ಸಮಗ್ರ ನ್ಯೂಸ್: ಸುಳ್ಯದ ಗಾಂಧಿನಗರ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟದ ಹಣ ನಿಗಮಕ್ಕೆ ನೀಡದೆ ವಂಚನೆ ಎಸಗಿದ್ದಾರೆಂದು ಆರೋಪಿಸಲಾದ ಪ್ರಕರಣ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ನ್ಯಾಯಾಲಯ ಶಿಕ್ಷೆ ನೀಡಿ ಆದೇಶಿಸಿರುವ ಘಟನೆ ವರದಿಯಾಗಿದೆ.
ಭಾರತೀಯ ದಂಡ ಸಂಹಿತೆ ಪ್ರಕರಣದಲ್ಲಿ ಕಲಂ 403, 409,420 ಜೊತೆಗೆ 34 ಆರೋಪಿಗಳಾದ ಸುಳ್ಯದ ಶರಶ್ಚಂದ್ರ ಮತ್ತು ಮಡಿಕೇರಿಯ ಇ.ಎನ್.ಕಾರ್ಯಪ್ಪರವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಎಂಬಲ್ಲಿರುವ ಮೀನು ಮಾರಾಟದ ಮಳಿಗೆಯ ಶಾಖೆಯಲ್ಲಿ ಶರಶ್ಚಂದ್ರ ಮೇಲ್ವಿಚಾರಕರಾಗಿಯೂ ಇ.ಎನ್ ಕಾರ್ಯಪ್ಪ ಸಹಾಯಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು.
ಇವರು 2023ರ ಎ.1ರಿಂದ ಆಗಸ್ಟ್ 18ರ ನಡುವೆ ಕೆ.ಎಫ್.ಡಿ.ಸಿ ಯ ಮ್ಯಾನೇಂಜಿಗ್ ಡೈರೆಕ್ಟರ್ ಆದ ವಿ.ಕೆ ಶೆಟ್ಟಿಯ ನಿಗಮದಿಂದ ಸರಬರಾಜು ಮಾಡಿದ ಮೀನನ್ನು ಮಾರಾಟ ಮಾಡಿ ಸಂಸ್ಥೆಗೆ ರೂ.4,14,868.79/- ನ್ನು ನಿಗಮಕ್ಕೆ ಪಾವತಿಸದೇ ದುರುಪಯೋಗ ಪಡಿಸಿ ಸ್ವಂತಕ್ಕೆ ಉಪಯೋಗಿಸಿ ನಿಗಮಕ್ಕೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವ ಕಾರಣ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಮೋಹನ್ ಬಾಬು ರವರು ಈ ಪ್ರಕರಣದಲ್ಲಿ ಆ ಇಬ್ಬರ ಅಪರಾಧ ಸಾಬೀತಾಗಿ ಸ್ವತ್ತಿನ ಅಪರಾಧಿಕ ದುರುಪಯೋಗ ದ್ರೋಹ ಅಡಿಯಲ್ಲಿನ ಅಪರಾಧಕ್ಕೆ 1 ವರ್ಷ ಸರಳ ಕಾರಾಗೃಹ ಶಿಕ್ಷೆ ಮತ್ತು ರೂ 5,000 ಹಾಗೂ ಪ್ರತಿನಿಧಿನಿಂದ ಅಪರಾಧಿಕ ನಂಬಿಕೆ ಅಡಿಯಲ್ಲಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಮತ್ತು 10,000 ದಂಡವನ್ನು 03.11.2023 ರಂದು ಶಿಕ್ಷೆ ನೀಡಿ ಆದೇಶ ಮಾಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ಪ್ರಕರಣವನ್ನು ನಡೆಸಿದ್ದರು.