Ad Widget .

ವಾರಾಣಸಿ:ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೆ ತಾಯಿಯ ಶವದೊಂದಿಗೆ 1 ವರ್ಷ ಕಳೆದ ಇಬ್ಬರು ಯುವತಿಯರು!

ಸಮಗ್ರ ನ್ಯೂಸ್: ಯುವತಿಯರಿಬ್ಬರು ಕಳೆದ ಒಂದು ವರ್ಷದಿಂದ ತಾಯಿ ಮೃತದೇಹದೊಂದಿಗೆ ದಿನಗಳನ್ನು ದೂಡಿರುವ ಕರುಣಾಜನಕ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಕಳೆದ ಬುಧವಾರ (ನ. 22) ಲಂಕಾ ಪೊಲೀಸ್ ಠಾಣೆಯ ತಂಡವೊಂದು ಸ್ಥಳೀಯರ ಮಾಹಿತಿ ಮೇರೆಗೆ ಬಾಗಿಲು ಒಡೆದು ಮನೆಗೆ ನುಗ್ಗಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಪಲ್ಲವಿ (27) ಮತ್ತು ಆಕೆಯ ಸಹೋದರಿ ವೈಶ್ವಿಕಿ (18) ತಮ್ಮ ತಾಯಿ ಉಷಾ ತಿವಾರಿ (52)ಯ ಅಸ್ಥಿಪಂಜರವಾಗಿದ್ದ ಮೃತದೇಹದ ಜತೆ ಪತ್ತೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಆಕೆಯ ಅಂತ್ಯಸಂಸ್ಕಾರ ಮಾಡಲು ತಮ್ಮ ಬಳಿ ಹಣವಿಲ್ಲ ಎಂದು ಸಹೋದರಿಯರು ಪೊಲೀಸರಿಗೆ ತಿಳಿಸಿದ್ದಾರೆ.

Ad Widget . Ad Widget .

ಸಹೋದರಿಯರಿಬ್ಬರು ಮಾನಸಿಕವಾಗಿ ಅಸ್ಥಿರರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಾರಾಣಸಿಯ ಲಂಕಾದ ಮದೇರ್ವ ಚಿತ್ತೂಪುರ ಪ್ರದೇಶದಲ್ಲಿ ಕುಟುಂಬ ವಾಸಿಸುತ್ತಿದೆ. ಅವರ ತಂದೆ ಬಲ್ಲಿಯಾದಲ್ಲಿ ವಾಸಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ತಂದೆಯನ್ನು ಭೇಟಿ ಮಾಡಿಲ್ಲ ಎಂದು ಸಹೋದರಿಯರು ಹೇಳಿದ್ದಾರೆ. ಪದೇಪದೆ ಮನೆ ಬಾಗಿಲು ಬಡಿದರೂ ಯಾರೂ ತೆರೆಯುತ್ತಿಲ್ಲ ಎಂದು ಮಹಿಳೆಯ ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ, ಮನೆಯ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿತು. ಈ ವೇಳೆ ಒಂದು ಕೋಣೆಯಲ್ಲಿ ಮಹಿಳೆಯ ಅಸ್ಥಿಪಂಜರ ಮತ್ತು ಇನ್ನೊಂದು ಕೋಣೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಕುಳಿತಿದ್ದರು. ಈ ಎಲ್ಲ ದೃಶ್ಯಗಳನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಸಹ ಮಾಡಿಸಿದ್ದಾರೆ.

ದುರ್ವಾಸನೆಯ ನಡುವೆಯೂ ಮನೆಯಲ್ಲಿ ಹೇಗೆ ವಾಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ದೇಹವನ್ನು ಬಟ್ಟಯಿಂದ ಮುಚ್ಚಿ, ಟೆರೇಸ್ ಮೇಲೆ ಹೋಗುತ್ತಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪಲ್ಲವಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ವೈಶ್ವಿಕಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಹುಡುಗಿಯರು ಮನೆಯಿಂದ ಹೊರಗೆ ಮತ್ತು ಒಳಗೆ ಎಂದಿನಂತೆಯೇ ಓಡಾಡಿಕೊಂಡು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಅಸ್ಥಿಪಂಜರವನ್ನು ಸ್ಥಳಾಂತರಿಸಲಾಗಿದೆ ಎಂದು ಲಂಕಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕಾಂತ್ ಮಿಶ್ರಾ ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಆಯಾಮವನ್ನು ಅವರು ತಳ್ಳಿಹಾಕಿದ್ದಾರೆ.

Leave a Comment

Your email address will not be published. Required fields are marked *