾನ, ದಿನಾಂಕ ಸೇರಿದಂತೆ ಎಲ್ಲಾ ವಿವರಗಳು ಇಲ್ಲಿದೆ. ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್

ಡಿಗ್ರೀ ಪಾಸ್​ ಆಗಿದ್ರೆ ಸಾಕು, ತಿಂಗಳಿಗೆ 63,000 ಸಂಬಳ ಕೊಡ್ತಾರೆ! Read More »

ಪೊನ್ನಂಪೇಟೆ: ಕಾರು ಬೈಕ್ ಡಿಕ್ಕಿ- ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಬೈಕ್ ಮತ್ತು ವ್ಯಾಗನರ್ ಕಾರ್ ನಡುವೆ ಮುಖಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಶಿ(22) ಕೋತೂರು ಅವರನ್ನು ಗೋಣಿಕೊಪ್ಪಲು ಸಮುದಾಯ ಅರೋಗ್ಯ ಕೇಂದ್ರಕ್ಕೆ ಸಾಗಿಸುವ ಸಂದರ್ಭ ಮಾರ್ಗಮದ್ಯೆ ಕೊನೆಯುಸಿರೆಳೆದಿದ್ದಾರೆ. ಪೊನ್ನಂಪೇಟೆ ಕಡೆಯಿಂದ ಬಾಳಲೆ ಕಡೆಗೆ ಹೋಗುತ್ತಿದ ಬೈಕ್ ಹಾಗೂ ಬಾಳಲೆ ಕಡೆಯಿಂದ ಪೊನ್ನಂಪೇಟೆ ಕಡೆಗೆ ಹೋಗುತ್ತಿದ್ದ ಕಾರ್ ಅಳಮೇಂಗಡ ಬೋಸ್ ಮಂದಣ್ಣ ಎಂಬುವರಿಗೆ ಸೇರಿದ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಪೊನ್ನಂಪೇಟೆ: ಕಾರು ಬೈಕ್ ಡಿಕ್ಕಿ- ಬೈಕ್ ಸವಾರ ಸಾವು Read More »

ಕುಕ್ಕೆ ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜು ವಿದ್ಯಾರ್ಥಿನಿ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕಿ ಕಲ್ಪನಾ ಅವರು ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ. ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿರುವ ಕಲ್ಪನಾ ಅವರು ನ. 22 ರಿಂದ 28ರ ವರೆಗೆ ಕಾರವಾರದ ಕೂಡಿಬಾಗ್ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜು ವಿದ್ಯಾರ್ಥಿನಿ ರಾಷ್ಟ್ರೀಯ ಭಾವೈಕ್ಯತೆ ಶಿಬಿರಕ್ಕೆ ಆಯ್ಕೆ Read More »