Ad Widget .

ದೀಪಾವಳಿ ಕಥಾ ಸ್ಪರ್ಧೆ| ಮೆಚ್ಚುಗೆ ಪಡೆದ ಕಥೆ|’ಗೆಳೆತನ’

ಸಮಗ್ರ ನ್ಯೂಸ್: ಸಮಗ್ರ ಸಮಾಚಾರವು ದೀಪಾವಳಿ ವಿಶೇಷಾಂಕಕ್ಕೆ ಕಥಾ ಸ್ಪರ್ಧೆ ಆಯೋಜಿಸಿದ್ದು, ಈ ಸ್ಪರ್ಧೆಗೆ ಹಲವು ಕಥೆಗಳು ಬಂದಿವೆ. ಇವುಗಳಲ್ಲಿ ಮೂರು ಕಥೆಗಳು ಸಂಚಿಕೆಯಲ್ಲಿ ಪ್ರಕಟವಾಗಿದ್ದು, ಮೆಚ್ಚುಗೆ ಪಡೆದ ಉಳಿದ ಕಥೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಈ ಸರಣಿಯಲ್ಲಿ ಕಥೆಗಾರ್ತಿ ದೀಕ್ಷಿತಾ ಕೆ.ಆರ್. ಬರೆದ ‘ಗೆಳೆತನ’ ಶೀರ್ಷಿಕೆಯ ಕಥೆ ನಿಮಗಾಗಿ…

Ad Widget . Ad Widget .

ಕವನ ಅಪ್ಪ ಅಮ್ಮನ ಮುದ್ದಿನ ಏಕೈಕ ಮಗಳು ಕವನಳಿಗೆ ಚುಕ್ಕಿ ಎಂಬ ಗೆಳತಿ ಇದ್ದಳು ಚುಕ್ಕಿಯ ಅಪ್ಪ ಒಂದು ಕಂಪೆನಿಯ ಮ್ಯಾನೇಜರ್ ಆಗಿದ್ದರು. ಒಂದು ದಿನ ಅವರಿಗೆ ಪಕ್ಕದ ಊರಾದ ರಾಮಪುರಕ್ಕೆ ವರ್ಗಾವಣೆ ಆಯಿತು. ಹಾಗಾಗಿ ಅವರು ಅವರ ವಾಸ ಸ್ಥಳವನ್ನು ರಾಮಪುರಕ್ಕೆ ವರ್ಗಾಯಿಸುವುದು ಅನಿವಾರ್ಯವಾಯಿತು. ಈ ವಿಷಯ ತಿಳಿದ ಗೆಳತಿ ಚುಕ್ಕಿಗೆ ಬಹಳ ಆಘಾತವಾಯಿತು. ಈ ಊರು ಶಾಲೆ, ಮುಖ್ಯವಾಗಿ ಅವಳ ಗೆಳತಿಯನ್ನು ಬಿಟ್ಟು ಹೊಗಬೇಕೆಂಬುದು ಅವಳಿಗೆ ಬೇಸರ ಹಾಗೂ ನೋವನ್ನುಂಟು ಮಾಡಿತ್ತು.

Ad Widget . Ad Widget .

ಅವಳು ತಂದೆಯೊಡನೆ ಹೀಗೆ ಹೇಳಿದಳು…. ಅಪ್ಪ ನನಗೆ ಈ ಊರು, ಶಾಲೆ, ಮುಖ್ಯವಾಗಿ ನನ್ನ ಗೆಳತಿ ಕವನಳನ್ನು ಬಿಟ್ಟು ಬರಲು ಇಷ್ಟವಿಲ್ಲ. ಪ್ಲೀಸ್ ಅಪ್ಪ ಹೇಗಾದರು ಮಾಡಿ ಇದೇ ಊರಲ್ಲಿ ಇರುವ ಹಾಗೆ ಮಾಡಿ ಎಂದಳು. ಅದಕ್ಕೆ ಅವಳ ತಂದೆ “ಪುಟ್ಟ ಕಂಪೆನಿಯ ಕಡೆಯಿಂದ ನನಗೆ ವರ್ಗಾವಣೆಯಾಗಿದೆ. ಹಾಗಾಗಿ ನಾವು ಈ ಊರನ್ನು ಬಿಟ್ಟು ಹೋಗಲೇಬೇಕು ಎಂದರು. ತಂದೆಯ ಮಾತನ್ನು ಕೇಳಿದ ಚುಕ್ಕಿಗೆ ಬಹಳ ಬೇಸರವಾಯಿತು. ಮರುದಿನ ಅವಳು ಕವನಳ ಮನೆಗೆ ಬಂದು ಅವಳನ್ನಪ್ಪಿ “ಕವನ ನನ್ನ ತಂದೆಗೆ ರಾಮಪುರಕ್ಕೆ ವರ್ಗಾವಣೆ ಆಗಿದೆ ಹಾಗಾಗಿ ಇನ್ನೂ ಮೂರು ದಿನ ಬಿಟ್ಟು ರಾಮಪುರಕ್ಕೆ ಹೋಗಬೇಕಂತೆ ನನಗೆ ನಿನ್ನನ್ನು ಬಿಟ್ಟು ಹೋಗಲು ಇಷ್ಟವಿಲ್ಲ ಎಂದು ಹೇಳಿ ಅತ್ತುಬಿಟ್ಟಲು. ಕವನಳಿಗೆ ಗೆಳತಿ ಹೇಳಿದ ವಿಷಯ ಕೇಳಿ ಬಹಳ ಬೇಸರವಾಯಿತು. ಆದರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹೇಳಿದಳು. ಸ್ನೇಹ ನಾವಿಬ್ಬರೂ ದೂರ ಇದ್ದಷ್ಟು ನಮ್ಮ ಸ್ನೇಹ ಗಟ್ಟಿಯಾಗುತ್ತಾ ಹೋಗುತ್ತದೆ. ನಿನ್ನ ಅಪ್ಪನಿಗೆ ಪಕ್ಕದೂರಿಗೆ ತಾನೆ ವರ್ಗಾವಣೆಯಾಗಿರುವುದು ರಾಮಪುರ ಅದು ಏನೂ ಬಹಳ ದೂರವಿಲ್ಲ. ನಿನಗೆ ಬೇಕಾದಾಗ ನೀನು ನಿನ್ನ ತಂದೆ ತಾಯಿಯೊಡನೆ ಇಲ್ಲಿಗೆ ಬರಬಹುದು ಹಾಗೆ ನಾನು ಸಹ ಅಲ್ಲಿಗೆ ಬರಬಹುದು. ಅದಕ್ಕೆ ಯಾಕೆ ಇಷ್ಟೊಂದು ಬೇಸರ ಮಾಡುತ್ತೀಯಾ ಎಂದಳು. ” ಆದರೆ ಕವನ ನಮಗೆ ದಿನಾಲು ಬೇಟಿಯಾಗಳು ಆಗಲ್ಲ ಅದಲ್ಲದೆ ನನಗೆ ಈ ಶಾಲೆ, ಇಲ್ಲಿನ ಪರಿಸರ ಇವೆಲ್ಲವನ್ನು ಬಿಟ್ಟುಹೋಗಲು ಚೂರು ಇಷ್ಟವಿಲ್ಲ ಎಂದಳು.

ಅಷ್ಟರಲ್ಲಿ ಅಲ್ಲಿಗೆ ಚುಕ್ಕಿಯ ಅಮ್ಮ ಬಂದರು…
“ಕವನ ಕವನ ಚುಕ್ಕಿ ನಿಮ್ಮ ಮನೆಗೆ ಬಂದ್ಲಾ”
ಹಾಂ ಆಂಟಿ ಚುಕ್ಕಿ ಇದ್ದಾಳೆ ನಿಮಗೆ ಹೇಳಿ ಬಂದಿಲ್ವಾ ಅವಳು.
“ಇಲ್ಲ ಕವನ ಅವಳ ತಂದೆಗೆ ವರ್ಗಾವಣೆಯಾಗಿರುವ ವಿಷಯ ತಿಳಿದಾಗಿನಿಂದ ಮಂಕಾಗಿಬಿಟ್ಟಿದ್ದಾಳೆ. ಯವಾಗಲೂ ಲವಲವಿಕೆಯಿಂದ ಇರುವ ಹುಡುಗಿ ಹೀಗೆ ಮಂಕಾಗಿ ಬಿಟ್ಟರೆ ನಮಗೆ ಗಾಬರಿಯಾಗುವುದಿಲ್ಲವೇ. ನಿನ್ನೆ ತಂದೆಯೊಡನೆ ಹೇಳುತಿದ್ದುದನ್ನು ಕೇಳಿದ ಮೇಲೆ ನನಗೆ ಇನ್ನೂ ರಾಮಪುರಕ್ಕೆ ಹೋದ ಮೇಲೆ ಏನಾದರು ಹೆಚ್ಚು ಕಡಿಮೆಯಾದರೆ ಎಂದು ಭಯವಾಯಿತು. ಹಾಗಾಗಿ ಅವಳ ತಂದೆಯೊಡನೆ ಈ ವಿಷಯವಾಗಿ ಚರ್ಚಿಸಿದೆ. ಅವರು ಸಹ ಇದನ್ನೇ ಯೋಚಿಸುತಿದ್ದರು. ನನ್ನ ಮಾತನ್ನು ಕೇಳಿದ ಮೇಲೆ ನೋಡೋಣ ಏನಾದರು ವ್ಯವಸ್ಥೆ ಮಾಡುತ್ತೇನೆ ಎಂದರು. ಇವತ್ತು ಈ ವಿಷಯವಾಗಿ ಕಂಪೆನಿಯ ಮುಖ್ಯಸ್ಥರೊಡನೆ ಮಾತನಾಡಿದರಂತೆ. ಅವರು ತುಂಬಾ ಯೋಚಿಸಿ ಬೇರೆಯವರನ್ನು ಇವರ ಪರವಾಗಿ ವರ್ಗಾವಣೆ ಮಾಡಿಸಿದರು ಎಂದರು. ಕೋಣೆಯೊಳಗೆ ಆಳುತ್ತಾ ಕುಳಿತಿದ್ದ ಚುಕ್ಕಿ ಕೋಣೆಯಿಂದ ಹೊರಗೆ ಬಂದು “ನಿಜಾನ ನಾವು ಇಲ್ಲಿಯೇ ಇರಬಹುದಾ! ” ಎಂದು ಒಂದೇ ಉಸಿರಿಗೆ ಕೇಳಿದಳು. “ನಿಜಾ ಪುಟ್ಟಿ ನಾವು ಇಲ್ಲಿಯೇ ಇರಬಹುದು ಬೇರೆ ಊರಿಗೆ ಹೋಗುವುದಿಲ್ಲ ಎಂದರು.

ಕವನ ಮತ್ತು ಚುಕ್ಕಿಯ ಸಂತೋಷಕ್ಕೆ ಪಾರವೇ ಇರಲಿಲ್ಲ ಇಬ್ಬರು ಇನ್ನು ನಾವು ಒಟ್ಟಿಗೆ ಎಂದು ಕುಣಿದಾಡಿದರು.

ದೀಕ್ಷಿತಾ ಕೆ.ಆರ್.
8ನೇ ತರಗತಿ
ಶ್ರೀ ಶಾರದ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಸುಳ್ಯ

Leave a Comment

Your email address will not be published. Required fields are marked *